ಮಕರ ಸಂಕ್ರಾಂತಿಯಂದು ಬಿಡಿಸಬಹುದಾದ ಸುಂದರ ರಂಗೋಲಿ ಚಿತ್ತಾರಗಳಿವು, ಈ ವಿನ್ಯಾಸಗಳ ಮೂಲಕ ಮನೆ ಅಲಂಕರಿಸಿ
Sankranthi Rangoli: ಮಕರ ಸಂಕ್ರಾಂತಿ ಹತ್ತಿರ ಬರುತ್ತಿದೆ. ಈ ಬಾರಿ ಹಬ್ಬಕ್ಕೆ ಸುಂದರ ರಂಗೋಲಿಗಳ ಮೂಲಕ ಮನೆ ಅಲಂಕರಿಸಬೇಕು ಎಂದುಕೊಂಡಿದ್ದೀರಾ, ಹಾಗಾದರೆ ಇಲ್ಲಿರುವ ರಂಗೋಲಿ ಡಿಸೈನ್‌ಗಳ ಮೇಲೆ ಗಮನ ಹರಿಸಿ. ಈ ಚಿತ್ತಾರಗಳು ಮಕರ ಸಂಕಾಂತ್ರಿ ಹಬ್ಬದಂದು ನಿಮ್ಮ ಮನೆಯ ಅಂದ ಹೆಚ್ಚಿಸೋದು ಸುಳ್ಳಲ್ಲ.
(1 / 10)
ಈ ವರ್ಷದ ಮಕರ ಸಂಕ್ರಾಂತಿಗೆ ವಿಶೇಷವಾಗಿ ಕಾಣುವ ಸುಂದರವಾದ ರಂಗೋಲಿ ಬಿಡಿಸಬೇಕು ಅಂದುಕೊಳ್ಳುತ್ತಿದ್ದೀರಾ, ಇಲ್ಲಿದೆ ನಿಮಗಾಗಿ ಒಂದಿಷ್ಟು ರಂಗೋಲಿ ಚಿತ್ತಾರಗಳು. ಇದನ್ನು ಮನೆ ಮುಂಬಾಗಿಲು, ದೇವರಕೋಣೆಯ ಮುಂದೆ ಬಿಡಿಸುವ ಮೂಲಕ ಹಬ್ಬವನ್ನು ವಿಶೇಷವನ್ನಾಗಿಸಬಹುದು.
(PC: Pinterest)(2 / 10)
ಸುಂದರವಾದ ನವಿಲೊಂದು ಗರಿಬಿಚ್ಚಿ ಕೂತಂತಿರುವ ಈ ಚಿತ್ತಾರವನ್ನು ನೀವು ಮಕರ ಸಂಕ್ರಾಂತಿಯಂದು ಬಿಡಿಸಬಹುದು. ಇದು ಸಂಕೀರ್ಣ ವಿನ್ಯಾಸ ಎನ್ನಿಸಿದರೂ ಒಮ್ಮೆ ಈ ರಂಗೋಲಿ ಬಿಡಿಸಿದ ಮೇಲೆ ನಿಮ್ಮ ಮನೆಯ ಅಂದ ಬದಲಾಗೋದು ಖಂಡಿತ.
(3 / 10)
ಈ ರಂಗೋಲಿ ಚಿತ್ತಾರ ಮಕರ ಸಂಕ್ರಾಂತಿ ಹಬ್ಬಕ್ಕೆ ಹೇಳಿ ಮಾಡಿಸಿದಂತಿದೆ. ಇದರಲ್ಲಿ ಎಳ್ಳು, ಬೆಲ್ಲ, ಅರಿಸಿನ, ಕುಂಕುಮದ ಬಟ್ಟಲು ಎಲ್ಲವೂ ಇದೆ. ಸರಳವಾಗಿ ಬಿಡಿಸಬಹುದಾದ ರಂಗೋಲಿ ಚಿತ್ತಾರವಿದು.
(4 / 10)
ಮನೆ ಮುಂದೆ ರಂಗಿನ ರಂಗೋಲಿ ಹಾಕಬೇಕು ಅಂತಿದ್ದರೆ ಈ ರಂಗೋಲಿ ಚಿತ್ತಾರವನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಇದು ಬೆಂಕಿಕಡ್ಡಿಯ ಸಹಾಯದಿಂದ ಮೂಡಿಸಬಹುದಾದ ಸುಂದರ ಚಿತ್ತಾರ. ನಾಲ್ಕೈದು ಬಣ್ಣಗಳಿಂದ ಈ ಸುಂದರ ರಂಗೋಲಿ ಚಿತ್ತಾರ ಮೂಡಿಸಬಹುದು.
(5 / 10)
ವರ್ಣರಂಜಿತ ನವಿಲು ಗರಿಗಳ ವಿನ್ಯಾಸದಂತೆ ಕಾಣಿಸುವ ಈ ರಂಗೋಲಿ ಮಕರ ಸಂಕ್ರಾಂತಿ ದಿನ ಮನೆ ಎದುರು ಹಾಕಲು ಚೆನ್ನಾಗಿರುತ್ತದೆ. ಈಗಿನಿಂದಲೇ ಈ ರಂಗೋಲಿ ಬಿಡಿಸಲು ಅಭ್ಯಾಸ ಮಾಡಿಕೊಳ್ಳಿ. ಇದನ್ನು ಬಿಡಿಸುವುದು ಕಷ್ಟವೇನಲ್ಲ. ಇದು ನಿಮ್ಮ ಮನೆಯ ಅಂದವನ್ನು ಇಮ್ಮಡಿಗೊಳಿಸುವುದು ಸುಳ್ಳಲ್ಲ.
(6 / 10)
ಬಾಗಿಲಿನ ಮುಂದೆ ವಿನ್ಯಾಸ ಮಾಡಲು ಹೇಳಿ ಮಾಡಿಸಿದ ವಿನ್ಯಾಸ ಇದಾಗಿದೆ. ನವಿಲಿನ ಚಿತ್ತಾರ ಮುಂದೆ ವೆಲ್‌ಕಮ್ ಎಂದು ಬರೆಯಲಾದ ಈ ವಿನ್ಯಾಸವನ್ನು ನೀವು ಮಕರ ಸಂಕ್ರಾಂತಿಯಂದು ಬಿಡಿಸಬಹುದು. ಇದು ಸರಳವಾಗಿ ಬಿಡಿಸಬಹುದಾದ ರಂಗೋಲಿ ಚಿತ್ತಾರವೂ ಹೌದು.
(7 / 10)
ಮಕರ ಸಂಕ್ರಾಂತಿ ಎಂದ ಮೇಲೆ ಕಬ್ಬು, ಪೊಂಗಲ್ ಮಡಿಕೆ ಇಲ್ಲ ಎಂದರೆ ಹೇಗೆ ಅಲ್ವಾ, ಈ ವರ್ಷ ಮಕರ ಸಂಕ್ರಾಂತಿ ದಿನ ನಿಮ್ಮ ಮುಂದೆ ಅಥವಾ ಅಂಗಳದಲ್ಲಿ ದೊಡ್ಡ ರಂಗೋಲಿ ಹಾಕಬೇಕು ಎಂದು ನೀವು ಆಸೆ ಪಡುತ್ತಿದ್ದರೆ ಈ ರಂಗೋಲಿ ವಿನ್ಯಾಸವನ್ನು ಆಯ್ಕೆ ಮಾಡಿಕೊಳ್ಳಿ.
(8 / 10)
ಮನೆಯ ಒಳಗೆ, ಟೇಬಲ್ ಮೇಲೂ ಕೂಡ ಹಾಕಬಹುದಾದ ಸುಂದರ ರಂಗೋಲಿ ಚಿತ್ತಾರವಿದು. ಇದನ್ನು ನೀವು ಆಫೀಸ್‌ನಲ್ಲೂ ಬಿಡಿಸಬಹುದು. ಸಖತ್ ಸಿಂಪಲ್ ಆಗಿರುವ ಈ ಡಿಸೈನ್ ಖಂಡಿತ ಎಲ್ಲರಿಗೂ ಇಷ್ಟವಾಗುತ್ತೆ.
(9 / 10)
ನವಿಲಿನ ನಡುವೆ ಪೊಂಗಲ್ ಮಡಿಕೆ ಇರುವ ರಂಗೋಲಿ ಚಿತ್ತಾರ ತುಂಬಾ ಸುಂದರವಾಗಿದ್ದು, ಅಷ್ಟೇ ಸರಳವಾಗಿದೆ. ಈ ರಂಗೋಲಿ ವಿನ್ಯಾಸವು ಪೊಂಗಲ್ ಅಥವಾ ಮಕರ ಸಂಕ್ರಾಂತಿಗೆ ಹೇಳಿ ಮಾಡಿಸಿದಂತಿದೆ.
ಇತರ ಗ್ಯಾಲರಿಗಳು