ವಾರಾಂತ್ಯದ ಬಿಡುವು, ಬನ್ನಿ ಮಂಡ್ಯ ಜಿಲ್ಲೆಯ ಗಗನಚುಕ್ಕಿ ಜಲಪಾತೋತ್ಸವಕೆ, ನಾಳೆಯಿಂದ ಎರಡು ದಿನ ಹಬ್ಬದ ಸಡಗರ
- Mandya Tourism ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಗಗನಚುಕ್ಕಿ ಜಲಪಾತ ತಾಣದಲ್ಲಿ ಶನಿವಾರ ಹಾಗೂ ಭಾನುವಾರ ಎರಡು ದಿನಗಳ ಉತ್ಸವ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಹೇಗಿರಲಿದೆ ಜಲಪಾತೋತ್ಸವ. ಇಲ್ಲಿದೆ ಚಿತ್ರ ನೋಟ.
- Mandya Tourism ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಗಗನಚುಕ್ಕಿ ಜಲಪಾತ ತಾಣದಲ್ಲಿ ಶನಿವಾರ ಹಾಗೂ ಭಾನುವಾರ ಎರಡು ದಿನಗಳ ಉತ್ಸವ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಹೇಗಿರಲಿದೆ ಜಲಪಾತೋತ್ಸವ. ಇಲ್ಲಿದೆ ಚಿತ್ರ ನೋಟ.
(1 / 8)
ಮೈಸೂರು, ಚಾಮರಾಜನಗರ ಜಿಲ್ಲೆ ದಾಟಿಕೊಂಡು ಮತ್ತೆ ಮಂಡ್ಯ ಜಿಲ್ಲೆ ಪ್ರವೇಶಿಸುವ ಕಾವೇರಿ ನದಿ ಶಿವನಸಮುದ್ರ ಬಳಿ ರೂಪಿಸಿರುವ ದೃಶ್ಯ ವೈಭವವೇ ಗಗನಚುಕ್ಕಿ ಜಲಪಾತ.
(2 / 8)
ಮೇಲಿಂದ ಧುಮ್ಮುಕ್ಕಿ ಕಣಿವೆ ಕಡೆಗೆ ಬೀಳುವ ಕಾವೇರಿ ನದಿಯನ್ನು ಗಗನಚುಕ್ಕಿಯಾಗಿ ನೋಡುವ ಖುಷಿಯೇ ಬೇರೆ. ಈಗಲೂ ಸಹಸ್ರಾರು ಪ್ರವಾಸಿಗರು ಇಲ್ಲಿಗೆ ಆಗಮಿಸಿ ಕಣ್ತುಂಬಿಕೊಳ್ಳುತ್ತಾರೆ.
(3 / 8)
ಕೆಲ ವರ್ಷಗಳ ಬಿಡುವಿನ ಬಳಿಕ ಮಂಡ್ಯ ಜಿಲ್ಲೆಯಲ್ಲಿ ಗಗನಚುಕ್ಕಿ ಜಲಪಾತೋತ್ಸವ ಈ ವಾರಾಂತ್ಯದಲ್ಲಿ ಆಯೋಜನೆಗೊಂಡಿದೆ. ಪ್ರಕೃತ್ತಿ ದತ್ತವಾಗಿ ಚಲುವನ್ನು ಹೊಂದಿರುವ ಗಗನಚುಕ್ಕಿಗೆ ಜನರನ್ನು ಸೆಳೆಯಲು ವಿಜೃಂಭಣೆಯಿಂದ ಜಲಪಾತೋತ್ಸವ ಕಾರ್ಯಕ್ರಮವನ್ನು ಸೆಪ್ಟೆಂಬರ್ 14 ಹಾಗೂ 15 ರಂದು ಹಮ್ಮಿಕೊಳ್ಳಲಾಗಿದೆ.
(4 / 8)
ಎರಡು ದಿನಗಳ ಉತ್ಸವದಲ್ಲಿ ಬೆಳಕಿನ ವೈಭವ, ಸಾಂಸ್ಕೃತಿಕ ಕಾರ್ಯಕ್ರಮಗಳಮೋಜು ಮಸ್ತಿ ಉತ್ಸವದ ಮೆರಗನ್ನು ಹೆಚ್ಚಿಸಲಿದೆ.
(5 / 8)
ಶಿವನಸಮುದ್ರದಲ್ಲಿ ನಡೆಯುವ ಗಗನಚುಕ್ಕಿ ಜಲಪಾತೋತ್ಸವಕ್ಕೆ ಭರದ ಸಿದ್ದತೆಗಳು ನಡೆದಿವೆ. ಈ ಉತ್ಸವದ ಉಸ್ತುವಾರಿ ಹೊತ್ತಿರುವ ಮಾಜಿ ಸಚಿವ ಹಾಗೂ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಅವರು ಅಂತಿನ ಸಿದ್ದತೆಗಳನ್ನು ಪರಿಶೀಲಿಸಿದರು.
(6 / 8)
ಬೆಂಗಳೂರು- ಕನಕಪುರ-ಮಳವಳ್ಳಿ- ಕೊಳ್ಳೇಗಾಲ ಹೆದ್ದಾರಿಯಲ್ಲಿರುವ ಗಗನಚುಕ್ಕಿ ಜಲಪಾತ ವೀಕ್ಷಣೆಗೆ ಬಸ್‌ಗಳ ಸೌಲಭ್ಯಗಳನ್ನು ಪ್ರವಾಸಿಗರಿಗಾಗಿ ಒದಗಿಸಲಾಗುತ್ತಿದೆ. ಬೆಂಗಳೂರು, ಮಂಡ್ಯ, ಮೈಸೂರು, ಚಾಮರಾಜನಗರ ಭಾಗದಿಂದಲೂ ಪ್ರವಾಸಿಗರು ಬಂದು ಹೋಗಲು ವ್ಯವಸ್ಥೆ ಮಾಡಲಾಗಿದೆ.
(7 / 8)
ಶಿವನಸಮುದ್ರಕ್ಕೆ ಹೊಂದಿಕೊಂಡಂತೆ ಇರುವ ಗಗನಚುಕ್ಕಿ ಜಲಪಾತದ ಸ್ಥಳಕ್ಕೆ ಹೋಗುವ ಮಾರ್ಗದುದ್ದಕ್ಕೂ ಅಲಂಕಾರವನ್ನು ಮಾಡಲಾಗಿದ್ದು, ಹಬ್ಬದ ವಾತಾವರಣ ಕಂಡು ಬಂದಿದೆ.
ಇತರ ಗ್ಯಾಲರಿಗಳು