Kannada School Love: ರಾಯಚೂರು ಅನು ಅಕ್ಕನ ಕನ್ನಡ ಪ್ರೀತಿ; ಕವಿ ಪು.ತಿ.ನ ಓದಿದ ಮೇಲುಕೋಟೆ ಶತಮಾನದ ಶಾಲೆಗೆ ಬಣ್ಣದ ಆಕರ್ಷಣೆ photos-mandya news raichur anu akka artist who paints for government schools changed melkote 100 year old school putina studied ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kannada School Love: ರಾಯಚೂರು ಅನು ಅಕ್ಕನ ಕನ್ನಡ ಪ್ರೀತಿ; ಕವಿ ಪು.ತಿ.ನ ಓದಿದ ಮೇಲುಕೋಟೆ ಶತಮಾನದ ಶಾಲೆಗೆ ಬಣ್ಣದ ಆಕರ್ಷಣೆ Photos

Kannada School Love: ರಾಯಚೂರು ಅನು ಅಕ್ಕನ ಕನ್ನಡ ಪ್ರೀತಿ; ಕವಿ ಪು.ತಿ.ನ ಓದಿದ ಮೇಲುಕೋಟೆ ಶತಮಾನದ ಶಾಲೆಗೆ ಬಣ್ಣದ ಆಕರ್ಷಣೆ photos

  • Kannada Love ಮನಸು ಮಾಡಿದರೆ ಏನಾದರೂ ಮಾಡಬಹುದು. ಇಂತಹ ಪ್ರಯತ್ನವನ್ನು ರಾಯಚೂರಿನ ಅನು ಅಕ್ಕ ಮತ್ತವರ ತಂಡ ಮಾಡುತ್ತಿದೆ. ಕನ್ನಡ ಶಾಲೆಗಳಿಗೆ ವಿಭಿನ್ನ ರೂಪ ನೀಡುತ್ತಿವೆ. ಮೇಲುಕೋಟೆಯಲ್ಲಿರುವ ಹಿರಿಯ ಸಾಹಿತಿ ಪು.ತಿ.ನರಸಿಂಹಾಚಾರ್‌ ಓದಿದ ಶಾಲೆಯ ಚಿತ್ರಣವನ್ನೇ ಈ ತಂಡ ಬದಲಿಸಿದೆ. ಅದರ ಚಿತ್ರನೋಟ ಇಲ್ಲಿದೆ. ಚಿತ್ರಗಳು: ಶಾಲಿನಿ ಸಿಂಹ, ಮೇಲುಕೋಟೆ

ಇವರೇ ಪುತಿನ. ಕನ್ನಡದ ಹಿರಿಯ ಸಾಹಿತಿಗಳು, ಮಂಡ್ಯ ಜಿಲ್ಲೆ ಮೇಲುಕೋಟೆ ಮೂಲದವರು. ತಮ್ಮ ವಿಭಿನ್ನ ಸಾಹಿತ್ಯದ ಮೂಲಕ ನಾಡಿನ ಮನೆ ಮಾತಾದವರು.,ಅವರು ಹುಟ್ಟೂರು ಮೇಲುಕೋಟೆಯಲ್ಲಿಯೇ ಶಿಕ್ಷಣ ಪಡೆದವರು.,
icon

(1 / 6)

ಇದು ಮೇಲುಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಶತಮಾನದ ಶಾಲೆ. ಇಲ್ಲಿನ ನಾಡಿನ ಖ್ಯಾತ ಕವಿ ಪು.ತಿ.ನ ಶಿಕ್ಷಣ ಆರಂಭಿಸಿದ್ದರು ಎನ್ನುವ ಕಾರಣಕ್ಕೆ ಈ ಶಾಲೆಗೆ ತನ್ನದೇ ಆದ ಮಹತ್ವವಿದೆ. ಈ ಶಾಲೆ ಈಗ ಹಸುರಿನ ಜತೆಗೆ ಕನ್ನಡ ಮಯವಾಗಿ ಮಾರ್ಪಟ್ಟಿದೆ.
icon

(2 / 6)

ಮೇಲುಕೋಟೆ ಸರ್ಕಾರಿ ಶಾಲೆಯಲ್ಲಿ ಪುತಿನ, ಚಲುವನಾರಾಯಣಸ್ವಾಮಿ ಹಾಗೂ ಬೆಟ್ಟದ ದೇಗುಲ. ಜಿಂಕೆ, ಪಂಗೋಲಿನ್‌, ಇಡೀ ಶಾಲೆ ಗೋಡೆಗಳ ಚಿತ್ರಣವನ್ನೇ ಬದಲು ಮಾಡಿದೆ ಅನು ಅಕ್ಕ ಅವರ ತಂಡ.
icon

(3 / 6)

ಈ ಶಾಲೆಯ ಮುಖ್ಯ ಶಿಕ್ಷಕರಾದ ಸಂತಾನರಾಮನ್  ಅವರ ಕೋರಿಕೆ ಮೇರೆಗೆ ಇಲ್ಲಿಗೆ ಆಗಮಿಸಿದ ಅನು ಅಕ್ಕ ಮತ್ತು ತಂಡ ಕೆಲವು ದಿನಗಳಿಂದ ಇಲ್ಲಿಯೇ ಇದ್ದು ಇಡೀ ಶಾಲೆಯ ಅಂದವನ್ನು ಹೆಚ್ಚಿಸಿದ್ದಾರೆ.
icon

(4 / 6)

ಮೇಲುಕೋಟೆಯ ಆಕರ್ಷಕ ಪರಿಸರದಲ್ಲಿರುವ ಬಹುತೇಕ ಎಲ್ಲ ಸೌಲಭ್ಯಗಳನ್ನೂ ಹೊಂದಿರುವ ಶತಮಾನದ ಶಾಲೆ ನಾಡಿಗೆ ಹಲವು ಗಣ್ಯರ ಕೊಡುಗೆ ನೀಡಿದೆ ಇಂತಹ ಶತಮಾನದ ಶಾಲೆಯನ್ನು ಉಳಿಸಿಕೊಳ್ಳಲು ಮುಖ್ಯಶಿಕ್ಷಕರು,ಶಿಕ್ಷಕರು ಶ್ರಮಿಸುತ್ತಿದ್ದಾರೆ ಶಾಲೆಯ ಹಿರಿಯವಿದ್ಯಾರ್ಥಿಗಳು ಶಾಲಾ ಬಲವರ್ಧನೆಗೆ ಮುಂದಾಗಿ ವಿದ್ಯಾಥರ್ಿಗಳ ಸಂಖ್ಯೆ ಹೆಚ್ಚಿಸಿ ಐತಿಹಾಸಿಕ ಶಾಲೆ ಉಳಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಪ್ರೀತಿಯಿಂದಲೇ ಅನು ಅಕ್ಕ ಹೇಳುತ್ತಾರೆ.
icon

(5 / 6)

ಇವರೇ ಅನು ಅಕ್ಕ..ರಾಯಚೂರು ಜಿಲ್ಲೆ ಸಿಂದನೂರು ತಾಲ್ಲೂಕು ಚಿಕ್ಕಬೆರಗಿ ಗ್ರಾಮದ ಯುವತಿ ಅನುಅಕ್ಕ . ಸರ್ಕಾರಿ ಶಾಲೆ ಉಳಿಸಿ ಆಂದೋಲನ ಆರಂಭಿಸಿ ಸುಮಾರು 135 ಶಾಲೆಗಳಿಗೆ ಬಣ್ಣದ ರೂಪ ನೀಡಿದವರು. ವರ್ಣಚಿತ್ರ ಬರೆಸುವ ಕೆಲಮಾಡಿದ್ದಾರೆ ಬಡಕುಟುಂಬದ ಹೆಣ್ಣುಮಗಳು ನಿಸ್ವಾರ್ಥಸೇವೆಗೆ ಮುಂದಾಗಿ ಮೊದಲು ಸಾಲಮಾಡಿ ಸರ್ಕಾರಿ ಶಾಲೆಗಳಿಗೆ ಪೈಂಟಿಂಗ್ ಮಾಡಿದರು. ಸಾಲಜಾಸ್ತಿಯಾದ ಕಾರಣ ಕಾಲಕ್ರಮೇಣ ಹಿರಿಯ ವಿದ್ಯಾರ್ಥಿಗಳು ದಾನಿಗಳು ಬಣ್ಣಕೊಡಿಸಿದರೆ ಉಚಿತವಾಗಿ ಶಾಲೆಗೆ ಅಂದಹೆಚ್ಚಿಸುವ ಕಾರ್ಯಮಾಡುತ್ತಿದ್ದಾರೆ. ಮಂಡ್ಯಜಿಲ್ಲೆಯಲ್ಲಿ ಮೇಲುಕೋಟೆ 6ನೇ ಶಾಲೆಯಾಗಿ ಅವರು ಬಣ್ಣದ ರೂಪ ನೀಡಿದ್ದಾರೆ.
icon

(6 / 6)

ಇತರ ಗ್ಯಾಲರಿಗಳು