ಭಾರತದ ವಿವಿಧ ಕೃಷಿ ವಿಶ್ವವಿದ್ಯಾಲಯಗಳು ಅಭಿವೃದ್ಧಿ ಪಡಿಸಿದ 5 ಹೊಸ ಮಾವಿನ ತಳಿಗಳು; ಅರುಣಿಕಾದಿಂದ ಅರ್ಕಾ ಸುಪ್ರಭಾತ್‌ವರೆಗೆ
ಮಾವಿನ ಹಣ್ಣಿನ ಪ್ರೇಮಿಗಳಿಗಾಗಿ ಕೃಷಿ ವಿಜ್ಞಾನಿಗಳು ಹೊಸ ಹೊಸ ತಳಿಯ ಮಾವನ್ನು ಮಾರುಕಟ್ಟೆಗೆ ತರುತ್ತಿದ್ದಾರೆ. ಈ ಮಾವಿನ ಸೀಸನ್‌ನಲ್ಲಿ ನೀವು ತಪ್ಪದೇ ರುಚಿ ನೋಡಬೇಕಾದ 5 ಅಪರೂಪದ ಮಾವಿನ ತಳಿಗಳಿವು.
(1 / 6)
ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯು ಕೃಷಿಯ ಮೇಲೂ ಪರಿಣಾಮ ಬೀರಿಲ್ಲ ಎಂದಿಲ್ಲ. ಕೃಷಿ ತಂತ್ರಜ್ಞಾನವು ವಿವಿಧ ರೀತಿಯ ಬೆಳೆಗಳಲ್ಲಿ ಹೊಸ ಹೊಸ ಆವಿಷ್ಕಾರವನ್ನು ಮಾಡುತ್ತಿರುತ್ತದೆ, ಅದಕ್ಕೆ ಮಾವು ಕೂಡ ಹೊರತಾಗಿಲ್ಲ. ಭಾರತೀಯ ಕೃಷಿ ವಿಜ್ಞಾನಿಗಳು ಮತ್ತು ತೋಟಗಾರಿಕಾ ತಜ್ಞರು ಇಳುವರಿ, ರೋಗ ನಿರೋಧಕ ಅಂಶ ಮತ್ತು ಸುವಾಸನೆಯನ್ನು ಹೆಚ್ಚಿಸಲು ಹಲವಾರು ಹೊಸ ಮಾವಿನ ಪ್ರಭೇದಗಳನ್ನು ಪರಿಚಯಿಸಿದ್ದಾರೆ. ಅಂತಹ 5 ಅಪರೂಪದ ಮಾವಿನ ತಳಿಗಳ ಬಗ್ಗೆ ಇಲ್ಲಿದೆ ಮಾಹಿತಿ. ನೀವಿನ್ನೂ ಇದರ ರುಚಿ ನೋಡಿಲ್ಲ ಅಂದ್ರೆ ಟ್ರೈ ಮಾಡಿ.
(2 / 6)
ಅರುಣಿಕಾ: ಹೆಸರು ಮಾತ್ರವಲ್ಲ ಈ ಮಾವಿನ ಹಣ್ಣಿನ ರುಚಿ ಕೂಡ ಸಖತ್ ಆಗಿದೆ. 2008 ರ ಹೊತ್ತಿಗೆ ಬಿಡುಗಡೆಯಾದ ಈ ಮಾವಿನ ತಳಿಯನ್ನು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಆಮ್ರಪಾಲಿ ಮತ್ತು ವನರಾಜ್ ಮಾವಿನ ಪ್ರಭೇದಗಳನ್ನು ಮಿಶ್ರತಳಿ ಮಾಡುವ ಮೂಲಕ ಅಭಿವೃದ್ಧಿಪಡಿಸಿದ ಹೈಬ್ರಿಡ್ ಹಣ್ಣು. ಇದು ಕೆಂಪು ಸಿಪ್ಪೆ ಹಾಗೂ ಸಿಹಿ ಸುವಾಸನೆಯನ್ನು ಹೊಂದಿರುತ್ತದೆ.
(PC: Krishi Darshan)(3 / 6)
ಆನಂದ್ ರಸರಾಜ್: 2022 ರಲ್ಲಿ ಗುಜರಾತ್‌ನ ಆನಂದ್ ಕೃಷಿ ವಿಶ್ವವಿದ್ಯಾಲಯದಿಂದ ಪರಿಚಯಿಸಲ್ಪಟ್ಟ ಆನಂದ್ ರಸರಾಜ್ ಮಾವನ್ನು 'ಗುಜರಾತ್ ಮಾವು 1' ಎಂದೂ ಕರೆಯುತ್ತಾರೆ. ಇದು ಸ್ಥಿರವಾದ ಫಲ ನೀಡುತ್ತದೆ. ಲ್ಯಾಂಗ್ರಾ ಮತ್ತು ದಶೇಹರಿಯಂತಹ ಜನಪ್ರಿಯ ಪ್ರಭೇದಗಳಲ್ಲಿ ಸ್ಥಿರ ಇಳುವರಿ ಇರುವುದಿಲ್ಲ. ಭಾರತದಲ್ಲಿ ಸಿಗುವ ಇತರ ಮಾವಿನ ಹಣ್ಣಿನ ತಳಿಗಳಿಗೆ ಹೋಲಿಸಿದರೆ ಈ ಮಾವಿನಹಣ್ಣಿಗೆ ನೊಣದ ಕಾಟ ಕಡಿಮೆ.
(PC: Navbharat Times)(4 / 6)
ಅವಧ್ ಸಮೃದ್ಧಿ ಮತ್ತು ಅವಧ್ ಮಧುರಿಮಾ: ಲಕ್ನೋದಲ್ಲಿರುವ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಫಾರ್ ಸಬ್‌ಟ್ರಾಪಿಕಲ್ ಹಾರ್ಟಿಕಲ್ಚರ್ (CISH) ಅಭಿವೃದ್ಧಿಪಡಿಸಿದ ಅವಧ್ ಸಮೃದ್ಧಿ ಮತ್ತು ಅವಧ್ ಮಧುರಿಮಾ ಎರಡು ಮಾವಿನ ಮಿಶ್ರತಳಿಗಳಾಗಿದ್ದು ಈ ಮಾವಿನ ತಳಿಗಳ ಮೇಲೆ ಪ್ರಯೋಗಗಳು ನಡೆಯುತ್ತಲಿವೆ. 2023 ರಲ್ಲಿ ಈ ಮಾವಿನ ಪ್ರಬೇಧವನ್ನು ಪರಿಚಯಿಸಲಾಯಿತು.
(PC: The Better India)(5 / 6)
ಅರ್ಕಾ ಸುಪ್ರಭಾತ್ (ಎಚ್-14): ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (IIHR) ಅಭಿವೃದ್ಧಿಪಡಿಸಿದ ಅರ್ಕಾ ಸುಪ್ರಭಾತ್ ತಳಿಯನ್ನು 2019 ರಲ್ಲಿ ಪರಿಚಯಿಸಲಾಯಿತು. ಇದು ಹೆಚ್ಚಿನ ಇಳುವರಿ ನೀಡುವ ಪ್ರಬೇಧವಾಗಿದೆ. ಈ ಮಾವು ಗಿಡ ನೆಟ್ಟು 4 ವರ್ಷದ ನಂತರ ಫಲ ನೀಡುತ್ತದೆ. ಪ್ರತಿ ಮರವು ಸುಮಾರು 35 ರಿಂದ 40 ಕೆಜಿ ಇಳುವರಿ ನೀಡುತ್ತದೆ. ಗಾಢ ಕಿತ್ತಳೆ ಬಣ್ಣದ ಸಿಪ್ಪೆ ಇರುವ ಈ ಮಾವಿನ ಹಣ್ಣು ಕೋಣೆಯ ಉಷ್ಣಾಂಶದಲ್ಲಿ 8 ರಿಂದ 10 ದಿನ ತಾಜವಾಗಿರುತ್ತದೆ.
(PC: Amazon )(6 / 6)
ಪೂಸಾ ಸೂರ್ಯ: ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (IARI), ನವದೆಹಲಿಯಿಂದ ಅಭಿವೃದ್ಧಿಪಡಿಸಲ್ಪಟ್ಟ ಪೂಸಾ ಸೂರ್ಯವನ್ನು 2002 ರಲ್ಲಿ ಬಿಡುಗಡೆ ಮಾಡಲಾಯಿತು ಮತ್ತು 2003 ರಲ್ಲಿ ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರವು ವಾಣಿಜ್ಯ ಕೃಷಿಗೆ ಅನುಮೋದಿಸಿತು. ಇದು ಸ್ಥಿರವಾದ ವಾರ್ಷಿಕ ಇಳುವರಿ ನೀಡುವ ಮಾವಿನ ಪ್ರಬೇಧವಾಗಿದೆ. ಒಂದು ಮಾವಿನಹಣ್ಣು 260 ರಿಂದ 290 ಗ್ರಾಂಗಳ ಇರುತ್ತದೆ.
(PC: Amazon)ಇತರ ಗ್ಯಾಲರಿಗಳು