ಕನ್ನಡ ಸುದ್ದಿ  /  Photo Gallery  /  Mangaluru News Photos Of Venur Mahamastakabhisheka 2024 Venur Bahubali Mahamajjana Dakshina Kannada News Mgb

Venur Bahubali: ಮಂದಸ್ಮಿತ ಪರಮವೈರಾಗಿ ವೇಣೂರು ಬಾಹುಬಲಿಗೆ ಮಹಾಮಜ್ಜನ ಸಂಪನ್ನ

  • ಮುಗಿಲು ಮುಟ್ಟುವ ಜಯಘೋಷಗಳ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯ ಫಲ್ಗುಣಿ ನದಿ ತೀರದ ವೇಣೂರಿನ ಬಾಹುಬಲಿ ಬೆಟ್ಟದಲ್ಲಿ 421 ವರ್ಷಗಳಿಂದ 35 ಅಡಿ ಎತ್ತರಕ್ಕೆ ಸಾಕಾರಗೊಂಡಿರುವ ಪರಮವೈರಾಗಿ ಬಾಹುಬಲಿ ಸ್ವಾಮಿಗೆ ವೈಭವದ ಮಸ್ತಕಾಭಿಷೇಕ, ಶತಮಾನದ ಮೂರನೇ ಮಹಾಜಳಕ, ಪ್ರತಿಷ್ಠಾಪನೆಯ ನಂತರದ ನಾಲ್ಕನೇ ಮಹಾಮಜ್ನನ ಶುಕ್ರವಾರ (ಮಾ 1) ಸಂಪನ್ನಗೊಂಡಿತು. (ವರದಿ: ಹರೀಶ್ ಮಾಂಬಾಡಿ)

ಮಾಘ ಬಹುಳ ಷಷ್ಠಿಯ ಶುಕ್ರವಾರ 2024ರ ಮಾರ್ಚ್ 1ರಂದು ಬೆಳಗ್ಗೆ ಶ್ರೀ ದಿಗಂಬರ ಜೈನತೀರ್ಥ ಕ್ಷೇತ್ರ ಸಮಿತಿ ವೇಣೂರು ವತಿಯಿಂದ ನಿತ್ಯವಿಧಿ ಸಹಿತ ಸಿದ್ಧ ಚಕ್ರಯಂತ್ರಾರಾಧನಾ ವಿಧಾನ, ಪೂರ್ವಾಹ್ನ ಅಗ್ನಿತ್ರಯಾರ್ಚನಾಪೂರ್ವಕ ನಿರ್ವಾಣ ಕಲ್ಯಾಣ ನೆರವೇರಿತು. 
icon

(1 / 8)

ಅಗ್ರೋದಕವನ್ನು ಸಂಜೆ 4 ಗಂಟೆಯ ಶುಭ ಮುಹೂರ್ತದಲ್ಲಿ ಮೆರವಣಿಗೆಗೆ ಬೆಟ್ಟಕ್ಕೆ ತರಲಾಯಿತು. ವೇಣೂರು ಶ್ರೀ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ಸಮಿತಿಗೆ ಕೊನೇ ಕಲಭಿಬಿಷೇಕ ಸೌಭಾಗ್ಯ ದೊರೆಯಿತು.
icon

(2 / 8)

ಎಳೆನೀರು, ಕಬ್ಬಿನರಸ, ಕ್ಷೀರದಲ್ಲಿ ಮಿಂದ ಮಂದಸ್ಮಿತಃ ಭವದ ತಾಪ ನಿವಾರಣೆಗಾಗಿ ನಿರ್ಮಲಜಲದ ಅಭಿಷೇಕ ನಿನಗೆ ಮಾಡುತ್ತಿರುವೆ ಎನ್ನುತ್ತಾ 1008 ಕಲಶಗಳಿಂದ ಅಭಿಷೇಕ ನಡೆಯುತ್ತಿದ್ದಂತೆ ಸಂಜೆಯ ಹೊತ್ತು, ತಂಪಾದ ವಾತಾವರಣ ಇತ್ತು. ಅಭಿಷೇಕದ ಬಳಿಕ ಕಬ್ಬಿನ ರಸಧಾರೆ, ಹಾಲಿನ ಅಭಿಷೇಕ, ಭಕ್ತರಿಂದ ಜೈಕಾರ ಮುಗಿಲುಮುಟ್ಟಿತು.
icon

(3 / 8)

ಮೊದಲ ಜಲದ ಹನಿಗಳು ಬಾಹುಬಲಿ ಶಿರದ ಸುರುಳಿಕೂದಲಿನ ಎಡೆಗಳಲ್ಲಿ ಮುತ್ತುಗಳಂತೆ ಜಾರಿ, ಮುಖದ ಮೇಲುರುಳಿ, ಭುಜಗಳಿಂದಾಗಿ ಹೊರಗೆ ಸಿಂಚನವಾದಾಗ ಮೊದಲ ಜಯಕಾರ ಭಕ್ತರಿಂದ ಉದ್ಗಾರವಾಯಿತು.
icon

(4 / 8)

 ವೇಣೂರು ಬಾಹುಬಲಿ ಮಹಾಮಸ್ತಕಾಭಿಷೇಕದ ಕ್ಷಣ ಕಣ್ತುಂಬಿಕೊಳ್ಳುತ್ತಿರುವ ಭಕ್ತರು ಕಂಡುಬಂದರು.
icon

(5 / 8)

ಪುಷ್ಪವೃಷ್ಟಿ ನಂತರದ ವೇಣೂರು ಬಾಹುಬಲಿಯ ವಿಹಂಗಮ ನೋಟವನ್ನು ಛಾಯಾಗ್ರಾಹಕರು ವಿವಿಧ ಕೋನಗಳಿಂದ ಸೆರೆಹಿಡಿದರು. 
icon

(6 / 8)

ವೈಭವದ ಮಹಾಮಸ್ತಕಾಭಿಷೇಕ ಬಾಹುಬಲಿಯ ಹಿಂದೆ ನಿಸ್ವಾರ್ಥ ಸೇವೆಯ ತಂಡವೇ ಕೆಲಸ ಮಾಡಿತು. ಮಹಾಮಜ್ಜನಕ್ಕೆ ಬೇಕಾದ ಪರಿಕರಗಳನ್ನು ಸಿದ್ಧಪಡಿಸುವುದು ಸಣ್ಣ ಮಾತೇನಲ್ಲ. ಸಹಸ್ರ ಸಂಖ್ಯೆಯ ಭಕ್ತರು ಸೇವಾರ್ಥಿಗಳಾಗಿ ಜತೆಗೂಡಿದರು.
icon

(7 / 8)

ಚಿತ್ರಗಳು: ಜಿನೇಶ್ ಪ್ರಸಾದ್, ಪೊರ್ಲು ಕಾರ್ಕಳ-ಮೂಡುಬಿದಿರೆ (ವರದಿ: ಹರೀಶ್ ಮಾಂಬಾಡಿ)  
icon

(8 / 8)

ಚಿತ್ರಗಳು: ಜಿನೇಶ್ ಪ್ರಸಾದ್, ಪೊರ್ಲು ಕಾರ್ಕಳ-ಮೂಡುಬಿದಿರೆ (ವರದಿ: ಹರೀಶ್ ಮಾಂಬಾಡಿ)  

IPL_Entry_Point

ಇತರ ಗ್ಯಾಲರಿಗಳು