Ranganathittu: ಕೆಆರ್‌ಎಸ್‌ನಿಂದ ಭಾರೀ ನೀರು, ಕಾವೇರಿ ತೀರದ ರಂಗನತಿಟ್ಟು ಪಕ್ಷಿಧಾಮಕ್ಕೂ ನುಗ್ಗಿದ ನೀರು, ಪಕ್ಷಿಗಳಿಗೂ ಸಂಕಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ranganathittu: ಕೆಆರ್‌ಎಸ್‌ನಿಂದ ಭಾರೀ ನೀರು, ಕಾವೇರಿ ತೀರದ ರಂಗನತಿಟ್ಟು ಪಕ್ಷಿಧಾಮಕ್ಕೂ ನುಗ್ಗಿದ ನೀರು, ಪಕ್ಷಿಗಳಿಗೂ ಸಂಕಟ

Ranganathittu: ಕೆಆರ್‌ಎಸ್‌ನಿಂದ ಭಾರೀ ನೀರು, ಕಾವೇರಿ ತೀರದ ರಂಗನತಿಟ್ಟು ಪಕ್ಷಿಧಾಮಕ್ಕೂ ನುಗ್ಗಿದ ನೀರು, ಪಕ್ಷಿಗಳಿಗೂ ಸಂಕಟ

  • Mandya News ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮವು ಕಾವೇರಿ ನದಿ ನೀರಿನ ಪ್ರವಾಹದಿಂದ ತೊಂದರೆಗೆ ಒಳಗಾಗಿದ್ದು. ಪ್ರವಾಸಿಗರಿಗೆ ಬಂದ್‌ ಮಾಡಲಾಗಿದೆ.

ಶ್ರೀರಂಗಪಟ್ಟಣ ಕೆಆರ್‌ಎಸ್‌ ರಸ್ತೆಯಲ್ಲಿರುವ ರಂಗನತಿಟ್ಟು ಪಕ್ಷಿಧಾಮವು ಕಾವೇರಿ ನದಿ ನೀರಿನ ಹೆಚ್ಚಿನ ನೀರು ಹರಿಸುತ್ತಿರುವುದರಿಂದ ತೊಂದರೆಗೆ ಒಳಗಾಗಿದೆ.
icon

(1 / 7)

ಕಾವೇರಿ ನದಿ ಮೂಲಕ ಒಂದು ಲಕ್ಷ ಕ್ಯೂಸೆಕ್‌ ನೀರು ಹರಿಬಿಡುವ ಮುನ್ಸೂಚನೆಯಿದೆ. ಈಗಾಗಲೇ ಹೆಚ್ಚಿನ ನೀರು ಹರಿಬಿಡುತ್ತಿರುವುದರಿಂದ ಬೋಟಿಂಗ್‌ ಪಾಯಿಂಟ್‌ವರೆಗೂ ನೀರು ಹರಿಯುತ್ತಿದೆ.
icon

(2 / 7)

ಸಂಜೆ ನಂತರ ನೀರಿನ ಹೊರಹರಿವು ಹೆಚ್ಚಾಗಿದ್ದರಿಂದ ರಂಗನತಿಟ್ಟು ಪಕ್ಷಿಧಾಮದ ಕಚೇರಿ ಆವರಣಕ್ಕೂ ನೀರು ನುಗ್ಗಿತ್ತು.
icon

(3 / 7)

ರಂಗನತಿಟ್ಟು ಕಾವೇರಿ ನದಿ ತೀರದಲ್ಲಿದೆ. ರಂಗನತಿಟ್ಟಿಗೆ ಬರುವ ಪ್ರವಾಸಿಗರು ಕುಳಿತುಕೊಳ್ಳಲು ಮಾಡಿರುವ ವ್ಯವೆಸ್ಥೆ ಬಳಿಯೇ ಭಾರೀ ನೀರು ನುಗ್ಗಿದೆ.
icon

(4 / 7)

ರಂಗನತಿಟ್ಟಿನ ಒಳಕ್ಕೆ ನೀರು ನುಗ್ಗಿದ್ದು ಪ್ರವಾಸಿಗರು ವೀಕ್ಷಣಾ ಗೋಪುರಕ್ಕೆ ಹೋಗುವ ಮಾರ್ಗದಲ್ಲೂ ನೀರು ನಿಂತಿದೆ.
icon

(5 / 7)

ಕಾವೇರಿ ನದಿಗೆ ಇನ್ನೂ ಹೆಚ್ಚಿನ ನೀರು ಹರಿಸುವ ಸೂಚನೆ ಇರುವುದರಿಂದ ಇನ್ನೂ ಹೆಚ್ಚಿನ ನೀರು ರಂಗನತಿಟ್ಟು ಪಕ್ಷಿಧಾಮದ ಒಳಗೆ ನುಗ್ಗಿ ಪಕ್ಷಿಗಳಿಗೂ ತೊಂದರೆಯಾಗುವ ಆತಂಕವಿದೆ.
icon

(6 / 7)

ಈಗಾಗಲೇ ಬೋಟಿಂಗ್‌ ಅನ್ನು ಹದಿನೈದು ದಿನದ ಹಿಂದೆಯೇ ಬಂದ್‌ ಮಾಡಲಾಗಿದ್ದು. ಪ್ರವಾಸಿಗರ ಭೇಟಿಯನ್ನೂ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಹಕ್ಕಿಗಳು ಸಂತಾನಾಭಿವೃದ್ದಿ ನಂತರ ತಮ್ಮ ಪ್ರದೇಶಗಳಿಗೆ ಮರಳಿವೆ. ಸ್ಥಳೀಯ ಹಕ್ಕಿಗಳು ಮಾತ್ರ ಇಲ್ಲಿವೆ. 
icon

(7 / 7)

ಇತರ ಗ್ಯಾಲರಿಗಳು