Mysugar: ಶುರುವಾಯಿತು ಮಂಡ್ಯದ ಮೈಶುಗರ್‌ ಕಬ್ಬು ಅರೆಯುವ ಕಾರ್ಯ, ಬಾಯ್ಲರ್‌ಗೆ ಸಚಿವ ಚಲುವರಾಯಸ್ವಾಮಿ ಪೂಜೆ photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mysugar: ಶುರುವಾಯಿತು ಮಂಡ್ಯದ ಮೈಶುಗರ್‌ ಕಬ್ಬು ಅರೆಯುವ ಕಾರ್ಯ, ಬಾಯ್ಲರ್‌ಗೆ ಸಚಿವ ಚಲುವರಾಯಸ್ವಾಮಿ ಪೂಜೆ Photos

Mysugar: ಶುರುವಾಯಿತು ಮಂಡ್ಯದ ಮೈಶುಗರ್‌ ಕಬ್ಬು ಅರೆಯುವ ಕಾರ್ಯ, ಬಾಯ್ಲರ್‌ಗೆ ಸಚಿವ ಚಲುವರಾಯಸ್ವಾಮಿ ಪೂಜೆ photos

  • Mandya News ಮಂಡ್ಯ ಭಾಗದ ರೈತರ ಜೀವನಾಡಿಯಾಗಿರುವ ಮೈಷುಗರ್ಸ್‌ ಸಕ್ಕರೆ ಕಾರ್ಖಾನೆಯ ಕಬ್ಬು ಅರೆಯುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಹೀಗಿತ್ತು ಆ ಕ್ಷಣಗಳು.

ಮೈ ಶುಗರ್ ಸಕ್ಕರೆ ಕಾರ್ಖಾನೆ  2024-25 ನೇ ಸಾಲಿನಲ್ಲಿ ಕಬ್ಬನ್ನು ಅರೆಯಲು ಸಜ್ಜಾಗಿದ್ದು  ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಬಾಯ್ಲರ್ ಗೆ ಪೂಜೆ ಸಲ್ಲಿಸಿ ಬಾಯ್ಲರ್ ಕಾರ್ಯನಿರ್ವಹಣೆಗಾಗಿ ಅಗ್ನಿ ಸಮರ್ಪಣೆ ಮಾಡಿದರು.
icon

(1 / 6)

 ಶಾಸಕ ರವಿಕುಮಾರ್, ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ, ಮೈ ಶುಗರ್ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್, ಜಿಲ್ಲಾಧಿಕಾರಿ ಡಾ: ಕುಮಾರ, ಅಪರ ಜಿಲ್ಲಾಧಿಕಾರಿ ಡಾ: ಹೆಚ್.ಎಲ್ ನಾಗರಾಜು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
icon

(2 / 6)

ಮೈಶುಗರ್ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಗೆ ಪೂಜೆ ಸಲ್ಲಿಸಿದ ನಂತರ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಪ್ರಕಾರ, ಸ್ಥಗಿತವಾಗಿದ್ದ ಮೈಶುಗರ್ ಕಾರ್ಖಾನೆಯನ್ನು ಪುನರ್ ಆರಂಭಗೊಳಿಸಲು ಸರ್ಕಾರದಿಂದ ಕಳೆದ ಸಾಲಿನಲ್ಲಿ 50 ಕೋಟಿ ರೂ ನೀಡಲಾಗಿದೆ̤ 2023-24 ನೇ ಸಾಲಿನಲ್ಲಿ 2,41,305 ಮೆ.ಟನ್ ಕಬ್ಬು ನುರಿಸಲಾಗಿರುತ್ತದೆ, ಹಾಗೂ ಕಬ್ಬು ಸರಬರಾಜು ಮಾಡಿದ ರೈತ-ಭಾಂದವರಿಗೆ ಸಂಪೂರ್ಣವಾಗಿ ಹಣವನ್ನು ಪಾವತಿಸಲಾಗಿದೆ.  
icon

(3 / 6)

ಈ ಬಾರಿ ಸರಿಯಾಗಿ ಮಳೆ ಬಾರದ ಕಾರಣ ಕಬ್ಬಿನ ಕೊರತೆ ಇರುತ್ತದೆ. ಆದರು ಸಹ ಸುಮಾರು 2,50,000 ಮೆ.ಟನ್ ಕಬ್ಬು ನುರಿಸುವ ಉತ್ತಮ ಗುರಿಯನ್ನು ಹೊಂದಲಾಗಿರುತ್ತದೆ. ಪ್ರಸ್ತುತ 1,90,000 ಮುರು ಕಬ್ಬು ಒಪ್ಪಿಗೆಯಾಗಿದ್ದು, ಉಳಿದ ಕಬ್ಬನ್ನು ನಾನ್-ಒಪ್ಪಿಗೆ ಮತ್ತು ಹೊರಜಿಲ್ಲೆಯ ಮೂಲಕ ಕಬ್ಬನ್ನು ನುರಿಸಲಾಗುವುದು ಎನ್ನುವುದು ಸಚಿವರ ವಿವರಣೆ,. 
icon

(4 / 6)

ಕಾರ್ಖಾನೆಯ ಲಾಭ, ನಷ್ಠದ ಆಧಾರದ ಮೇಲೆ ಸದ್ಯಕ್ಕೆ ಕಾರ್ಯನಿರ್ವಹಿಸುವುದು ಕಷ್ಟಕರ. ರೈತರ ಹಿತದೃಷ್ಟಿಯಿಂದ ಸಕ್ಕರೆ ಕಾರ್ಖಾನೆಯನ್ನು ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಕ್ಕರೆ ಕಾರ್ಖಾನೆ ಲಾಭಾದಯಕವಾಗಿ ನಡೆಯಲಿದೆ ಎಂಬ ನಂಬಿಕೆ ಇದೆ ಎನ್ನುತ್ತಾರೆ ಸಚಿವ ಚಲುವರಾಯಸ್ವಾಮಿ.
icon

(5 / 6)

ಸಕ್ಕರೆ ಕಾರ್ಖಾನೆ ಘಟಕ ಹಳೆಯದಾಗಿರುವುದರಿಂದ ಮೈಷುಗರ್‌ ಹೊಸ ಘಟಕ ಸ್ಥಾಪಿಸಲು ಈಗಾಗಲೇ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಆ ಯೋಜನೆ ಇನ್ನಷ್ಟೇ ಜಾರಿಯಾಗಬೇಕಿದೆ. 
icon

(6 / 6)

ಇತರ ಗ್ಯಾಲರಿಗಳು