Mandya Krishi Mela 2024: ಮಂಡ್ಯದ ವಿಸಿ ಫಾರಂನಲ್ಲಿ ಶುರುವಾಯ್ತು ಕೃಷಿ ಮೇಳ: ಬಗೆಬಗೆಯ ಭತ್ತ, ಹೊಸ ತಳಿಯ ಉತ್ಪನ್ನಗಳ ನೋಟ ಹೀಗಿದೆ
- Mandya Krishi mela 2024: ಸಮೃದ್ಧ ಬಾಳ್ವೆಗೆ ಸಮಗ್ರ ಕೃಷಿ ಎಂಬ ಧ್ಯೇಯ ವಾಕ್ಯವನ್ನೊಳಗೊಡಂತೆ 2024 ರ ಕೃಷಿ ಮೇಳವನ್ನು ಆಚರಿಸಲಾಗುತ್ತಿದೆ. ಮಂಡ್ಯದ ವಿಸಿ ಫಾರಂನಲ್ಲೂ ಮಂಗಳವಾರದಿಂದ ಎರಡು ದಿನಗಳ ಕೃಷಿ ಮೇಳ ಶುರುವಾಗಿದ್ದು, ಇದರ ನೋಟ ಹೀಗಿದೆ.
- Mandya Krishi mela 2024: ಸಮೃದ್ಧ ಬಾಳ್ವೆಗೆ ಸಮಗ್ರ ಕೃಷಿ ಎಂಬ ಧ್ಯೇಯ ವಾಕ್ಯವನ್ನೊಳಗೊಡಂತೆ 2024 ರ ಕೃಷಿ ಮೇಳವನ್ನು ಆಚರಿಸಲಾಗುತ್ತಿದೆ. ಮಂಡ್ಯದ ವಿಸಿ ಫಾರಂನಲ್ಲೂ ಮಂಗಳವಾರದಿಂದ ಎರಡು ದಿನಗಳ ಕೃಷಿ ಮೇಳ ಶುರುವಾಗಿದ್ದು, ಇದರ ನೋಟ ಹೀಗಿದೆ.
(1 / 8)
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಮಂಡ್ಯ ವಿ ಸಿ ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರ, ಕೃಷಿ ಮಹಾವಿದ್ಯಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ವಿಸಿ ಫಾರಂನಲ್ಲಿ ಆಯೋಜಿಸಿರುವ ಕೃಷಿ ಮೇಳಕ್ಕೆ ಬೆಂಗಳೂರು ಕೃಷಿ ವಿವಿಯ ಕುಲಪತಿ ಪ್ರೊ.ಎಸ್.ವಿ.ಸುರೇಶ್ ಚಾಲನೆ ನೀಡಿದರು.
(2 / 8)
ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ವಲಯದ ರೈತರಿಗಾಗಿ ಮಂಡ್ಯದ ವಿ.ಸಿ ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ನವೆಂಬರ್ 26 ಮತ್ತು 27ನೇ ರಂದು ಕೃಷಿ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಉದ್ಘಾಟನಗೆ ಆಗಮಿಸಿದ ಗಣ್ಯರನ್ನು ವಿಭಿನ್ನವಾಗಿ ವಿದ್ಯಾರ್ಥಿಗಳು ಬರ ಮಾಡಿಕೊಂಡರು,
(3 / 8)
3 ಜಿಲ್ಲೆಗಳ ಸ್ಥಳ ಆಧಾರಿತ ಕೃಷಿ ತಾಂತ್ರಿಕತೆಗಳ ಪ್ರಾತ್ಯಾಕ್ಷಿಕೆಗಳನ್ನು ಮೇಳದಲ್ಲಿ ಆಯೋಜಿಸಲಾಗಿದ್ದು, ಮೇಳದಲ್ಲಿ ಭತ್ತ ಕುಟ್ಟುವ ಮೂಲಕ ವಸ್ತು ಪ್ರದರ್ಶನಕ್ಕೆ ಕುಲಪತಿ ಡಾ.ಸುರೇಶ್ ಚಾಲನೆ ಕೊಟ್ಟರು.
(4 / 8)
ಕೃಷಿ ಮೇಳದಲ್ಲಿ ಪ್ರಮುಖ ಆಕರ್ಷಣೆಗಳಿದ್ದು, ಕೃಷಿ ವಿಶ್ವವಿದ್ಯಾನಿಲಯದಿಂದ ಬಿಡುಗಡೆ ಮಾಡಲಾಗಿರುವ ಮುಸುಕಿನ ಜೋಳದ ಅಭಿವೃದ್ಧಿ ತಳಿ, ಹಲಸಂದೆ ಕೆ ಬಿ ಸಿ -12, ಎಣ್ಣೆ ಕಾಳು ಸೂರ್ಯಕಾಂತಿ ಕೆ ವಿ ಎಸ್ ಹೆಚ್ -90 ಮತ್ತು ದೀರ್ಘವಾದ ಹಾಗೂ ಹೆಚ್ಚು ಬೆಳೆ ಕೊಡುವ ಪಿ ಎಲ್ ಬಿ - 342 ಮೇವಿನ ಬೆಳೆಯಾದ ನಾಲ್ಕು ಪ್ರಮುಖ ತಳಿಗಳನ್ನು ಅನಾವರಣಗೊಳಿಸಲಾಗಿದ್ದು, ಮೇಳದ ಮುಂಭಾಗದಲ್ಲಿ ನಿರ್ಮಿಸಿರುವ ನೀರಿನ ಒರತೆ ಗಮನ ಸೆಳೆಯುತ್ತಿದೆ,
(5 / 8)
ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗೆ ಶಿಫಾರಸ್ಸು ಮಾಡಲಾಗಿರುವ ಭತ್ತ, ರಾಗಿ ಮತ್ತು ಸಿರಿಧಾನ್ಯ, ಮುಸುಕಿನ ಜೋಳದಲ್ಲಿ ಹೈಬ್ರಿಡ್ ತಳಿ, ಅತ್ಯುತ್ತಮ ಇಳುವರಿ ಕೊಡುವ ಹಾಗೂ ಹೆಚ್ಚು ಸಕ್ಕರೆ ಅಂಶವಿರುವ ಕಬ್ಬಿನ ತಳಿಯಾದ ಬಾಹುಬಲಿ - 517, ಮೇವಿನ ಬೆಳೆ, ದ್ವಿದಳ ಧಾನ್ಯಗಳು, ಎಣ್ಣೆ ಕಾಳುಗಳು, ನೀರಾವರಿ ಪದ್ಧತಿ ಹಾಗೂ ಇನ್ನಿತರೆ ರೈತರಿಗೆ ಬೇಕಾದ ಮುಖ್ಯ ವಿಷಯಗಳ ಬಗ್ಗೆ ಪ್ರಾತ್ಯಾಕ್ಷಿಕೆಯನ್ನು ಏರ್ಪಡಿಸಲಾಗಿದೆ
(6 / 8)
ಭತ್ತದಲ್ಲಿ ಸುಧಾರಿತ ತಳಿಗಳು ಹಾಗೂ ಹೈಬ್ರಿಡ್‌ಗಳ ಪ್ರಾತ್ಯಕ್ಷಿಕೆ, ವಿವಿಧ ಬೇಸಾಯ ಪದ್ಧತಿ ತಾಕುಗಳು, ರೋಗ ಹಾಗೂ ಕೀಟ ನಿಯಂತ್ರಣ ಪ್ರಾತ್ಯಕ್ಷಿಕೆ ತಾಕುಗಳು, ಡ್ರಂ ಸೀಡರ್‌ನಿಂದ ಹಾಗೂ ಯಂತ್ರಜಾಲಿತ ನಾಟಿ ಪ್ರಾತ್ಯಕ್ಷಿಕೆ, ಹೈಬ್ರಿಡ್ ಭತ್ತದ ಬೀಜೋತ್ಪಾದನಾ ತಾಕುಗಳು ಹಾಗೂ ಹೊಸ ತಳಿಗಳು ಗಮನ ಸೆಳೆಯುತ್ತಿವೆ,
(7 / 8)
ನೀರು ನಿರ್ವಹಣಾ ತಂತ್ರಜ್ಞಾನದಡಿ ದೂರ ಸಂವೇದಿ ನೀರಾವರಿ ಪದ್ಧತಿ, ವಿವಿಧ ಬೆಳೆಗಳಲ್ಲಿ ನೀರು ಉಳಿತಾಯ ಪದ್ಧತಿ ಪ್ರಾತ್ಯಕ್ಷಿಕೆ, ಸ್ವಯಂ ಚಾಲಿತ ಹನಿ ನೀರಾವರಿ ಪದ್ಧತಿ ಪ್ರಾತ್ಯಕ್ಷಿಕೆಗಳಿದ್ದು, ಇದನ್ನು ವಿದ್ಯಾರ್ಥಿಗಳು ಕುತೂಹಲವಿಂದ ವೀಕ್ಷಿಸಿ ಮಾಹಿತಿ ಪಡೆಯುತ್ತಿದ್ದಾರೆ.
(8 / 8)
ಕೃಷಿ ಮೇಳದಲ್ಲಿ ಕೃಷಿ ಹಾಗೂ ಕೃಷಿ ಉಪಕರಣಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಮೇಳದಲ್ಲಿ ಒಟ್ಟು 200 ಮಳಿಗೆಗಳನ್ನು ತೆರೆಯಲಾಗಿದೆ. ಅದರಲ್ಲಿ ಬ್ಯಾಂಕ್ ವತಿಯಿಂದ ರೈತರಿಗೆ ಮಾಹಿತಿ ನೀಡಲಾಗುತ್ತದೆ. 25 ಸಂಶೋಧಕರು ವಿಶ್ವ ವಿದ್ಯಾನಿಲಯದ ವತಿಯಿಂದ ಒಟ್ಟು 20 ಮಳಿಗೆಗಳಲ್ಲಿ ರೈತರಿಗೆ ಮಾಹಿತಿ ನೀಡುತ್ತಾರೆ. ಜೊತೆಗೆ ಸ್ವಸಹಾಯ ಸಂಘ, ನರ್ಸರಿ, ಸೀಡ್ಸ್ ಕಂಪನಿ, ಸ್ವಂತ ಉದ್ಯಮ ಮಾಡುತ್ತಿರುವ ರೈತರು, ನೂತನ ಕೃಷಿ ಪರಿಕರಗಳು ಪ್ರದರ್ಶನ ಹಾಗೂ ಮಾರಾಟಕ್ಕಿವೆ.
ಇತರ ಗ್ಯಾಲರಿಗಳು