ಧರ್ಮಸ್ಥಳದಲ್ಲಿ ಹೊಸ ವರ್ಷಾಚರಣೆ; ಮನಮೋಹಕ ಹೂವಿನ ಅಲಂಕಾರದ ಆಕರ್ಷಕ ಫೋಟೋ ವರದಿ
ನಾಡಿನ ಉದ್ದಗಲಕ್ಕೂ ಹೊಸ ಕ್ಯಾಲೆಂಡರ್ ವರ್ಷದ ಸಂಭ್ರಮಾಚರಣೆ. ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕ್ಷೇತ್ರದಲ್ಲಿ ವಿಶೇಷ ಹೂವಿನ ಅಲಂಕಾರ ಗಮನಸೆಳೆಯಿತು. ಮನಮೋಹಕ ಅಲಂಕಾರದ ಆಯ್ದ ಫೋಟೋ ವರದಿ ಇಲ್ಲಿದೆ.
(1 / 5)
ಹೊಸ ವರ್ಷ 2024 ಅನ್ನು ಬರಮಾಡಿಕೊಳ್ಳುವ ನಿಮಿತ್ತದ ಸಂಭ್ರಮಾಚರಣೆ ನಡುವೆ ಡಿಸೆಂಬರ್ 31ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳ ಜನದಟ್ಟಣೆ ಹೆಚ್ಚಾಗಿತ್ತು. ಕ್ಷೇತ್ರದಲ್ಲಿ ಹೊಸ ವರ್ಷ ಹಿನ್ನೆಲೆಯ ಪುಷ್ಪಾಲಂಕಾರ ಗಮನ ಸೆಳೆಯಿತು.
(2 / 5)
ಓಂಕಾರವನ್ನು ರಚಿಸಿ, ಬಳಿಕ ಹೂವಿನಿಂದಲೇ ಶಿವಲಿಂಗ, ತ್ರಿಶೂಲ, ಸ್ವಸ್ತಿಕ, ಓಂಕಾರ ಬರೆದು, ಹೂವುಗಳಿಂದಲೇ ಅಲಂಕಾರ ಮಾಡಿದ ದ್ವಾರ ಗಮನ ಸೆಳೆಯಿತು. ಅಲ್ಲಿ ಆನೆಯ ಮುಖವಾಡ ಮತ್ತಷ್ಟು ಮೆರುಗು ನೀಡಿತು.
(3 / 5)
ಕಾಣಿಕೆ ಹಾಕುವ ಸ್ಥಳದ ಸಮೀಪ ವಿದ್ಯುದ್ದೀಪಗಳ ಜೊತೆಗೆ ಹೂವಿನ ಅಲಂಕಾರದ ಚಪ್ಪರ ಸುಂದರವಾಗಿ ಗೋಚರಿಸಿತು. ರಾತ್ರಿ ಭಕ್ತರು ಈ ಸುಂದರ ದೃಶ್ಯವನ್ನು ಸೆರೆಹಿಡಿಯುತ್ತಿದ್ದ ದೃಶ್ಯ ಕಂಡುಬಂತು.
(4 / 5)
ಚಪ್ಪರದಲ್ಲಿ ವಿದ್ಯುತ್ ಬಲ್ಪುಗಳ ವೃತ್ತಾಕಾರದ ಸಾಲಿನೊಂದಿಗೆ ಅಡಕೆಯ ಸಾಂಪ್ರದಾಯಿಕ ಗೊನೆಯ ಶೃಂಗಾರ ಹೂವಿನಿಂದ ಆವೃತವಾಗಿ ಸುಂದರವಾಗಿ ಕಂಗೊಳಿಸಿತು.
ಇತರ ಗ್ಯಾಲರಿಗಳು