ಸತತ ಎರಡನೇ ದಿನವೂ ಮಂಗಳೂರಿನಲ್ಲಿ ಕೃತಕ ನೆರೆ, ಹೊಳೆಯಂತಾದ ಪಂಪ್ ವೆಲ್, ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟ ಮುಳುಗಡೆ, ಚಿತ್ರನೋಟ
ಕಳೆದ ಮೂರು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಮಂಗಳೂರಿನ ಹಲವೆಡೆ ಕೃತಕ ನೆರೆ ಕಂಡುಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆಯೂ ಮಳೆಯಿಂದಾಗಿ ತೊಂದರೆಗಳಾಗಿದ್ದು, ಕುಮಾರಧಾರಾ ನದಿ ಉಕ್ಕಿಹರಿದು, ಸುಬ್ರಹ್ಮಣ್ಯದ ಸ್ನಾನಘಟ್ಟವೂ ಮುಳುಗಿಹೋಯಿತು. ಇಲ್ಲಿದೆ ಒಂದು ಚಿತ್ರನೋಟ.
(1 / 8)
ಜೂನ್ ಆರಂಭಕ್ಕೆ ಮೊದಲೇ ಸುರಿದ ಮಳೆಯಿಂದಾಗಿ ಮುಂಗಾರುಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳದೇ ಇದ್ದ ದಕ್ಷಿಣ ಕನ್ನಡ ಆಡಳಿತಕ್ಕೀಗ ತಲೆನೋವು ತಂದಿದೆ. ಏರಿಕೆ ಕಂಡ ನೇತ್ರಾವತಿ ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ ನದಿ ನೀರಿನ ಮಟ್ಟದಲ್ಲಿ ಏರಿಕೆ ಕಂಡಿದೆ. ಭಾನುವಾರ 3.6 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದ ನೇತ್ರಾವತಿ ಸೋಮವಾರ 4.1 ಮೀಟರ್ ಎತ್ತರಕ್ಕೆ ತಲುಪಿತ್ತು. ಘಟ್ಟ ಪ್ರದೇಶಗಳಲ್ಲಿ ಮಳೆಯಾದರೆ, ಇನ್ನೂ ಏರಿಕೆಯಾಗುವ ನಿರೀಕ್ಷೆ ಇದೆ.
(3 / 8)
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೋಮವಾರ ಮಳೆಯಿಂದಾಗಿ ಕುಮಾರಧಾರಾ ನದಿಯಲ್ಲಿ ನೀರಿನಲ್ಲಿ ಏರಿಕೆ ಕಂಡು ಸ್ನಾನಘಟ್ಟ ಮುಳುಗಿರುವುದು
(6 / 8)
ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಸರುಮಿಶ್ರಿತ ಮಣ್ಣು ಹರಡಿದ್ದು, ಅಪಘಾತಕ್ಕೆ ಆಹ್ವಾನ ನೀಡುತ್ತಿರುವಂತೆ ಇದೆ.
ಇತರ ಗ್ಯಾಲರಿಗಳು