ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆ ಅಣ್ಣಾಮಲೈ ; ರೋಡ್ ಶೋ ನಡೆಸಿ ಬ್ರಿಜೇಶ್ ಚೌಟ ಪರ ಬ್ಯಾಟಿಂಗ್ ಮಾಡಿದ ಮಾಜಿ ಎಸ್ಪಿ, ಚಿತ್ರನೋಟ
ದಕ್ಷಿಣ ಕನ್ನಡದಲ್ಲಿ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಭಾಗಿಯಾದ ತಮಿಳುನಾಡು ಬಿಜೆಪಿ ನಾಯಕ ಕೆ ಅಣ್ಣಾಮಲೈ, ರೋಡ್ ಶೋ ನಡೆಸಿ ಬ್ರಿಜೇಶ್ ಚೌಟ ಪರ ಬ್ಯಾಟಿಂಗ್ ಮಾಡಿದರು. ಮಾಜಿ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಪ್ರಚಾರದ ಚಿತ್ರನೋಟ ಇಲ್ಲಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
(1 / 10)
(2 / 10)
ಭಾರತೀಯ ಸೇನೆಯ ಗೋರ್ಖಾ ರೆಜಿಮೆಂಟಿನಲ್ಲಿ ದೇಶ ಸೇವೆ ಮಾಡಿ ಬಂದವರು. ದಕ್ಷಿಣ ಕನ್ನಡ ಜಿಲ್ಲೆಯ ಸರ್ವಾಂಗಣ ಅಭಿವೃದ್ಧಿಯ ಬಗ್ಗೆ ದೊಡ್ಡ ಕನಸನ್ನು ಇಟ್ಟುಕೊಂಡ ವ್ಯಕ್ತಿ ನಮಗೆ ಅಭ್ಯರ್ಥಿಯಾಗಿ ಸಿಕ್ಕಿದ್ದಾರೆ. ರೆಕಾರ್ಡ್ ಮಾದರಿಯಲ್ಲಿ ಗೆಲ್ಲಿಸಿ ಮೋದಿಯವರ ಕೈಬಲಪಡಿಸಬೇಕು ಎಂದು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಪುತ್ತೂರಿನಲ್ಲಿ ಬೃಹತ್ ರೋಡ್ ಶೋ ನಡೆಸಿದ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
(3 / 10)
ಬಿಸಿಲು ಜಾಸ್ತಿಯಿದೆಯೆಂದು ನಾವು ಓಟ್ ಮಾಡದೇ ಇರುವುದಲ್ಲ. ಯಾರಿಗೆಲ್ಲ ನಮ್ಮ ಪ್ರಧಾನಿ ಮೋದಿ ಮೇಲೆ ಪ್ರೀತಿ ಇದೆಯೋ ಅವರೆಲ್ಲ ಓಟ್ ಮಾಡಲೇಬೇಕಾಗಿದೆ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
(4 / 10)
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಫೈರ್ ಬ್ರಾಂಡ್ ಮುಖಂಡ ಅರುಣ್ ಪುತ್ತಿಲ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರೋಡ್ ಶೋ ವಾಹನಲ್ಲಿ ಇದ್ದರು. ಪುತ್ತೂರಿನಲ್ಲಿ ಸುಡುವ ಬಿಸಿಲನ್ನೂ ಲೆಕ್ಕಿಸದೆ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದು ವಿಶೇಷವಾಗಿತ್ತು. ದರ್ಬೆಯಿಂದ ತೊಡಗಿ ಮಧ್ಯಾಹ್ನದ ಸುಡು ಬಿಸಿಲ ನಡುವೆಯೂ ಕಾರ್ಯಕರ್ತರ ಜೊತೆಗೆ ಅಣ್ಣಾಮಲೈ ಮತ್ತು ಪ್ರಮುಖರು ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು.
(5 / 10)
(6 / 10)
ಪುತ್ತೂರಿನಲ್ಲಿ ಬಿಂದು ಫ್ಯಾಕ್ಟರಿಗೆ ತೆರಳಿದ ಅಣ್ಣಾಮಲೈ ಮತ್ತು ಕ್ಯಾ. ಬ್ರಿಜೇಶ್ ಚೌಟ ಅಲ್ಲಿನ ನೂರಾರು ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದರು.
(8 / 10)
ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ಇಷ್ಟೊಂದು ಬಿಸಿಲಿನ ನಡುವೆಯೂ ಉತ್ಸಾಹದಿಂದ ಸೇರಿದ ನಿಮ್ಮೆಲ್ಲರನ್ನು ನೋಡಿ ಹೆಮ್ಮೆಯಾಗುತ್ತಿದೆ. ಹಿಂದುತ್ವಕ್ಕಾಗಿ, ಪ್ರಧಾನಿ ಮೋದಿಗಾಗಿ, ಈ ದೇಶದ ಭವಿಷ್ಯಕ್ಕಾಗಿ ಪುತ್ತೂರಿನಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಿದ್ದೀರಿ. ನಿಮ್ಮ ಉತ್ಸಾಹಕ್ಕೆ ಋಣಿಯಾಗಿದ್ದೇನೆ ಎಂದರು.
(9 / 10)
2024ರ ಚುನಾವಣೆ ದೇಶದ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದು. ಮೋದಿಯವರು ಕೈಗೊಂಡ ಯೋಜನೆಗಳ ಸಾಕಾರಕ್ಕಾಗಿ ಅವರೇ ಮತ್ತೆ ಪ್ರಧಾನಿಯಾಗುವ ಅಗತ್ಯವಿದೆ. ಅದಕ್ಕಾಗಿ ಎಲ್ಲರೂ ಮತ ಹಾಕಬೇಕು ಎಂದು ಅಲ್ಲಿ ಸೇರಿದ್ದ ಮಹಿಳಾ ಕಾರ್ಮಿಕರಲ್ಲಿ ಮನವಿ ಮಾಡಿದರು.
ಇತರ ಗ್ಯಾಲರಿಗಳು