ಬೆಂಗಳೂರು, ಮೈಸೂರು, ಕೊಡಗಿನಲ್ಲಿ ಮಾವು- ಹಲಸು ಮೇಳದ ವೈಭವ : ತೋಟಗಾರಿಕೆ ಇಲಾಖೆ ಉತ್ಸವದಲ್ಲಿ ಹಣ್ಣುಗಳ ಖರೀದಿ ಜೋರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೆಂಗಳೂರು, ಮೈಸೂರು, ಕೊಡಗಿನಲ್ಲಿ ಮಾವು- ಹಲಸು ಮೇಳದ ವೈಭವ : ತೋಟಗಾರಿಕೆ ಇಲಾಖೆ ಉತ್ಸವದಲ್ಲಿ ಹಣ್ಣುಗಳ ಖರೀದಿ ಜೋರು

ಬೆಂಗಳೂರು, ಮೈಸೂರು, ಕೊಡಗಿನಲ್ಲಿ ಮಾವು- ಹಲಸು ಮೇಳದ ವೈಭವ : ತೋಟಗಾರಿಕೆ ಇಲಾಖೆ ಉತ್ಸವದಲ್ಲಿ ಹಣ್ಣುಗಳ ಖರೀದಿ ಜೋರು

ಕರ್ನಾಟಕದಲ್ಲಿ ಈಗ ಮಾವು ಹಾಗೂ ಹಲಸಿನ ಸಮಯ. ಎಲ್ಲೆಡೆ ಹಣ್ಣಿನ ಘಮ ಘಮ ಜೋರಿದೆ. ಇದರೊಟ್ಟಿಗೆ ತೋಟಗಾರಿಕೆ ಇಲಾಖೆಯು ಬೆಂಗಳೂರು, ಮೈಸೂರು, ಕೊಡಗಿನಲ್ಲಿ ಮಾವು- ಹಲಸಿನ ಮೇಳ ಹಮ್ಮಿಕೊಂಡಿದೆ. ಇದರ ನೋಟ ಇಲ್ಲಿದೆ.

ಕರ್ನಾಟಕದ ಪ್ರಮುಖ ಹಣ್ಣುಗಳಲ್ಲಿ ಒಂದಾದ ಮಾವು ಈಗ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿದೆ. ಜನ ಮಾವು ಖರೀದಿಸಿ ಸವಿಯಲು ಅನುವಾಗುವಂತೆ ತೋಟಗಾರಿಕೆ ಇಲಾಖೆ ಮಾವಿನ ಮೇಳ ಹಮ್ಮಿಕೊಂಡಿದೆ.
icon

(1 / 10)

ಹಲಸಿನ ಮೇಳವೂ ಜತೆಯಲ್ಲಿ ಇದ್ದು. ಹಲವು ರೈತರು ನೇರವಾಗಿ ಬೆಂಗಳೂರು ಸಹಿತ ಎಲ್ಲೆಡೆ ನಡೆದಿರುವ ಮೇಳಗಳಿಗೆ ತಂದಿದ್ದಾರೆ.
icon

(2 / 10)

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಹಾಪ್‍ಕಾಮ್ಸ್ ವತಿಯಿಂದ ಮೇ 26 ರವರೆಗೆ ಕೊಡಗಿನ ಹಾಪ್ ಕಾಮ್ಸ್ ಆವರಣದಲ್ಲಿ ಮಾವು ಮತ್ತು ಹಲಸು ಮೇಳ ನಡೆಯಲಿದೆ.
icon

(3 / 10)

ಬೆಂಗಳೂರಿನ ಲಾಲ್‌ಬಾಗ್‌ನ ಡಾ.ಎಂ.ಎಚ್.‌ಮರೀಗೌಡ ಸಭಾಂಗಣದಲ್ಲಿ ನಡೆದಿರುವ ಮೂರು ದಿನಗಳ ಮಾವು ಮೇಳಕ್ಕೆ ಮೊದಲ ದಿನವಾದ ಶುಕ್ರವಾರವೇ ಉತ್ತಮ ಪ್ರತಿಕ್ರಿಯೆ ದೊರೆತಿದೆ.
icon

(4 / 10)

ಹಲವು ರೈತರು ತಾವು ಬೆಳದ ಹಣ್ಣುಗಳನ್ನೇ ಮೇಳಗಳಿಗೆ ತಂದಿದ್ದಾರೆ. ಬಗೆಬಗೆಯ ಹಣ್ನುಗಳು ಸಾವಯವ ರೀತಿಯಲ್ಲಿ ಬೆಳೆದಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಜನ ಹಣ್ಣು ಖರೀದಿ ಮಾಡುತ್ತಿದ್ದಾರೆ.
icon

(5 / 10)

ಸಾಂಸ್ಕೃತಿಕ ನಗರಿ ಮೈಸೂರಿನ ಕುಪ್ಪಣ್ಣ ಪಾರ್ಕ್ ನಲ್ಲಿ ಶುಕ್ರವಾರದಿಂದ 3 ದಿನಗಳ ಕಾಲ ಮಾವು ಮತ್ತು ಹಲಸು ಮೇಳ ಆಯೋಜನೆ. ಮಾಡಲಾಗಿದೆ.
icon

(6 / 10)

ಮಲಗೋಬ, ರಸಪುರಿ, ಬಾದಾಮಿ, ಮಲ್ಲಿಕಾ, ಸಿಂಧೂರ, ತೋತಾಪುರಿ, ವಾಲಜ, ದಶೇರಿ, ದಿಲ್ ಪಸಂದ್, ಕೇಸರಿ ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಮೈಸೂರಿನಲ್ಲಿ ನಡೆದಿದೆ. ಉತ್ತರ ಕರ್ನಾಟಕದಿಂದ ಆಗಮಿಸಿರುವ ರೈತರ ಮಾವಿನ‌ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬಂದಿದೆ.
icon

(7 / 10)

ಮೈಸೂರಿನಲ್ಲಿ ಮಾವು ಹಲಸಿನ ಮೇಳಕ್ಕೆ ಚಾಲನೆ ನೀಡಿದ ಶಾಸಕ ಕೆ.ಹರೀಶಗೌಡ ಅವರು ಹಲಸಿನ ಹಣ್ಣಿನ ಸವಿ ನೋಡಿದರು.
icon

(8 / 10)

ತೋಟಗಾರಿಕೆ ಇಲಾಖೆಯ ಅಂಗ ಸಂಸ್ಥೆಯಾದ ಕೊಡಗು ಜಿಲ್ಲಾ ಹಾಪ್ ಕಾಮ್ಸ್ ಸಂಸ್ಥೆ ವತಿಯಿಂದ ಮಡಿಕೇರಿ ಅಂಚೆ ಕಚೇರಿಯ ಎದುರು ಇರುವ ಹೈಟೆಕ್ ಮಾರಾಟ ಮಳಿಗೆಯ ಆವರಣದಲ್ಲಿ ಮೇ, 26 ರವರೆಗೆ ನಡೆಯುವ ‘ಮಾವು ಮತ್ತು ಹಲಸು ಮೇಳ’ಕ್ಕೆ ಶುಕ್ರವಾರ ಚಾಲನೆ ನೀಡಿ ಮಾಹಿತಿಯನ್ನು ಕೊಡಗು ಡಿಸಿ ವೆಂಕಟ್ರಾಜ ಪಡೆದುಕೊಂಡರು.
icon

(9 / 10)

ಕೊಡಗಿನಲ್ಲಿ ನೈಸರ್ಗಿಕವಾಗಿ ಮಾಗಿಸಿದ ಕಾರ್ಬೈಡ್ ಮುಕ್ತ ಹಣ್ಣುಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದು ಮಾವು ಮೇಳದ ಉದ್ದೇಶವಾಗಿದೆ. ಮಾವು ಮೇಳದಲ್ಲಿ ಮಲಗೋವಾ, ಸಿಂಧೂರಿ, ರಸಪೂರಿ, ತೋತಾಪುರಿ, ಬಾದಾಮಿ, ಮಲ್ಲಿಕಾ, ದಸೇರಿ ಹಣ್ಣುಗಳನ್ನು ನೈಸರ್ಗಿಕವಾಗಿ ಮಾಗಿಸಿ ರೈತರಿಂದ ಗ್ರಾಹಕರಿಗೆ ಯೋಗ್ಯ ಬೆಲೆಗೆ ನೇರ ಮಾರಾಟ ಮಾಡಲಾಗುತ್ತದೆ ಎನ್ನುವುದು ಅಧಿಕಾರಿಗಳು ನೀಡುವ ವಿವರಣೆ.
icon

(10 / 10)

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು