ಬಂಟ್ವಾಳದ ಬ್ರಹ್ಮರಥೋತ್ಸವಕ್ಕೆ 200ನೇ ವರ್ಷದ ಸಂಭ್ರಮ; ಮಲ್ಲಿಗೆಪ್ರಿಯ ವೆಂಕಟರಮಣನಿಗೆ ಕೆಜಿಗಟ್ಟಲೆ ಹೂವು ಸಮರ್ಪಣೆ; Photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬಂಟ್ವಾಳದ ಬ್ರಹ್ಮರಥೋತ್ಸವಕ್ಕೆ 200ನೇ ವರ್ಷದ ಸಂಭ್ರಮ; ಮಲ್ಲಿಗೆಪ್ರಿಯ ವೆಂಕಟರಮಣನಿಗೆ ಕೆಜಿಗಟ್ಟಲೆ ಹೂವು ಸಮರ್ಪಣೆ; Photos

ಬಂಟ್ವಾಳದ ಬ್ರಹ್ಮರಥೋತ್ಸವಕ್ಕೆ 200ನೇ ವರ್ಷದ ಸಂಭ್ರಮ; ಮಲ್ಲಿಗೆಪ್ರಿಯ ವೆಂಕಟರಮಣನಿಗೆ ಕೆಜಿಗಟ್ಟಲೆ ಹೂವು ಸಮರ್ಪಣೆ; Photos

  • ಮಂಗಳೂರು ಸಮೀಪದ ಬಂಟ್ವಾಳದಲ್ಲಿ 200ನೇ ವರ್ಷದ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನೆರವೇರಿತು. ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಮಾರ್ಚ್ 12ರಿಂದ 17ರವರೆಗೆ ಬ್ರಹ್ಮರಥೋತ್ಸವ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆದವು.  200ನೇ ವರ್ಷದ  ರಥೋತ್ಸವದ ಸಂಭ್ರಮದ ಕ್ಷಣಗಳನ್ನ ಫೋಟೊಗಳಲ್ಲಿ ನೀವೂ ಕಣ್ತುಂಬಿಕೊಳ್ಳಿ. (ಚಿತ್ರ ವರದಿ: ಹರೀಶ್‌ ಮಾಂಬಾಡಿ)

ಬಂಟ್ವಾಳದ ಗೌಡ ಸಾರಸ್ವತ ಬ್ರಾಹ್ಮಣ ವೃಂದದವರ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದ ಬ್ರಹ್ಮರಥೋತ್ಸವ ಕಾರ್ಯಕ್ರಮ ಸಹಿತ ಉತ್ಸವಾದಿ ಕಾರ್ಯಕ್ರಮಗಳು ಮಾರ್ಚ್ 12ರಿಂದ 17ರವರೆಗೆ ನಡೆಯಿತು. ಇದು ಬಂಟ್ವಾಳ ಬ್ರಹ್ಮರಥದ 200ನೇ ವರ್ಷಾಚರಣೆಯೂ ಆಗಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು.
icon

(1 / 7)

ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳು ನಡೆದವು. ಸಮಾಜ ಬಾಂಧವರಿಂದ ಮಾರ್ಚ್ 10ರಂದು ಶ್ರೀದೇವರಿಗೆ  ಮಲ್ಲಿಗೆ ಹೂವಿನಿಂದ ಸಹಸ್ರನಾಮ ಪುಷ್ಪಾಂಜನೆ ನಡೆಯಿತು.,
icon

(2 / 7)

ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಲಕ್ಷ ತುಳಸಿ ಅರ್ಚನೆ, ಲಕ್ಷ ಪುಷ್ಪಾರ್ಚನೆ ನಡೆಯಿತು. ಬಂಟ್ವಾಳ ಶ್ರೀಕಾಶೀಮಠದ ವೃಂದಾವನದಲ್ಲಿ ಶ್ರೀ ಹನುಮಂತ ದೇವರಿಗೆ ಗಂಧಲೇಪನ ಸೇವೆ ಶ್ರೀಗಳಿಂದ ಜೀವನದಿ ನೇತ್ರಾವತಿಗೆ ಗಂಗಾರತಿ ನಡೆಯಿತು.
icon

(3 / 7)

12ರಂದು ಗರುಡೋತ್ಸವ, 13ರಂದು ಹನುಮಂತೋತ್ಸವ, 14ರಂದು ಚಂದ್ರಮಂಡಲೋತ್ಸವ, 15ರಂದು ಸಣ್ಣ ರಥೋತ್ಸವ ನಡೆಯಿತು. 16ರಂದು ಶನಿವಾರ 200ನೇ ವರ್ಷಾಚರಣೆಯ ಬ್ರಹ್ಮರಥೋತ್ಸವ ನಡೆಯಿತು. 
icon

(4 / 7)

ಯಜ್ಞಾರತಿ, ಪೂರ್ಣಾಹುತಿ ಬಲಿ ಬಳಿಕ ಸಂಜೆ  ಬ್ರಹ್ಮರಥಾರೋಹಣ, ಸಮಾರಾಧನೆ, ರಾತ್ರಿ 1 ಗಂಟೆಗೆ ಬ್ರಹ್ಮರಥೋತ್ಸವ ನಡೆಯಿತು. 
icon

(5 / 7)

ಭಾನುವಾರ ಅವಭೃತೋತ್ಸವ ಕಾರ್ಯಕ್ರಮಗಳು ನಡೆದವು. ರಥೋತ್ಸವ ಕಾರ್ಯಕ್ರಮದ ಅಂಗವಾಗಿ ವಿಶೇಷವಾಗಿ ಪಟ್ಟದ ದೇವರಿಗೆ 50 ಪವನ್ ಚಿನ್ನ ಹಾಗೂ ಉತ್ಸವ ಮೂರ್ತಿಗೆ 50 ಪವನ್ ಚಿನ್ನ, ಕಾಶಿಮಠಕ್ಕೆ ಚಿನ್ನದ ಸರ ಹಾಗೂ ಬ್ರಹ್ಮರಥಕ್ಕೆ 10 ಕೆ.ಜಿ.ಬೆಳ್ಳಿಯ ಪ್ರಭಾವಳಿ ನೀಡಲಾಯಿತು.
icon

(6 / 7)

ದೇಶ-ವಿದೇಶ, ರಾಜ್ಯ-ಜಿಲ್ಲೆ, ನಿಮ್ಮೂರು-ನಮ್ಮೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ತಿಳಿಯಲು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ನೋಡಿ
icon

(7 / 7)

ಇತರ ಗ್ಯಾಲರಿಗಳು