ಬೆಂಗಳೂರಲ್ಲಿ L2 ಎಂಪುರಾನ್‌ ಸಿನಿಮಾ ಪ್ರಚಾರದಲ್ಲಿ ಮಲಯಾಳಿ ಸ್ಟಾರ್ಸ್‌; ಮೋಹನ್ ಲಾಲ್, ಪೃಥ್ವಿರಾಜ್, ಟೊಬಿನೊ ಥಾಮಸ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೆಂಗಳೂರಲ್ಲಿ L2 ಎಂಪುರಾನ್‌ ಸಿನಿಮಾ ಪ್ರಚಾರದಲ್ಲಿ ಮಲಯಾಳಿ ಸ್ಟಾರ್ಸ್‌; ಮೋಹನ್ ಲಾಲ್, ಪೃಥ್ವಿರಾಜ್, ಟೊಬಿನೊ ಥಾಮಸ್

ಬೆಂಗಳೂರಲ್ಲಿ L2 ಎಂಪುರಾನ್‌ ಸಿನಿಮಾ ಪ್ರಚಾರದಲ್ಲಿ ಮಲಯಾಳಿ ಸ್ಟಾರ್ಸ್‌; ಮೋಹನ್ ಲಾಲ್, ಪೃಥ್ವಿರಾಜ್, ಟೊಬಿನೊ ಥಾಮಸ್

  • ಮಾಲಿವುಡ್ ಬಹುನಿರೀಕ್ಷಿತ ಸಿನಿಮಾ 'ಎಲ್ 2 ಎಂಪುರಾನ್' ಸಿನಿಮಾ ಇಂದು (ಮಾ. 27) ತೆರೆಗೆ ಬಂದಿದೆ. ಈ ಸಿನಿಮಾದ ಪ್ರಚಾರಾರ್ಥವಾಗಿ ಬೆಂಗಳೂರಿಗೆ ಆಗಮಿಸಿತ್ತು. ಒರಿಯಾನ್ ಮಾಲ್‌ನಲ್ಲಿ ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್, ಚಿತ್ರದ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್, ನಟಿ ಮಂಜು ವಾರಿಯರ್, ನಟ ಟೊವಿನೋ ಥಾಮಸ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿ ನಟಿಸಿರುವ 'ಎಲ್-2:ಎಂಪುರಾನ್' ಇಂದು (ಮಾ. 27) ಮಲಯಾಳಂ, ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ.
icon

(1 / 6)

ಲೂಸಿಫರ್ ಸೀಕ್ವೆಲ್ ಆಗಿರುವುದರಿಂದ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಪೃಥ್ವಿರಾಜ್ ಸುಕುಮಾರನ್ ಈ ಚಿತ್ರಕ್ಕೆ ಸ್ಯಾಂಡಲ್ವುಡ್ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಸಾಥ್ ನೀಡಿದೆ. ಕರ್ನಾಟಕದಾದ್ಯಂತ ಹೊಂಬಾಳೆ ಫಿಲಂಸ್ ಸಂಸ್ಥೆಯ ವಿಜಯ್ ಕಿರಗಂದೂರ್  'ಎಲ್-2:ಎಂಪುರಾನ್' ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.
icon

(2 / 6)

L2E: ಎಂಪುರಾನ್ ಚಿತ್ರಕ್ಕೆ ಕಥೆ ಮುರಳಿ ಗೋಪಿ ಬರೆದಿದ್ದಾರೆ, ದೀಪಕ್ ದೇವ್ ಸಂಗೀತ ಸಂಯೋಜಿಸಿದ್ದಾರೆ ಮತ್ತು ಸುಜಿತ್ ವಾಸುದೇವ್ ಅವರ ಛಾಯಾಗ್ರಹಣವಿದೆ. ಸುರೇಶ್ ಬಾಲಾಜೆ ಮತ್ತು ಜಾರ್ಜ್ ಪಯಸ್ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಮೋಹನ್ದಾಸ್ ಕಲಾ ನಿರ್ದೇಶಕರಾಗಿ ದುಡಿದ್ದಾರೆ.
icon

(3 / 6)

2019ರಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದ್ದ ಲೂಸಿಫರ್ ಚಿತ್ರಕ್ಕೆ ಪೃಥ್ವಿರಾಜ್ ಸುಕುಮಾರ್ ಆಕ್ಷನ್ ಕಟ್ ಹೇಳಿದ್ದರು. ಲೂಸಿಫರ್ ಪಾರ್ಟ್ 2 ಸಿನಿಮಾವನ್ನು ನಿರ್ಮಾಪಕ ಸುಭಾಸ್ಕರನ್‌ ಹಾಗೂ ಆಂಟೋನಿ ಪೆರುಂಬವೂರ್ ನಿರ್ಮಾಣ ಮಾಡಿದ್ದಾರೆ.
icon

(4 / 6)

ಈ ಚಿತ್ರದಲ್ಲಿ ಸ್ಟೀಫನ್ ನೆಡುಂಪಲ್ಲಿ ಪಾತ್ರದಲ್ಲಿ ಮೋಹನ್ ಲಾಲ್ ನಟಿಸಿದ್ದು, ನಿರ್ದೇಶನದ ಜೊತೆಗೆ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
icon

(5 / 6)

ಇಂದ್ರಜಿತ್ ಸುಕುಮಾರನ್, ಟೊವಿನೋ ಥಾಮಸ್, ಮಂಜು ವಾರಿಯರ್, ಸಾನಿಯಾ ಅಯ್ಯಪ್ಪನ್, ಸಾಯಿ ಕುಮಾರ್ ಮತ್ತು ಬೈಜು ಸಂತೋಷ್ ತಾರಾಬಳಗದಲ್ಲಿದ್ದಾರೆ.
icon

(6 / 6)

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು