Mangalore Bangalore Highway: ಮಂಗಳೂರು- ಬೆಂಗಳೂರು ಹೆದ್ದಾರಿ ಬಿ.ಸಿ.ರೋಡ್ ಅಡ್ಡಹೊಳೆ ಚತುಷ್ಪಥ: ಹೇಗಿದೆ ಕೆಲಸದ ವೇಗ? Photos
- ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ಬಿಸಿರೋಡಿನಲ್ಲಿ ಚತುಷ್ಪಥ, ಮೇಲ್ಸೇತುವೆ ಕಾಮಗಾರಿ ನಿಧಾನದಿಂದ ಸಾಗಿದೆ. ಜನರಿಗೆ ತೊಂದರೆಯಾಗುತ್ತಿದ್ದರೂ ಬೇಗನೇ ಕೆಲಸ ಮುಗಿಯಬಹುದು ಎಂದು ಕಾಯುತ್ತಿದ್ದಾರೆ. ಯೋಜನೆ ಸ್ಥಿತಿಗತಿಯ ಚಿತ್ರ ನೋಟ ಇಲ್ಲಿದೆ.ಚಿತ್ರ-ವರದಿ: ಹರೀಶ ಮಾಂಬಾಡಿ, ಮಂಗಳೂರು
- ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ಬಿಸಿರೋಡಿನಲ್ಲಿ ಚತುಷ್ಪಥ, ಮೇಲ್ಸೇತುವೆ ಕಾಮಗಾರಿ ನಿಧಾನದಿಂದ ಸಾಗಿದೆ. ಜನರಿಗೆ ತೊಂದರೆಯಾಗುತ್ತಿದ್ದರೂ ಬೇಗನೇ ಕೆಲಸ ಮುಗಿಯಬಹುದು ಎಂದು ಕಾಯುತ್ತಿದ್ದಾರೆ. ಯೋಜನೆ ಸ್ಥಿತಿಗತಿಯ ಚಿತ್ರ ನೋಟ ಇಲ್ಲಿದೆ.ಚಿತ್ರ-ವರದಿ: ಹರೀಶ ಮಾಂಬಾಡಿ, ಮಂಗಳೂರು
(1 / 6)
ಮಂಗಳೂರು ಬೆಂಗಳೂರು ಸಂಪರ್ಕ ಹೆದ್ದಾರಿಯಲ್ಲಿ ಪ್ರಮುಖ ಭಾಗ ಬಿ.ಸಿ.ರೋಡ್ ನಿಂದ ಶಿರಾಡಿ ಘಾಟಿಯಾಗಿ ಅಡ್ಡಹೊಳೆ ತಲುಪುವ ಜಾಗ. ಈ ರಸ್ತೆ ಈಗ ಚತುಷ್ಪಥವಾಗಿ ಬದಲಾಗುತ್ತಿದ್ದು, ಕಾಮಗಾರಿಗೆ ವೇಗ ದೊರಕಿದೆ. ವಿಶೇಷವಾಗಿ ಬಿ.ಸಿ.ರೋಡ್ ನಿಂದ ಮಾಣಿವರೆಗಿನ ಕಾಮಗಾರಿಯ ನೋಟವಿದು.
(2 / 6)
ಪಾಣೆಮಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚು ಅಗಲವಾದ 386 ಮೀ. ಉದ್ದದ ಸೇತುವೆ ಏಪ್ರಿಲ್ ಅಂತ್ಯದ ವೇಳೆ ಅಥವಾ ಮೇ ಮೊದಲ ವಾರ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳ್ಳಲಿದೆ. ಈ ಸೇತುವೆ 13.5 ಮೀಟರ್ ಅಗಲ, ನದಿಯಿಂದ ಸುಮಾರು ೧೬ ಮೀ. ಎತ್ತರದಲ್ಲಿ ನಿರ್ಮಾಣವಾಗಿದೆ.
(3 / 6)
ಇದೇ ವೇಗದಲ್ಲಿ ಕೆಲಸ ಸಾಗಿದರೆ, ಈ ಮಳೆಗಾಲವೊಂದು ಕಳೆದು ಮುಂದಿನ ವರ್ಷ ಇದೇ ಹೊತ್ತಿಗೆ ಬಿ.ಸಿ.ರೋಡ್ ನಿಂದ ಮಾಣಿವರೆಗೆ ರಸ್ತೆಯಲ್ಲಿ ಸಂಚಾರದ ದೊಡ್ಡ ಸಂಕಟಕ್ಕೆ ಮುಕ್ತಿ ದೊರಕಬಹುದು.
(4 / 6)
ಕಲ್ಲಡ್ಕದ ಫ್ಲೈಓವರ್ ಕೆಲಸ ಹೊರತುಪಡಿಸಿ, ಮಾಣಿಯವರೆಗಿನ ಕೆಲಸ ಶೇ.ಎಪ್ಪತ್ತರಷ್ಟು ಪೂರ್ಣಗೊಂಡಿದೆ. ಬಿ.ಸಿ.ರೋಡ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ ಹೊಸ ಸೇತುವೆಯ ಅಂತಿಮ ಹಂತದ ಕೆಲಸಕಾರ್ಯಗಳು ಬಾಕಿ ಇದ್ದರೆ, ಪಾಣೆಮಂಗಳೂರು ಮತ್ತು ಮೇಲ್ಕಾರ್ ಓವರ್ ಬ್ರಿಡ್ಜ್ ಕೆಲಸಕಾರ್ಯಗಳು ಸಂಪೂರ್ಣವಾಗುತ್ತಿದ್ದರೂ ಇತರ ಕೆಲಸಗಳು ಉಳಿದಿವೆ. ಬಹುನಿರೀಕ್ಷಿತ ಕಲ್ಲಡ್ಕ ಫ್ಲೈಓವರ್ ಕೆಲಸ ಮುಂದಿನ ವರ್ಷಾಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
(5 / 6)
ಕಲ್ಲಡ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಷಟ್ಪಥದ ಕಾಂಕ್ರೀಟ್ ರಸ್ತೆಯ ಫ್ಲೈಓವರ್ ನಿರ್ಮಾಣ ಅಷ್ಟೊಂದು ಸುಲಭವೇನಲ್ಲ. ಅಕ್ಕಪಕ್ಕದಲ್ಲಿರುವವರ ವ್ಯಾಜ್ಯಗಳನ್ನು ಪರಿಹರಿಸಿಕೊಂಡು, ನಿರ್ಮಾಣ ಮಾಡಬೇಕಿದ್ದು, ಇದು 2.16 ಕಿ.ಮೀ. ಉದ್ದವಿದೆ. ಒಟ್ಟು 72 ಕಂಬಗಳು ಇದಕ್ಕಿದ್ದು, ಎರಡು ಕಂಬಗಳ ನಡುವೆ 30 ಮೀಟರ್ ಅಂತರವಿದೆ.
ಇತರ ಗ್ಯಾಲರಿಗಳು