Mangaluru Crime: ಕಾವೂರಿನ ಭೀಕರ ರಸ್ತೆ ಅಪಘಾತದಲ್ಲಿ ಕುದುರೆಮುಖ ಕಂಪನಿಯ 54 ವರ್ಷದ ಉದ್ಯೋಗಿ ದುರ್ಮರಣ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mangaluru Crime: ಕಾವೂರಿನ ಭೀಕರ ರಸ್ತೆ ಅಪಘಾತದಲ್ಲಿ ಕುದುರೆಮುಖ ಕಂಪನಿಯ 54 ವರ್ಷದ ಉದ್ಯೋಗಿ ದುರ್ಮರಣ

Mangaluru Crime: ಕಾವೂರಿನ ಭೀಕರ ರಸ್ತೆ ಅಪಘಾತದಲ್ಲಿ ಕುದುರೆಮುಖ ಕಂಪನಿಯ 54 ವರ್ಷದ ಉದ್ಯೋಗಿ ದುರ್ಮರಣ

Road Accident near Kavoor: ಮಂಗಳೂರಿನ ಕಾವೂರು ಜಂಕ್ಷನ್‌ ಸಮೀಪ ಮಂಗಳವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕುದುರೆಮುಖ ಕಂಪನಿಯ ಉದ್ಯೋಗಿ ಶೇಖರಪ್ಪ (54) ಮೃತಪಟ್ಟಿದ್ದಾರೆ. ಕಂಪನಿ ಕ್ವಾರ್ಟ್ರಸ್‌ನ ಮುಖ್ಯಗೇಟಿನ ಎದುರು ಶೇಖರಪ್ಪ ಇದ್ದ ಬೈಕ್‌ಗೆ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಮಂಗಳೂರು ಕಾವೂರು ಜಂಕ್ಷನ್ ಹತ್ತಿರದ ಕುದುರೆಮುಖ ಕಂಪನಿಯ ಕ್ವಾರ್ಟ್ರಸ್‌ನ ಮುಖ್ಯಗೇಟಿನ ಬಳಿ ಮಂಗಳವಾರ ತಡರಾತ್ರಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಕುದುರೆಮುಖ ಕಂಪನಿಯ ಉದ್ಯೋಗಿ,ಶ್ರಮಶಕ್ತಿ ಸಂಘಟನೆಯ ಮುಖಂಡ ಶೇಖರಪ್ಪ (54) ಮೃತ ದುರ್ದೈವಿ. 
icon

(1 / 6)

ಶೇಖರಪ್ಪ ಅವರು ತಮ್ಮ ಕರ್ತವ್ಯ ಮುಗಿಸಿ ಕಂಪನಿಯ ಕ್ವಾರ್ಟ್ರಸ್‌ನಲ್ಲಿರುವ ತಮ್ಮ ಮನೆಗೆ ಹೋಗುತ್ತಿದ್ದ ವೇಳೆ, ಕ್ವಾರ್ಟ್ರಸ್‌ನ ಮುಖ್ಯಗೇಟ್ ಸಮೀಪವೇ ಅಪಘಾತ ಸಂಭವಿಸಿತ್ತು.
icon

(2 / 6)

ಮುಖ್ಯಗೇಟಿನ ಒಳಕ್ಕೆ ಹೋಗಲು ರಸ್ತೆಯ ಡಿವೈಡರ್ ಬಳಿ ಬಲಕ್ಕೆ ಇಂಡಿಕೇಟರ್ ಹಾಕಿ ಬೈಕ್ ತಿರುಗಿಸುತ್ತಿದ್ದ ವೇಳೆ ಬೋಂದೆಲ ಕಡೆಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿತ್ತು. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಕಾರಿನ ಮುಂಭಾಗ ಜಜ್ಜಿ ಹೋಗಿದ್ದು, ಬೈಕ್‌ ಕೂಡ ಛಿದ್ರವಾಗಿದೆ. 
icon

(3 / 6)

ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಮೇಲೆ ಇದ್ದ ಶೇಖರಪ್ಪ ಮೇಲಕ್ಕೆಸೆಯಲ್ಪಟ್ಟು ರಸ್ತೆಗೆ ಬಿದ್ದಿದ್ದರು. ಗಂಭೀರ ಗಾಯಗೊಂಡಿದ್ದ ಶೇಖರಪ್ಪ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿತ್ತು. 
icon

(4 / 6)

ಆಸ್ಪತ್ರೆಗೆ ಸಾಗಿಸಿದ ಕೂಡಲೇ ಅವರನ್ನು ಪರಿಶೀಲಿಸಿದ ವೈದ್ಯರು, ತುರ್ತುಚಿಕಿತ್ಸೆ ನೀಡುವ ಪ್ರಯತ್ನ ಮಾಡಿದರಾದರೂ, ಅದು ಫಲನೀಡಿಲ್ಲ. ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಗಂಭೀರವಾಗಿ ಗಾಯಗೊಂಡಿದ್ದ ಶೇಖರಪ್ಪ ಅವರು ಮೃತಪಟ್ಟಿದ್ದರು.
icon

(5 / 6)

ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪಘಾತದ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸಿದ್ದಾರೆ. 
icon

(6 / 6)

ಇತರ ಗ್ಯಾಲರಿಗಳು