124 ವರ್ಷಗಳ ಐತಿಹಾಸಿಕ ದಾಖಲೆ ಸರಿಗಟ್ಟಿದ ಮನು ಭಾಕರ್; 1900ರ ರೆಕಾರ್ಡ್ ಮುರಿಯಲು ಇನ್ನೊಂದೇ ಹೆಜ್ಜೆ ಬಾಕಿ
- Manu Bhaker Record: ಭಾರತದ ಶೂಟರ್ ಮನು ಭಾಕರ್ ಅವರು 124 ವರ್ಷಗಳ ಹಿಂದೆ ಒಲಿಂಪಿಕ್ಸ್ನಲ್ಲಿ ಕೋಲ್ಕತ್ತಾದ ನಾರ್ಮನ್ ಪ್ರಿಚರ್ಡ್ ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ.
- Manu Bhaker Record: ಭಾರತದ ಶೂಟರ್ ಮನು ಭಾಕರ್ ಅವರು 124 ವರ್ಷಗಳ ಹಿಂದೆ ಒಲಿಂಪಿಕ್ಸ್ನಲ್ಲಿ ಕೋಲ್ಕತ್ತಾದ ನಾರ್ಮನ್ ಪ್ರಿಚರ್ಡ್ ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ.
(1 / 5)
ಮನು ಭಾಕರ್ ಒಂದೇ ಒಲಿಂಪಿಕ್ಸ್ನಲ್ಲಿ 2 ಪದಕ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಸ್ವಾತಂತ್ರ್ಯ ಭಾರತದ ನಂತರ ಈ ಸಾಧನೆಗೈದ ಮೊದಲ ಕ್ರೀಡಾಪಟು ಎನಿಸಿದ್ದಾರೆ. ಆದರೆ ಸ್ವತಂತ್ರ ಪೂರ್ವದಲ್ಲಿ ಅಂದರೆ 1900ರಲ್ಲಿ ನಡೆದಿದ್ದ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಅಂದಿನ ಬ್ರಿಟಿಷ್ ನಾರ್ಮನ್ ಪ್ರಿಚರ್ಡ್ ಭಾರತದ ಪರ ಎರಡು ಪದಕ ಗೆದ್ದಿದ್ದರು. ಮನು 2 ಕಂಚಿನ ಪದಕ ಗೆದ್ದರೆ, ಪ್ರಿಚರ್ಡ್ ಎರಡು ಬೆಳ್ಳಿ ಪದಕಗಳನ್ನು ಜಯಿಸಿದ್ದರು.
(2 / 5)
ಪ್ಯಾರಿಸ್ನಲ್ಲಿ ನಡೆದ 1900ರ ಒಲಿಂಪಿಕ್ಸ್ನಲ್ಲಿ ನಾರ್ಮನ್ ಪ್ರಿಚರ್ಡ್ 200 ಮೀಟರ್ ಹರ್ಡಲ್ಸ್ ಮತ್ತು 200 ಮೀಟರ್ ಸ್ಪ್ರಿಂಟ್ ಸ್ಪರ್ಧೆಗಳಲ್ಲಿ ಬೆಳ್ಳಿ ಪದಕಗಳಿಗೆ ಮುತ್ತಿಕ್ಕಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಒಲಿಂಪಿಕ್ಸ್ನಲ್ಲಿ ಭಾರತ ಗೆದ್ದ ಮೊದಲ ಪದಕ ಇದಾಗಿದೆ.
(3 / 5)
ನಾರ್ಮನ್ ಪ್ರಿಚರ್ಡ್ ಅವರ ಒಂದೇ ಒಲಿಂಪಿಕ್ಸ್ನಲ್ಲಿ 2 ಪದಕ ಗೆದ್ದ ದಾಖಲೆ ಸರಿಗಟ್ಟಿರುವ ಮನು, ಸ್ವತಂತ್ರ ಭಾರತದಲ್ಲಿ ಎರಡು ಪದಕ ಗೆದ್ದ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮನು 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದಿದ್ದಾರೆ.
(4 / 5)
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ತಾನು ಸ್ಪರ್ಧಿಸಿದ ಎರಡೂ ಸ್ಪರ್ಧೆಗಳಲ್ಲಿ ಕಂಚಿಗೆ ಮುತ್ತಿಕ್ಕಿರುವ ಮನು ಇದೀಗ ಮತ್ತೊಂದು ಸ್ಪರ್ಧೆಯಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ. 25 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಮನು ಭಾಕರ್ ಮತ್ತೊಂದು ಪದಕ ಗೆದ್ದು ಪ್ರಿಚಾರ್ಡ್ ದಾಖಲೆ ಮುರಿಯುವ ನಿರೀಕ್ಷೆಯಲ್ಲಿದ್ದಾರೆ. ಅವರು ಪದಕ ಗೆದ್ದರೆ, ಒಂದೇ ಒಲಿಂಪಿಕ್ಸ್ನಲ್ಲಿ ಮೂರು ಪದಕ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಇತರ ಗ್ಯಾಲರಿಗಳು