ಬಂಟ್ವಾಳ ಮುಡೂರು-ಪಡೂರು ಜೋಡುಕರೆ ಕಂಬಳ, ವಿವಿಧ ಸ್ಪರ್ಧೆಗಳಲ್ಲಿ ಗೆದ್ದಿದ್ಯಾರು; ಇಲ್ಲಿದೆ ಸಚಿತ್ರ ವರದಿ
- ಬಂಟ್ವಾಳದ ಮುಡೂರು-ಪಡೂರು ಜೋಡುಕರೆ ಕಂಬಳ ಅದ್ದೂರಿಯಾಗಿ ನೆರವೇರಿತು. ಚಿತ್ರನಟ ಪ್ರಜ್ವಲ್ ದೇವರಾಜ್ ಸೇರಿದಂತೆ ಹಲವು ಗಣ್ಯರು ಕಂಬಳದಲ್ಲಿ ಭಾಗವಹಿಸಿದ್ದರು. ಈ ವೇಳೆ ನಡೆದ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದವರ ವಿವರ ಇಲ್ಲಿದೆ. (ಚಿತ್ರ-ವರದಿ: ಹರೀಶ್ ಮಾಂಬಾಡಿ)
- ಬಂಟ್ವಾಳದ ಮುಡೂರು-ಪಡೂರು ಜೋಡುಕರೆ ಕಂಬಳ ಅದ್ದೂರಿಯಾಗಿ ನೆರವೇರಿತು. ಚಿತ್ರನಟ ಪ್ರಜ್ವಲ್ ದೇವರಾಜ್ ಸೇರಿದಂತೆ ಹಲವು ಗಣ್ಯರು ಕಂಬಳದಲ್ಲಿ ಭಾಗವಹಿಸಿದ್ದರು. ಈ ವೇಳೆ ನಡೆದ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದವರ ವಿವರ ಇಲ್ಲಿದೆ. (ಚಿತ್ರ-ವರದಿ: ಹರೀಶ್ ಮಾಂಬಾಡಿ)
(1 / 7)
ಮಾಜಿ ಸಚಿವ ಬಿ.ರಮಾನಾಥ ರೈ ಸಾರಥ್ಯದಲ್ಲಿ ಬಂಟ್ವಾಳ ಕಂಬಳ ಎಂದೇ ಪ್ರಸಿದ್ಧವಾಗಿರುವ ಮುಡೂರು-ಪಡೂರು ಜೋಡುಕರೆ ಕಂಬಳ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಾವೂರು ಕುಡಿಬೈಲಿನಲ್ಲಿ ನಡೆಯಿತು. ಈ ಸಂದರ್ಭ ಸಚಿವ ದಿನೇಶ್ ಗುಂಡೂರಾವ್, ಚಿತ್ರನಟ ಪ್ರಜ್ವಲ್ ದೇವರಾಜ್ ಸಹಿತ ಪ್ರಮುಖ ಗಣ್ಯರು ಹಾಜರಿದ್ದರು. ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್ ಮುಂದಾಳತ್ವದಲ್ಲಿ ಕಂಬಳ ಹೊನಲು ಬೆಳಕಿನಲ್ಲಿ ವಿಜೃಂಭಣೆಯಿಂದ ನಡೆಯಿತು. ಇದರ ಫಲಿತಾಂಶದ ವಿವರ ಹೀಗಿದೆ.
(2 / 7)
ಬಂಟ್ವಾಳ ಕಂಬಳ ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ: ಕನೆಹಲಗೆ: 09 ಜೊತೆ, ಅಡ್ಡಹಲಗೆ: 04 ಜೊತೆ, ಹಗ್ಗ ಹಿರಿಯ: 15 ಜೊತೆ, ನೇಗಿಲು ಹಿರಿಯ: 29 ಜೊತೆ, ಹಗ್ಗ ಕಿರಿಯ: 20 ಜೊತೆ, ನೇಗಿಲು ಕಿರಿಯ: 105 ಜೊತೆ, ಒಟ್ಟು ಕೋಣಗಳ ಸಂಖ್ಯೆ: 182 ಜೊತೆ
(3 / 7)
ಕನೆಹಲಗೆ: (ನೀರು ನೋಡಿ ಬಹುಮಾನ), ಪ್ರಥಮ: ಬೇಲಾಡಿ ಬಾವ ಅಶೋಕ್ ಶೆಟ್ಟಿ, ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ, ದ್ವಿತೀಯ: ಅಲ್ಲಿಪಾದೆ ಕೆಳಗಿನಮನೆ ವಿನ್ಸೆಂಟ್ ಪಿಂಟೊ, ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ
(4 / 7)
ಅಡ್ಡ ಹಲಗೆ: ಪ್ರಥಮ: ಅಲ್ಲಿಪಾದೆ ಪೆರಿಯಾರ್ ಮಿಂಗಲ್ ಸೇನ್, ಹಲಗೆ ಮುಟ್ಟಿದವರು: ಭಟ್ಕಳ ಹರೀಶ್, ದ್ವಿತೀಯ: ಅಲ್ಲಿಪಾದೆ ಕೆಳಗಿನಮನೆ ವಿನ್ಸೆಂಟ್ ಪಿಂಟೋ, ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ
(5 / 7)
ಹಗ್ಗ ಹಿರಿಯ: ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ ʼಎʼ, ಓಡಿಸಿದವರು: ಬಂಬ್ರಾಣ ಬೈಲು ವಂದಿತ್ ಶೆಟ್ಟಿ, ದ್ವಿತೀಯ: ನಂದಳಿಕೆ ಶ್ರೀಕಾಂತ್ ಭಟ್ ʼಬಿʼ, ಓಡಿಸಿದವರು: ಕಾವೂರ್ ತೋಟ ಸುದರ್ಶನ್ಹಗ್ಗ ಕಿರಿಯ: ಪ್ರಥಮ: ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ದಿನಕರ್ ಬಿ. ಶೆಟ್ಟಿ, ಓಡಿಸಿದವರು: ಭಟ್ಕಳ ಶಂಕರ್, ದ್ವಿತೀಯ: ಎಂಬತ್ತು ಬಡಗಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ, ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್
(6 / 7)
ಹಗ್ಗ ಕಿರಿಯ: ಪ್ರಥಮ: ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ದಿನಕರ್ ಬಿ. ಶೆಟ್ಟಿ, ಓಡಿಸಿದವರು: ಭಟ್ಕಳ ಶಂಕರ್, ದ್ವಿತೀಯ: ಎಂಬತ್ತು ಬಡಗಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ, ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್
ಇತರ ಗ್ಯಾಲರಿಗಳು