ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬಂಟ್ವಾಳದ ಬಿ ಸಿ ರೋಡ್‌ಗೆ ಬಂದಿತ್ತು ಮುಂಬಯಿಯ ಒರಿಗಾಮಿ ಬಸ್‌; ಕಾಗದದ ಮೂಲಕ ಸಂಸ್ಕೃತಿಯ ಪರಿಚಯದ ಚಿತ್ರನೋಟ

ಬಂಟ್ವಾಳದ ಬಿ ಸಿ ರೋಡ್‌ಗೆ ಬಂದಿತ್ತು ಮುಂಬಯಿಯ ಒರಿಗಾಮಿ ಬಸ್‌; ಕಾಗದದ ಮೂಲಕ ಸಂಸ್ಕೃತಿಯ ಪರಿಚಯದ ಚಿತ್ರನೋಟ

ಮುಂಬಯಿಯ ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯಂ ದೇಶಾದ್ಯಂತ ವಿವಿಧ ಪ್ರದರ್ಶನಗಳನ್ನು ಆಯೋಜಿಸಲು ಚಲಿಸುವ ಮ್ಯೂಸಿಯಂ ಅನ್ನು ರವಾನಿಸುತ್ತದೆ. ಇದರಂತೆ, ಬಂಟ್ವಾಳದ ಬಿ ಸಿ ರೋಡ್‌ಗೆ ಬಂದಿತ್ತು ಮುಂಬಯಿಯ ಒರಿಗಾಮಿ ಬಸ್‌. ಕಾಗದದ ಮೂಲಕ ಸಂಸ್ಕೃತಿಯ ಪರಿಚಯವನ್ನು ಅದು ಮಾಡಿಕೊಟ್ಟಿದ್ದು, ಅದರ ಚಿತ್ರನೋಟ ಇಲ್ಲಿದೆ. (ವರದಿ- ಹರೀಶ ಮಾಂಬಾಡಿ ಮಂಗಳೂರು) 

ಬಂಟ್ವಾಳದ ಬಿ ಸಿ ರೋಡ್‌ಗೆ ಬಂದಿತ್ತು ಮುಂಬಯಿಯ ಒರಿಗಾಮಿ ಬಸ್‌; ಕಾಗದದ ಮೂಲಕ ಸಂಸ್ಕೃತಿಯ ಪರಿಚಯದ ಚಿತ್ರನೋಟ ಇಲ್ಲಿದೆ ನೋಡಿ.
icon

(1 / 10)

ಬಂಟ್ವಾಳದ ಬಿ ಸಿ ರೋಡ್‌ಗೆ ಬಂದಿತ್ತು ಮುಂಬಯಿಯ ಒರಿಗಾಮಿ ಬಸ್‌; ಕಾಗದದ ಮೂಲಕ ಸಂಸ್ಕೃತಿಯ ಪರಿಚಯದ ಚಿತ್ರನೋಟ ಇಲ್ಲಿದೆ ನೋಡಿ.(HSM)

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ವಸ್ತುಸಂಗ್ರಹಾಲಯದ ಮ್ಯೂಸಿಯಂ ಆನ್ ವೀಲ್ಸ್  ಗಾಲಿಗಳ ಮೇಲೆ ಮ್ಯೂಸಿಯಂ ಪರಿಕಲ್ಪನೆಯಡಿ ಒರಿಗಾಮಿ ಕಲೆಯ ಪರಿಚಯವನ್ನು ಹೇಳುವ ಪ್ರಯತ್ನ ಮಾಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೇಂದ್ರಭಾಗವಾದ ಬಿ.ಸಿ.ರೋಡ್ ಗೆ ಈ ಚಲಿಸುವ ಮ್ಯೂಸಿಯಂ ಪರಿಕಲ್ಪನೆಯ ಬಸ್ ಆಗಮಿಸಿತು. ವಿದ್ಯಾರ್ಥಿಗಳು, ಸಾರ್ವಜನಿಕರ ಸಹಿತ ಹಲವರು ಇದನ್ನು ಅಚ್ಚರಿಯಿಂದ ನೋಡಿದರು. ಇದು ಮಾಮೂಲು ಕ್ರಾಫ್ಟ್ ಅಲ್ಲವೇ ಎಂದು ಹುಬ್ಬೇರಿಸಿದವರು ಕೆಲವರಾದರೆ, ಈ ಕಲೆಯ ವಿಸ್ತಾರವನ್ನು ಅನುಭವಿಸಿದವರು ಹಲವರು.
icon

(2 / 10)

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ವಸ್ತುಸಂಗ್ರಹಾಲಯದ ಮ್ಯೂಸಿಯಂ ಆನ್ ವೀಲ್ಸ್  ಗಾಲಿಗಳ ಮೇಲೆ ಮ್ಯೂಸಿಯಂ ಪರಿಕಲ್ಪನೆಯಡಿ ಒರಿಗಾಮಿ ಕಲೆಯ ಪರಿಚಯವನ್ನು ಹೇಳುವ ಪ್ರಯತ್ನ ಮಾಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೇಂದ್ರಭಾಗವಾದ ಬಿ.ಸಿ.ರೋಡ್ ಗೆ ಈ ಚಲಿಸುವ ಮ್ಯೂಸಿಯಂ ಪರಿಕಲ್ಪನೆಯ ಬಸ್ ಆಗಮಿಸಿತು. ವಿದ್ಯಾರ್ಥಿಗಳು, ಸಾರ್ವಜನಿಕರ ಸಹಿತ ಹಲವರು ಇದನ್ನು ಅಚ್ಚರಿಯಿಂದ ನೋಡಿದರು. ಇದು ಮಾಮೂಲು ಕ್ರಾಫ್ಟ್ ಅಲ್ಲವೇ ಎಂದು ಹುಬ್ಬೇರಿಸಿದವರು ಕೆಲವರಾದರೆ, ಈ ಕಲೆಯ ವಿಸ್ತಾರವನ್ನು ಅನುಭವಿಸಿದವರು ಹಲವರು.(HSM)

ಒರಿಗಾಮಿ ಎಂದರೇನು, ಬಸ್ಸಿನಲ್ಲೇನಿದೆ?: ಜಪಾನ್ ನ ಒರಿಗಾಮಿ ಕಲೆ ಅಲ್ಲಿನ ನೆಲ ಮತ್ತುಅದರ ಸಂಸ್ಕೃತಿಯ ಜೊತೆ ಆಳವಾದ ಸಂಬಂಧ ಹೊಂದಿರುವ ಅನೇಕ ಸಂಕೇತಗಳಿಂದ ಕೂಡಿದೆ. ಅಲ್ಲಿನ ವರ್ಣಚಿತ್ರಗಳು, ಮುದ್ರಣಗಳು ಸೆರಾಮಿಕ್ಸ್ ನಲ್ಲಿ ಆಧುನಿಕ ಕಲೆಗಳಲ್ಲಿ ನಾವದನ್ನು ನೋಡಲು ಸಾಧ್ಯ.  ಈ ಬಸ್ಸಿನಲ್ಲಿ ಜಪಾನಿ ಬದುಕಿನ ಜೊತೆಗೆ ಭಾರತೀಯ ಬದುಕನ್ನೂ ಕಟ್ಟಿಕೊಡುವ ಪ್ರಯತ್ನ ಮಾಡಲಾಯಿತು.
icon

(3 / 10)

ಒರಿಗಾಮಿ ಎಂದರೇನು, ಬಸ್ಸಿನಲ್ಲೇನಿದೆ?: ಜಪಾನ್ ನ ಒರಿಗಾಮಿ ಕಲೆ ಅಲ್ಲಿನ ನೆಲ ಮತ್ತುಅದರ ಸಂಸ್ಕೃತಿಯ ಜೊತೆ ಆಳವಾದ ಸಂಬಂಧ ಹೊಂದಿರುವ ಅನೇಕ ಸಂಕೇತಗಳಿಂದ ಕೂಡಿದೆ. ಅಲ್ಲಿನ ವರ್ಣಚಿತ್ರಗಳು, ಮುದ್ರಣಗಳು ಸೆರಾಮಿಕ್ಸ್ ನಲ್ಲಿ ಆಧುನಿಕ ಕಲೆಗಳಲ್ಲಿ ನಾವದನ್ನು ನೋಡಲು ಸಾಧ್ಯ.  ಈ ಬಸ್ಸಿನಲ್ಲಿ ಜಪಾನಿ ಬದುಕಿನ ಜೊತೆಗೆ ಭಾರತೀಯ ಬದುಕನ್ನೂ ಕಟ್ಟಿಕೊಡುವ ಪ್ರಯತ್ನ ಮಾಡಲಾಯಿತು.(HSM)

ಒರಿಗಾಮಿ ಮೂಲಕ ಮೂಡಿದ ಕಪ್ಪೆ ಮತ್ತು ಇತರೆ ಕಲಾಕೃತಿಗಳು
icon

(4 / 10)

ಒರಿಗಾಮಿ ಮೂಲಕ ಮೂಡಿದ ಕಪ್ಪೆ ಮತ್ತು ಇತರೆ ಕಲಾಕೃತಿಗಳು(HSM)

ಒರಿಗಾಮಿಯಲ್ಲಿ ಮೂಡಿದ ಮಂಗ
icon

(5 / 10)

ಒರಿಗಾಮಿಯಲ್ಲಿ ಮೂಡಿದ ಮಂಗ(HSM)

ಅಂಡ್ರೊಕ್ಲಿಸ್ ಮತ್ತು ಸಿಂಹ ಕಥೆಯ ಚಿತ್ರ ಹಾಗೂ ಪಕ್ಷಿಗಳ ಒಗ್ಗಟ್ಟನ್ನು ಸಾರುವ ದೃಶ್ಯಗಳನ್ನು ಬಸ್ಸಿನಲ್ಲಿ ಕಾಣಬಹುದಾಗಿತ್ತು.
icon

(6 / 10)

ಅಂಡ್ರೊಕ್ಲಿಸ್ ಮತ್ತು ಸಿಂಹ ಕಥೆಯ ಚಿತ್ರ ಹಾಗೂ ಪಕ್ಷಿಗಳ ಒಗ್ಗಟ್ಟನ್ನು ಸಾರುವ ದೃಶ್ಯಗಳನ್ನು ಬಸ್ಸಿನಲ್ಲಿ ಕಾಣಬಹುದಾಗಿತ್ತು.(HSM)

ಆಂಡ್ರೋ ಕ್ಲಿಸ್ ಮತ್ತು ಸಿಂಹದ ಕಥೆಯ ಇನ್ನೊಂದು ನೋಟ.
icon

(7 / 10)

ಆಂಡ್ರೋ ಕ್ಲಿಸ್ ಮತ್ತು ಸಿಂಹದ ಕಥೆಯ ಇನ್ನೊಂದು ನೋಟ.(HSM)

ಅರಣ್ಯ ಪ್ರದೇಶದ ಚಿತ್ರಣ, ಪೇಟೆ ಬದುಕು,  ಹಲವಾರು ವಿದ್ಯಾರ್ಥಿಗಳು ಇದನ್ನು ನೋಡಿ ವಿನ್ಯಾಸವನ್ನು ಗಮನಿಸಿದರು
icon

(8 / 10)

ಅರಣ್ಯ ಪ್ರದೇಶದ ಚಿತ್ರಣ, ಪೇಟೆ ಬದುಕು,  ಹಲವಾರು ವಿದ್ಯಾರ್ಥಿಗಳು ಇದನ್ನು ನೋಡಿ ವಿನ್ಯಾಸವನ್ನು ಗಮನಿಸಿದರು(HSM)

ಕಾಡ್ಗಿಚ್ಚನ್ನು ನುಂಗಿದ ಕೃಷ್ಣ, ಬಟ್ಟೆ, ಚರ್ಮದಂಥ ವಸ್ತುಗಳನ್ನು ಮಡಚಿ ಕಲಾತ್ಮಕ ವಸ್ತುವನ್ನಾಗಿ ಮಾಡುವುದರ ಮುಂದುವರಿದ ಭಾಗ ಕಾಗದದ ಕಲೆ. ಹೆಚ್ಚವು ಸಂಕೀರ್ಣ ಕಲಾಕೃತಿಗಳನ್ನು ರಚಿಸಲು ಈ ಕಾಗದದ ಮೂಲಕ ಕಥೆಯನ್ನು ಹೇಳುವ ಕಾರ್ಯ ನಡೆಸಲಾಗಿದೆ.
icon

(9 / 10)

ಕಾಡ್ಗಿಚ್ಚನ್ನು ನುಂಗಿದ ಕೃಷ್ಣ, ಬಟ್ಟೆ, ಚರ್ಮದಂಥ ವಸ್ತುಗಳನ್ನು ಮಡಚಿ ಕಲಾತ್ಮಕ ವಸ್ತುವನ್ನಾಗಿ ಮಾಡುವುದರ ಮುಂದುವರಿದ ಭಾಗ ಕಾಗದದ ಕಲೆ. ಹೆಚ್ಚವು ಸಂಕೀರ್ಣ ಕಲಾಕೃತಿಗಳನ್ನು ರಚಿಸಲು ಈ ಕಾಗದದ ಮೂಲಕ ಕಥೆಯನ್ನು ಹೇಳುವ ಕಾರ್ಯ ನಡೆಸಲಾಗಿದೆ.(HSM)

ಒರಿಗಾಮಿ ಕಲೆ ಒಂದು ಬದುಕನ್ನು ಕಾಗದದ ಮೂಲಕ ಕಟ್ಟಿಕೊಡುತ್ತದೆ. ನೆಲದ ಸಂಸ್ಕೃತಿಯನ್ನು ಹರಹಿಬಿಡುತ್ತದೆ. ಹೀಗೆಯೇ ಇದರ ರಚನಾ ಕೌಶಲ ವಾಸ್ತುಶಿಲ್ಪ, ಗಣಿತ ಹಾಗೂ ಇಂಜಿನಿಯರಿಂಗ್ ಮತ್ತು ಬಾಹ್ಯಾಕಾಶ ತಂತ್ರದಲ್ಲಿ ಒರಿಗಾಮಿಯ ಆಧುನಿಕ ಅನ್ವಯಗಳನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ವಿವರಿಸುವ ಕೆಲಸ ಮಾಡಲಾಗಿದೆ.
icon

(10 / 10)

ಒರಿಗಾಮಿ ಕಲೆ ಒಂದು ಬದುಕನ್ನು ಕಾಗದದ ಮೂಲಕ ಕಟ್ಟಿಕೊಡುತ್ತದೆ. ನೆಲದ ಸಂಸ್ಕೃತಿಯನ್ನು ಹರಹಿಬಿಡುತ್ತದೆ. ಹೀಗೆಯೇ ಇದರ ರಚನಾ ಕೌಶಲ ವಾಸ್ತುಶಿಲ್ಪ, ಗಣಿತ ಹಾಗೂ ಇಂಜಿನಿಯರಿಂಗ್ ಮತ್ತು ಬಾಹ್ಯಾಕಾಶ ತಂತ್ರದಲ್ಲಿ ಒರಿಗಾಮಿಯ ಆಧುನಿಕ ಅನ್ವಯಗಳನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ವಿವರಿಸುವ ಕೆಲಸ ಮಾಡಲಾಗಿದೆ.(HSM)


ಇತರ ಗ್ಯಾಲರಿಗಳು