ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mangalore News: ಮಂಗಳೂರು ಪಿಲಿಕುಳದ ಪ್ರಾಣಿಗಳಿಗೂ ಬಿಸಿಲ ಝಳ, ತಣ್ಣಗಿಡಲು ನಿತ್ಯ ಜಲ ಸಿಂಚನ Photos

Mangalore News: ಮಂಗಳೂರು ಪಿಲಿಕುಳದ ಪ್ರಾಣಿಗಳಿಗೂ ಬಿಸಿಲ ಝಳ, ತಣ್ಣಗಿಡಲು ನಿತ್ಯ ಜಲ ಸಿಂಚನ photos

  • ಮಂಗಳೂರು ಹೊರಲವಲಯದ ಪಿಲಿಕುಳದ ಪ್ರಾಣಿಮನೆಗೂ ಬಿಸಿಲ ಕಾವು ತಟ್ಟಿದೆ. ಪ್ರಾಣಿಗಳು ಬಿಸಿಲಿನಿಂದ ಬಳಲುತ್ತಿರುವುದನ್ನು ಕಂಡ ಸಿಬ್ಬಂದಿ ನಿತ್ಯ ಅವುಗಳಿಗೆ ಜಲ ಸಿಂಚನ ಮಾಡುತ್ತಿದ್ದಾರೆ. ಅವುಗಳ ಚಿತ್ರ ನೋಟ ಇಲ್ಲಿದೆ. 
  • ಚಿತ್ರ- ಮಾಹಿತಿ: ಹರೀಶ್‌ ಮಾಂಬಾಡಿ, ಮಂಗಳೂರು

ಬಿಸಿಲ ಬೇಗೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಮಂಗಳೂರು ಪೇಟೆಯಲ್ಲಿ ನಡೆದಾಡುವವರು ಬೆವರಿನ ಸ್ನಾನ ಮಾಡುತ್ತಿದ್ದಾರೆ. ತಂಪಾದ ಜಾಗವೆಲ್ಲಿ ಎಂದು ಹುಡುಕುವುದು ಸಾಮಾನ್ಯ ದೃಶ್ಯ. ಛಾವಣಿಯ ನೆರಳಿದ್ದರೂ ಸಾಕು, ಅಲ್ಲಿ ಕೆಲ ಹೊತ್ತು ನಿಲ್ಲುವುದುಂಟು. ಆದರೆ ಪ್ರಾಣಿಗಳೇನು ಮಾಡೋದು? ಅವುಗಳಿಗೆ ಸಿಬ್ಬಂದಿಯೇ ನೀರು ಕೊಡಬೇಕು.
icon

(1 / 6)

ಅದರಲ್ಲೂ ವಿಶಾಲವಾದ ಪ್ರಾಣಿ ಸಂಗ್ರಹಾಲಯ ಎಂಬ ಖ್ಯಾತಿ ಪಡೆದ ಮಂಗಳೂರು ಹೊರವಲಯದ ಪಿಲಿಕುಳದಲ್ಲಿರುವ ಹುಲಿ, ಚಿರತೆ, ಮೊಸಳೆಯಂಥ ಪ್ರಾಣಿಗಳೂ ಬಿಸಿಲ ಬೇಗೆಯಿಂದ ತತ್ತರಿಸಿಹೋಗಿದೆ. ಅವುಗಳನ್ನು ತಂಪಾಗಿಡಲು ವಿಶೇಷ ಪ್ರಯತ್ನಗಳೂ ಸಾಗಿದೆ. ಅದರಲ್ಲೂ ಹುಲಿಯಂತ ಪ್ರಾಣಿಯನ್ನು ಕೂಲ್‌ ಆಗಿಟ್ಟು ಗದ್ದಲ ಮಾಡದಂತೆ ನೋಡಿಕೊಳ್ಳಲಾಗುತ್ತಿದೆ.
icon

(2 / 6)

ಸುಮಾರು ನೂರೈವತ್ತು ಎಕರೆಯಷ್ಟು ವಿಶಾಲವಾದ ಈ ಉದ್ಯಾನವನಕ್ಕೆ 98ರಷ್ಟು ಪ್ರಭೇದಗಳ ಸಾವಿರಕ್ಕೂ ಅಧಿಕ ಪಕ್ಷಿ, ಪ್ರಾಣಿಗಳಿವೆ. ಕೆಲವೊಂದು ಪ್ರಾಣಿಗಳ ಗೂಡಿನ ಮೇಲ್ಭಾಗದಲ್ಲಿ ಬಿಳಿ ಬಣ್ಣ ಸೆಖೆ ಹೀರಲು ಬಳಿಯಲಾಗಿದೆ. ಇದರೊಂದಿಗೆ ನೀರನ್ನು ಕೂಡ ಸಂಪಡಿಸುವುದರಿಂದ ದೇಹದ ಉಷ್ಣಾಂಶವೂ ತಗ್ಗುತ್ತಿದೆ. 
icon

(3 / 6)

ಹಕ್ಕಿಗಳಿಗೂ ದಿನದಲ್ಲಿ ಸುಮಾರು ಎರಡು ಮೂರು ಬಾರಿ ನಿಯಮಿತವಾಗಿ ಈ ರೀತಿ ಸ್ಪ್ರೇ ಮಾಡಲಾಗುತ್ತಿದೆ. ಪ್ರಾಣಿಗಳು ಓಡಾಡುವ ಜಾಗದಲ್ಲಿ ಸ್ಪ್ರಿಂಕ್ಲರ್ ಗಳನ್ನು ಅಳವಡಿಸಲಾಗಿದೆ. 
icon

(4 / 6)

 ಪ್ರಾಣಿಗಳು ನೀರಿನಲ್ಲಿ ಮುಳುಗುವ ದೃಶ್ಯಗಳೂ ಈಗ ಕಾಣಸಿಗುತ್ತಿವೆ. ಜಿಂಕೆ, ಕಡವೆಗಳು, ಹುಲಿ, ಸಿಂಹಗಳು, ನೀರಾನೆ, ಕರಡಿ ಸಹಿತ ಪ್ರಾಣಿಗಳ ಸೆಖೆಯನ್ನು ತಂಪು ಮಾಡಲು ನೀರು ಚಿಮ್ಮಿಸಲಾಗುತ್ತಿದೆ.
icon

(5 / 6)

ಕೆಲವೆಡೆ ಹೆಚ್ಚುವರಿ ಫ್ಯಾನ್ ಅಳವಡಿಸಲಾಗಿದೆ. ಪ್ರಾಣಿಗಳನ್ನು ತಂಪಾದ ವಾತಾವರಣದಲ್ಲಿ ಇರಿಸಬೇಕು ಎಂದು ಪ್ರಾಣಿಗಳಿಗೆ ನೀರು ಚಿಮ್ಮಿಸುವ ಕಾರ್ಯ ನಡೆಯುತ್ತಿದೆ. 
icon

(6 / 6)

ಇತರ ಗ್ಯಾಲರಿಗಳು