ಭಗವದ್ಗೀತೆಯ ಸಾರವೇ ಕಂಚಿನ ಪದಕ ಗೆಲ್ಲಲು ಪ್ರೇರಣೆ; ಅರ್ಜುನನಿಗೆ ಕೃಷ್ಣ ಹೇಳಿದ್ದನ್ನು ನೆನೆದ ಮನು ಭಾಕರ್
- Manu Bhaker on Bhagavad Gita: 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿರುವ ಭಾರತದ ಶೂಟರ್ ಮನು ಭಾಕರ್, ಭಗವದ್ಗೀತೆಯಲ್ಲಿ ಅರ್ಜುನನಿಗೆ ಕೃಷ್ಣ ಹೇಳಿದ್ದನ್ನು ನೆನೆದಿದ್ದಾರೆ.
- Manu Bhaker on Bhagavad Gita: 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿರುವ ಭಾರತದ ಶೂಟರ್ ಮನು ಭಾಕರ್, ಭಗವದ್ಗೀತೆಯಲ್ಲಿ ಅರ್ಜುನನಿಗೆ ಕೃಷ್ಣ ಹೇಳಿದ್ದನ್ನು ನೆನೆದಿದ್ದಾರೆ.
(1 / 5)
2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಮತ್ತು ಶೂಟಿಂಗ್ನಲ್ಲಿ ಪದಕಕ್ಕೆ ಮುತ್ತಿಕ್ಕಿದ ಪ್ರಥಮ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 22 ವರ್ಷದ ಮನು ಭಾಕರ್, ತನ್ನ ಗೆಲುವಿಗೆ ಕಾರಣ ಏನೆಂದು ತಿಳಿಸಿದ್ದಾರೆ.
(2 / 5)
ಜುಲೈ 28ರ ಭಾನುವಾರ ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಫೈನಲ್ ಸ್ಪರ್ಧೆಯಲ್ಲಿ ಮನು ಭಾಕರ್ ಕಂಚಿನ ಪದಕ ಗೆದ್ದು ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಜಾಗತಿಕ ಹಬ್ಬದಲ್ಲಿ ಭಾರತಕ್ಕೆ ಒಲಿದ ಚೊಚ್ಚಲ ಪದಕ ಇದಾಗಿದೆ.
(Team India-X)(3 / 5)
ಪದಕ ಗೆದ್ದಿರುವ ಸಂಭ್ರಮದಲ್ಲಿರುವ ಮನು ಭಾಕರ್, ತನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಯನ್ನು ಇದೇ ವೇಳೆ ನೆನಪಿಸಿಕೊಂಡಿರುವ ಮನು, ತನ್ನ ಗೆಲುವಿನಲ್ಲಿ ಎಷ್ಟು ಪಾತ್ರವಹಿಸಿತು ಎಂಬುದನ್ನು ತಿಳಿಸಿದ್ದಾರೆ.
(PTI)(4 / 5)
ಗೀತೆಯಲ್ಲಿರುವ ಕರ್ಮಫಲ ಸಿದ್ಧಾಂತದ ಕುರಿತು ಮಾತನಾಡಿದ ಮನು, ಫೈನಲ್ನಲ್ಲಿ ಹೆಚ್ಚು ಸಹಾಯವಾಗಿದ್ದು ಭಗವದ್ಗೀತೆ. ಗೀತೆಯನ್ನು ನಾನು ತುಂಬಾ ಓದಿದ್ದೇನೆ. ಕರ್ಮದ ಮೇಲೆ ಕೇಂದ್ರೀಕರಿಸಬೇಕು, ಫಲಿತಾಂಶದ ಮೇಲಲ್ಲ ಎಂದು ಅರ್ಜುನನಿಗೆ ಕೃಷ್ಣ ಹೇಳುವ ಮಾತುಗಳು ಫೈನಲ್ನಲ್ಲಿ ನನ್ನ ತಲೆಯಲ್ಲಿ ಓಡುತ್ತಿದ್ದವು ಎಂದಿದ್ದಾರೆ.
(PTI)ಇತರ ಗ್ಯಾಲರಿಗಳು