ಹೃದ್ರೋಗದ ಅಪಾಯ ಕಡಿಮೆಯಾಗುವುದರಿಂದ ಜೀರ್ಣಕ್ರಿಯೆ ಸುಧಾರಿಸುವವರೆಗೆ; ಮಾವಿನ ಹಣ್ಣು ತಿನ್ನೋದ್ರಿಂದ ಇಷ್ಟೆಲ್ಲಾ ಪ್ರಯೋಜನ
- ಮಾವಿನ ಹಣ್ಣಿನ ಸೀಸನ್ ಶುರುವಾಗುತ್ತೆ ಎನ್ನುವ ಕಾರಣಕ್ಕೆ ಹಲವರು ಬೇಸಿಗೆಗಾಗಿ ಕಾಯುತ್ತಾರೆ. ಪ್ರತಿದಿನ ಮಾವಿನ ಹಣ್ಣು ತಿನ್ನುವವರೂ ಇದ್ದಾರೆ. ನಿರಂತರವಾಗಿ ಮಾವು ತಿನ್ನೋದ್ರಿಂದ ದೇಹಕ್ಕೆ ಎಷ್ಟೆಲ್ಲಾ ಪ್ರಯೋಜನ ಸಿಗುತ್ತೆ ನೋಡಿ.
- ಮಾವಿನ ಹಣ್ಣಿನ ಸೀಸನ್ ಶುರುವಾಗುತ್ತೆ ಎನ್ನುವ ಕಾರಣಕ್ಕೆ ಹಲವರು ಬೇಸಿಗೆಗಾಗಿ ಕಾಯುತ್ತಾರೆ. ಪ್ರತಿದಿನ ಮಾವಿನ ಹಣ್ಣು ತಿನ್ನುವವರೂ ಇದ್ದಾರೆ. ನಿರಂತರವಾಗಿ ಮಾವು ತಿನ್ನೋದ್ರಿಂದ ದೇಹಕ್ಕೆ ಎಷ್ಟೆಲ್ಲಾ ಪ್ರಯೋಜನ ಸಿಗುತ್ತೆ ನೋಡಿ.
(1 / 9)
ಬೇಸಿಗೆ ಬಂತೆಂದರೆ ಹಣ್ಣುಗಳ ರಾಜ ಮಾವು ಮಾರುಕಟ್ಟೆಯನ್ನು ಅಲಂಕರಿಸುತ್ತದೆ. ಈ ರುಚಿಯಾದ, ಸುವಾಸನೆಭರಿತ ಹಣ್ಣಿಗೆ ಸಾಟಿ ಬೇರಿಲ್ಲ. ಮಾವು ನಾಲಿಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಆರೋಗ್ಯವನ್ನೂ ಸುಧಾರಿಸುತ್ತದೆ. ಈ ಹಣ್ಣು ಅಗತ್ಯ ಪೋಷಕಾಂಶಗಳು ಮತ್ತು ಕ್ಯಾರೊಟಿನಾಯ್ಡ್‌ಗಳಿಂದ ಕೂಡಿದೆ. ಇದರಲ್ಲಿ ಪ್ರಬಲವಾದ ಉತ್ಕರ್ಷಣ ನಿರೋಧಕ ಅಂಶಗಳಿವೆ.
(Freepik)(2 / 9)
ಫೈಬರ್, ವಿಟಮಿನ್ ಸಿ ಮತ್ತು ವಿಟಮಿನ್ ಎ ಕೂಡ ಇದರಲ್ಲಿ ಸಮೃದ್ಧವಾಗಿದೆ. ರೋಗನಿರೋಧಕ ಶಕ್ತಿ ಹೆಚ್ಚುವುದರಿಂದ ಹೃದ್ರೋಗದ ಅಪಾಯ ದೂರಾಗುವವರೆಗೆ ಮಾವಿನ ಹಣ್ಣಿನ ನಿರಂತರ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ.
(Freepik)(3 / 9)
ಉತ್ತಮ ನಾರಿನಾಂಶದ ಮೂಲ: ನಮ್ಮ ಜೀರ್ಣಕ್ರಿಯೆ ಸುಧಾರಿಸಲು ಸಾಕಷ್ಟು ನಾರಿನಾಂಶ ಇರುವ ಆಹಾರ ಖಾದ್ಯಗಳನ್ನು ಸೇವಿಸುವುದು ಅಗತ್ಯ. ಇದು ಕೊಲೆಸ್ಟ್ರಾಲ್ ಕಡಿಮೆ ಮಾಡಲು, ಹೃದ್ರೋಗ ಮತ್ತು ಕೆಲವು ರೀತಿಯ ಕ್ಯಾನ್ಸರ್ ಸೇರಿದಂತೆ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪೆಕ್ಟಿನ್ ಎಂದು ಕರೆಯಲ್ಪಡುವ ಸಂಯುಕ್ತವು ಮಾವಿನಹಣ್ಣಿನಲ್ಲಿ ಕಂಡುಬರುವ ಪ್ರಿಬಯಾಟಿಕ್ ಫೈಬರ್ ಆಗಿದ್ದು ಅದು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಅಲ್ಲದೇ ಉತ್ತಮ ಕರುಳಿನ ಬ್ಯಾಕ್ಟೀರಿಯಾವನ್ನು ಪೋಷಿಸುತ್ತದೆ.
(Freepik)(4 / 9)
ಕ್ಯಾರೊಟಿನಾಯ್ಡ್‌ಗಳಲ್ಲಿ ಸಮೃದ್ಧವಾಗಿದೆ: ಮಾವಿನಹಣ್ಣಿನಲ್ಲಿ ಕ್ಯಾರೊಟಿನಾಯ್ಡ್‌ಗಳು ಸಮೃದ್ಧವಾಗಿವೆ. ಇದು ಪ್ರಬಲವಾದ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿರುವ ಸಸ್ಯ ಸಂಯುಕ್ತ. ಮಾವಿನಲ್ಲಿ ಬೀಟಾ ಕ್ಯಾರೋಟಿನ್, ಲುಟೀನ್ ಮತ್ತು ಜಿಯಾಕ್ಸಾಂಥಿನ್ ಇದ್ದು, ಇವು ಕಣ್ಣಿನ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತವೆ. ಇದರಲ್ಲಿ ವಿಟಮಿನ್ ಎ ಕೂಡ ಇದ್ದು ಇದು ಸಂತಾನೋತ್ಪತ್ತಿ ಆರೋಗ್ಯಕ್ಕೆ ಪ್ರಮುಖ ಪೋಷಕಾಂಶವಾಗಿದೆ, ಏಕೆಂದರೆ ಇದು ವೀರ್ಯ ಮತ್ತು ಅಂಡಾಣುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಗರ್ಭಾವಸ್ಥೆಯಲ್ಲಿ ಭ್ರೂಣದ ಬೆಳವಣಿಗೆಯನ್ನು ಬೆಂಬಲಿಸುತ್ತದೆ.
(Freepik)(5 / 9)
ಕೀಲುಗಳನ್ನು ಬಲ ಪಡಿಸುತ್ತದೆ: ಮಾವು ವಿಟಮಿನ್ ಸಿಯ ಅತ್ಯುತ್ತಮ ಮೂಲವಾಗಿದೆ, ಇದು ಕೀಲುಗಳನ್ನು ಬಲಪಡಿಸಲು ನೆರವಾಗುತ್ತದೆ. ರೋಗನಿರೋಧಕ ಆರೋಗ್ಯ ಸುಧಾರಿಸುವ ಜೊತೆಗೆ ಕಾಲಜನ್ ನಿರ್ಮಾಣಕ್ಕೂ ವಿಟಮಿನ್ ಸಿ ಅತ್ಯಗತ್ಯ. ಕಾಲಜನ್ ಚರ್ಮ, ಮೂಳೆಗಳು, ಅಸ್ಥಿರಜ್ಜುಗಳು ಮತ್ತು ಕಾರ್ಟಿಲೆಜ್‌ನಂತಹ ದೇಹದ ಅಂಗಾಂಶಗಳ ಆರೋಗ್ಯ ಸುಧಾರಿಸುವ ಪ್ರೊಟೀನ್ ಆಗಿದೆ. ಇದು ಕೀಲುಗಳನ್ನು ನಯಗೊಳಿಸುವ ಮತ್ತು ಘರ್ಷಣೆಯನ್ನು ಕಡಿಮೆ ಮಾಡುವ ದ್ರವವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.
(Freepik)(6 / 9)
ಹೃದಯದ ಆರೋಗ್ಯವನ್ನು ಬೆಂಬಲಿಸುತ್ತದೆ: ಒಂದು ಕಪ್ ಮಾವಿನಹಣ್ಣಿನಲ್ಲಿ ಶೇ 8 ರಷ್ಟು ಪೊಟ್ಯಾಸಿಯಮ್ ಅಂಶವಿರುತ್ತದೆ. ಪೊಟ್ಯಾಸಿಯಮ್ ಹೃದಯದ ಆರೋಗ್ಯಕ್ಕೆ ಅಗತ್ಯ ಪೋಷಕಾಂಶವಾಗಿದೆ, ರಕ್ತದೊತ್ತಡ ನಿರ್ವಹಣೆಯಲ್ಲಿ ಇದರ ಪಾತ್ರ ಮಹತ್ವದ್ದು. ಜೀವಕೋಶಗಳ ಒಳಗೆ ಮತ್ತು ಹೊರಗೆ ಪೊಟ್ಯಾಸಿಯಮ್ ಮತ್ತು ಸೋಡಿಯಂ ಚಲನೆಯು ದೇಹವು ಆರೋಗ್ಯಕರ ದ್ರವ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಸಾಕಷ್ಟು ಪೊಟ್ಯಾಸಿಯಮ್ ಇಲ್ಲದೆ, ಈ ಸಮತೋಲನವು ಬದಲಾಗಬಹುದು. ಇದರಿಂದ ಹೃದಯಕ್ಕೆ ರಕ್ತವನ್ನು ಪಂಪ್ ಮಾಡಲು ಕಷ್ಟವಾಗಬಹುದು. ಕಾಲಾನಂತರದಲ್ಲಿ, ಇದು ಅಧಿಕ ರಕ್ತದೊತ್ತಡ ಮತ್ತು ಪಾರ್ಶ್ವವಾಯು ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸಬಹುದು.
(PC: Pixabay)(7 / 9)
ಕಬ್ಬಿಣಾಂಶ ಹೀರಿಕೊಳ್ಳಲು ಸಹಾಯ ಮಾಡುತ್ತದೆ: ಮಾವಿನ ಹಣ್ಣಿನಲ್ಲಿ ಹೆಚ್ಚಿನ ವಿಟಮಿನ್ ಸಿ ಅಂಶ ಹೆಚ್ಚಿರುವ ಕಾರಣ ಇದು ಕಬ್ಬಿಣಾಂಶ ಹೀರಿಕೊಳ್ಳುಲು ಸಹಾಯ ಮಾಡುತ್ತದೆ. ಕಬ್ಬಿಣಾಂಶವು ದೇಹಕ್ಕೆ ಅತೀ ಅಗತ್ಯ.
(PC: Pixabay)(8 / 9)
ಇಷ್ಟೆಲ್ಲಾ ಪ್ರಯೋಜನಗಳಿವೆ ಎಂದು ಮಾವಿನ ಹಣ್ಣನ್ನು ಅತಿಯಾಗಿ ತಿನ್ನುವುದು ಕೂಡ ಸರಿಯಲ್ಲ. ನಿಯಮಿತವಾಗಿ ಮಾವಿನ ಹಣ್ಣು ತಿನ್ನುವುದರಿಂದ ನಮ್ಮ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ.
(PC: Pixabay)ಇತರ ಗ್ಯಾಲರಿಗಳು