KRS Dam: ತುಂಬುವ ಹಂತಕ್ಕೆ ಬಂದ ಕೆಆರ್‌ಎಸ್ ಜಲಾಶಯ, ಹೀಗಿದೆ ಜಲ ವೈಭವ
KRS Reservoir ಕೊಡಗಿನಲ್ಲಿ ಭಾರೀ ಮಳೆಯ( kodagu Rain) ಪರಿಣಾಮವಾಗಿ ಕೃಷ್ಣರಾಜ ಸಾಗರ( KRS Dam) ಅತಿ ಬೇಗನೇ ತುಂಬುವ ಹಂತಕ್ಕೆ ಬಂದಿದೆ. ಈಗಿನ ಜಲಾಶಯದ ನೋಟ ಹೀಗಿದೆ.
(1 / 8)
ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರಕ್ಕೆ ಜಲ ಕಳೆ ಬಂದಿದೆ. ಒಂದೇ ವಾರದ ಅಂತರದಲ್ಲಿ ಜಲಾಶಯಕ್ಕೆ ಗಣನೀಯ ನೀರು ಹರಿದು ಬಂದಿದೆ.
(2 / 8)
2024 ಜುಲೈ 21ರ ಭಾನುವಾರ ಬೆಳಿಗ್ಗೆ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟವು 122.70 ಅಡಿಗೆ ತಲುಪಿದ್ದು 69617 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
(3 / 8)
ಕೃಷ್ಣರಾಜಸಾಗರ ಜಲಾಶಯಕ್ಕೆ ಕೊಡಗಿನ ಹಾರಂಗಿ ಹಾಗೂ ಹಾಸನದ ಹೇಮಾವತಿ ಜಲಾಶಯದಿಂದ ನೀರು ಸಾಕಷ್ಟು ಪ್ರಮಾಣದಲ್ಲಿ ಹರಿದು ಬರುತ್ತಿದೆ.
(4 / 8)
ಕೃಷ್ಣರಾಜನಗರ ಸಾಗರದಲ್ಲಿ ನೀರಿನ ಮಟ್ಟವನ್ನು ಅಳೆಯುವ ಮಾಪಕವಿದು. ಎಲ್ಲಿ ನೀರಿನ ಪ್ರಮಾಣವನ್ನೂ ನಿಖರವಾಗಿ ತಿಳಿಯಬಹುದು
(5 / 8)
ಜಲಾಶಯದ ಹಿನ್ನೀರಿನ ಕಟ್ಟೆಯೂ ಅಲ್ಲಲ್ಲಿ ತುಂಬಿ ಹೋಗಿವೆ. ಅಷ್ಟರ ಮಟ್ಟಿಗೆ ಕೃಷ್ಣರಾಜಸಾಗರ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ.
(6 / 8)
ಕೃಷ್ಣರಾಜಸಾಗರ ಜಲಾಶಯವು ಬಹುತೇಕ ತುಂಬಿರುವುದರಿಂದ ಶನಿವಾರ ಸಂಜೆಯಿಂದಲೇ ನದಿ ಮೂಲಕ ನೀರನ್ನು ಹರಿಸಲಾಗುತ್ತಿದೆ.
(7 / 8)
ಭಾನುವಾರ ಬೆಳಿಗ್ಗೆ ನಂತರ ಕೆಆರ್‌ಎಸ್ ಜಲಾಶಯದಿಂದ ಕಾವೇರಿ ನದಿ ಮೂಲಕ ಹೊರ ಹರಿವಿನ ಪ್ರಮಾಣವನ್ನು ಐವತ್ತು ಸಾವಿರ ಕ್ಯೂಸೆಕ್‌ಗೆ ಏರಿಸಲಾಗಿದೆ. ಇದರಿಂದ ಹೆಚ್ಚಿನ ನೀರು ನದಿ ಮೂಲಕ ಹೋಗುತ್ತಿದೆ.
ಇತರ ಗ್ಯಾಲರಿಗಳು