Summer Drinks: ಬೇಸಿಗೆಗೆ ಪುನರ್‌ಪುಳಿ ಜ್ಯೂಸ್, ಕೂಲ್ ಜತೆಗೆ ಆರೋಗ್ಯಕರ, ಹೇಗೆ ತಯಾರಿಸೋದು? photos
- ಬರಹಗಾರ್ತಿಯಾಗಿರುವ ಉಷಾ ಕಟ್ಟೆಮನೆ( Usha Kattemane) ಕೃಷಿಕರೂ ಹೌದು. ಹಲವಾರು ಪ್ರಯೋಗಗಳನ್ನು ಅವರು ಮಾಡುತ್ತಲೇ ಇರುತ್ತಾರೆ. ಪುನರ್ಪುಳಿ ಅಥವಾ ಕೋಕಂ ಜ್ಯೂಸ್ ತಯಾರಿಕೆಯ ವಿವರವನ್ನು ಅವರು ನೀಡಿದ್ದಾರೆ.
- ಬರಹಗಾರ್ತಿಯಾಗಿರುವ ಉಷಾ ಕಟ್ಟೆಮನೆ( Usha Kattemane) ಕೃಷಿಕರೂ ಹೌದು. ಹಲವಾರು ಪ್ರಯೋಗಗಳನ್ನು ಅವರು ಮಾಡುತ್ತಲೇ ಇರುತ್ತಾರೆ. ಪುನರ್ಪುಳಿ ಅಥವಾ ಕೋಕಂ ಜ್ಯೂಸ್ ತಯಾರಿಕೆಯ ವಿವರವನ್ನು ಅವರು ನೀಡಿದ್ದಾರೆ.
(1 / 7)
ಪುನರ್‍ಪುಳಿ ಅಥವಾ ಕೋಕಮ್ ಎಂದು ಕರೆಯಲ್ಪಡುವ ಕೆಂಪು ಹಣ್ಣು ಅಧಿಕ ಪೋಷಕಾಂಶಗಳನ್ನು ಒಳಗೊಂಡಿದೆ. ಮಾಲಿಕ್ ಆಮ್ಲ, ಸಿಟ್ರಿಕ್ ಆಮ್ಲದಂತಹ ಜೀವಸತ್ವಗಳ ಆಗರವೈ ಹೌದು. ಮ್ಯಾಂಗನೀಸ್, ಪೊಟ್ಯಾಸಿಯಮ್, ಡಯೆಟರಿ ಫೈಬರ್ ಮತ್ತು ಗಾರ್ಸಿನಾಲ್ ಹೆಚ್ಚು ಪ್ರಮಾಣದಲ್ಲಿರುವುದರಿಂದ ವಿಟಮಿನ್ ಬಿ ಕೊರತೆಯನ್ನು ಇದು ನೀಗಿಸಲಿದೆ..
(2 / 7)
ಇದನ್ನು ಜ್ಯೂಸ್ ಆಗಿಯೂ ಬಳಸಬಹುದು. ಸಾಂಬಾರು ಕೂಡ ಮಾಡಬಹುದು. ಗರ್ಭಾವಸ್ಥೆಯಲ್ಲಿರುವವರು ಇದರ ಪಾನೀಯ ಅಥವಾ ಸಾರುಗಳನ್ನು ಸೇವಿಸುವುದರಿಂದ ಮಗುವಿನ ಉತ್ತಮ ಆರೋಗ್ಯಕ್ಕೆ ಸಹಾಯವಾಗಲಿದೆ ಎನ್ನುವ ನಂಬಿಕೆ ಗಟ್ಟಿಯಾಗಿದೆ.
(3 / 7)
ಪುನರ್ ಪುಳಿಯಲ್ಲಿ ಇರುವ ಔಷಧೀಯ ಗುಣ ಎಂದರೆ ಉರಿಯೂತವನ್ನು ನಿವಾರಿಸುವುದು. ಅಲರ್ಜಿ, ನೋವು, ದದ್ದು, ಸುಟ್ಟ ಗಾಯ ಮತ್ತು ಎದೆಯುರಿಯಂತಹ ಸಮಸ್ಯೆಗಳು ಇದ್ದರೆ ಈ ಹಣ್ಣನ್ನು ಬಳಸಬಹುದು. ಚರ್ಮದಲ್ಲಿ ತುರಿಕೆ, ಕಲೆ ಹಾಗೂ ಶುಷ್ಕತೆಯಿಂದ ಒಡೆಯುವುದನ್ನು ತಡೆಯುವುದು. ಎಲ್ಲಾ ಸಮಸ್ಯೆಗಳು ಬಹು ಬೇಗ ಶಮನ ಮಾಡುವುದು ಇದರ ವಿಶೇಷ.
(4 / 7)
ಇದರ ಎಲೆಗಳನ್ನು ನೀರಲ್ಲಿ ಕುದಿಸಿ ಆ ನೀರಿನಿಂದ ಹಿತ್ತಾಳೆ, ತಾಮ್ರ, ಚಿನ್ನ, ಬೆಳ್ಳಿಯ ವಸ್ತುಗಳನ್ನು ತೊಳೆದರೆ ಅವು ಮಿರಿ ಮಿರಿ ಮಿಂಚುತ್ತವೆ. ಕರಾವಳಿಯಲ್ಲಿ ಬಿರಿಂಡ ಎಂದು ಇದರ ಷರಬತ್ತನ್ನು ಕರೆಯುತ್ತಾರೆ. ಇದಕ್ಕೆ ಬೇಕಾದಷ್ಟು ಸಕ್ಕರೆಯನ್ನು ಸೇರಿಸಿಕೊಳ್ಳಬಹುದು.
(5 / 7)
ನಿಮಗೆ ಒಣಗಿಸಿದ ಕೋಕಂ ಸಿಪ್ಪೆಗಳು ಸಿಕ್ಕರೆ ಖರೀದಿಸಿ ಅಥವಾ ತಾಜಾ ಹಣ್ಣುಗಳು ಸಿಕ್ಕರೆ ಬೇಸಿಗೆಯಲ್ಲಿ ಖರೀದಿಸಿ ಒಣಗಿಸಿ ಇಟ್ಟುಕೊಳ್ಳುವುದು ಸೂಕ್ತ.. ಎಷ್ಟು ಸಾಧ್ಯವೋ ಅಷ್ಟು ತಾಜಾತನಕ್ಕೆ ಬೆಲೆ ನೀಡುವುದು ಉತ್ತಮ.
(6 / 7)
ಆರೋಗ್ಯಕ್ಕೆ ಅನೇಕ ರೀತಿಯ ಲಾಭ ಮಾಡುವ ಇವುಗಳ ಸಂಗ್ರಹ ಪ್ರತಿಯೊಂದು ಮನೆಯಲ್ಲೂ ಇದ್ದರೆ ಪ್ರಿಸರ್ವ್ ಮಾಡಲಾಗಿರುವ ಜ್ಯೂಸ್ ಗಳನ್ನು ಖರೀದಿಸುವುದು ತಪ್ಪುತ್ತದೆ. ಮಕ್ಕಳಿಗೆ ವಾರಕ್ಕೊಮ್ಮೆ ಈ ಜ್ಯೂಸ್ ಮಾಡಿ ಕೊಡುವುದು ಬಹಳ ಒಳ್ಳೆಯದು. ಇದು ಹಲವು ರೋಗಗಳ ನಿವಾರಕದ ಜತೆಗೆ ಬೇಸಿಗೆಯ ದಣಿವನ್ನು ಆರಿಸಲಿದೆ.
(7 / 7)
ಸೂರ್ಯ ಎಷ್ಟು ಉರಿತಾನೆ ಅಂತ ಚಾಲೆಂಜ್ ಮಾಡೋಣ ಅಂತ ನಿರ್ಧರಿಸಿ ಮರದಲ್ಲಿ ಹಣ್ಣಾಗಿರೊ ಎಲ್ಲಾ ಪುನರ್ಪುಳಿಯನ್ನು ಕೊಯ್ಲು, ಒಳಗಿನ ಬೀಜಗಳನ್ನು ತೆಗೆದು, ಸಿಪ್ಪೆಯನ್ನು ಸಕ್ಕರೆಯಲ್ಲಿ ಕಲಸಿ ಅವನೆದುರಿಗೆ ಇಟ್ಟೆ ನೋಡಿ... ಅವನ ಜ್ವಾಲಾಗ್ನಿಯಲ್ಲಿ ಬೆಂದ ಪುನರ್ಪುಳಿ ಎರಡೇ ದಿನದಲ್ಲಿ ರಸವೆಲ್ಲಾ ಸೋರಿ ಕಬ್ಬಿನ ಸಿಪ್ಪೆಯಂತಾಯಿತು.ಒಂದು ವರ್ಷಕ್ಕೆ ಸಾಕು. ಮರದಲ್ಲಿ ಇನ್ನೂ ಕಾಯಿಗಳು ಇವೆ. ಕನಿಷ್ಠ ಎರಡು ಸಲ ಕೊಯ್ಯಬಹುದು. ಅದನ್ನೆಲ್ಲಾ ಒಣಗಿಸಬೇಕು. ಅನ್ನಕ್ಕೊಂದು ಸಾರು ಮಾಡಿಕೊಳ್ಳಲು ಎಲ್ಲವೂ ಆರ್ಗ್ಯಾನಿಕ್. ಎಂತಾ ರಣ ಬಿಸಿಲು ಮಾರಾಯ್ರೇ. ತಣ್ಣಗೆ ಜ್ಯೂಸ್ ಮಾಡಿಕೊಂಡು ಚಪ್ಪರಿಸುತ್ತಾ ಇದ್ದೇನೆ ಎಂದು ಉಷಾ ಕಟ್ಟೆಮನೆ ತಮ್ಮ ಪುನರ್ ಪುಳಿ ಸಂತಸ ಹಂಚಿಕೊಳ್ಳುತ್ತಾರೆ.
ಇತರ ಗ್ಯಾಲರಿಗಳು