Tomato Mood: ಕರ್ನಾಟಕದಲ್ಲಿ ಒಂದೂವರೆ ತಿಂಗಳ ನಂತರ ತಗ್ಗಿತು ಟೊಮೆಟೊ ಬೆಲೆ: ಖರೀದಿಯೂ ಸಹಜ, ಹೀಗಿದೆ ನೋಡಿ ಮಾರುಕಟ್ಟೆ ಮೂಡ್
- ಕರ್ನಾಟಕದಲ್ಲಿ ಒಂದೂವರೆ ತಿಂಗಳಿಂದ ಟೊಮೆಟೊ ಬೆಲೆ ಇಳಿದಿರಲಿಲ್ಲ. ಉತ್ತರ ಭಾರತಕ್ಕೆ( North India) ಹೆಚ್ಚು ಸರಬರಾಜಾಗಿ ನಮ್ಮವರು ಹೆಚ್ಚಿನ ದರಕ್ಕೆ ಖರಿದೀಸುವಂತಾಗಿತ್ತು. ಅಲ್ಲಿ ಮಳೆ ತಗ್ಗಿ ಟೊಮೆಟೊ ಹೆಚ್ಚು ಬರುತ್ತಿರುವುದು ದರ ಇಳಿಕೆಗೆ ಕಾರಣ. ಶುಕ್ರವಾರ 40 ರಿಂದ 50 ರೂ. ಕೆ.ಜಿ.ಗೆ ಜನ ಖರೀದಿಸುತ್ತಿದ್ದುದು ಕಂಡು ಬಂದಿತು. ಟೊಮೆಟೊ ಮಾರುಕಟ್ಟೆ ನೋಟ ಹೀಗಿದೆ.

(1 / 7)
ಟೊಮೆಟೋ ಇಲ್ಲದೇ ಅಡುಗೆಯಿಲ್ಲ. ಖರೀದಿ ಮಾಡದೇ ವಿಧಿಯಿಲ್ಲ ಎನ್ನುವ ಭಾವನೆಯ ನಡುವೆ ದರ ಇಳಿಕೆ ಖುಷಿಯಲ್ಲಿ ಖರೀದಿಗೆ ಮುಂದಾದ ಮೈಸೂರು ಗ್ರಾಹಕರು
(2 / 7)
ಟೊಮೆಟೊ ಜತೆಗೆ ಬೇರೆ ತರಕಾರಿ ಮಾರಿದರೂ ನಮ್ಮ ಬದುಕು. ದರ ಹೆಚ್ಚು ಕಡಿಮೆಯಾದರೂ ಮಾರಾಟ ನಿರಂತರ ಎನ್ನುತ್ತಾ ರಸ್ತೆಗೆ ಇಳಿದ ವ್ಯಾಪಾರಸ್ಥ
(3 / 7)
ಬೆಳೆಯುವುದಷ್ಟೇ ನಮ್ಮ ಕಾಯಕ. ದರ ನಮ್ಮ ಕೈಯಲ್ಲಿದೆಯೇ.,. ಎನ್ನುವ ಭಾವನೆಯೊಂದಿಗೆ ಬೆಳೆದ ಟೊಮೆಟೊ ತುಂಬುವಲ್ಲಿ ನಿರತ ಚಿಕ್ಕಬಳ್ಳಾಪುರ- ಕೋಲಾರ ರೈತರು..
(4 / 7)
ದರ ಏರಿಳಿಕೆಯಾದರೆ ನನ್ನ ಕಾಯಕ ನಿಲ್ಲುವುದೇನು .. ಎನ್ನುತ್ತಾ ಟೊಮೆಟೊವನ್ನು ಬೆಂಗಳೂರಿನ ಮಾರುಕಟ್ಟೆಗೆ ಸಾಗಿಸುತ್ತಿರುವ ಕಾರ್ಮಿಕ..
(6 / 7)
ಬಹಳ ದಿನದ ನಂತರ ಟೊಮೆಟೊ ಖರೀದಿಸಿದೆ ಎಂದು ಗ್ರಾಹಕ ಉತ್ತರ ಕರ್ನಾಟಕದ ಕೊಪ್ಪಳ ಮಾರುಕಟ್ಟೆಯಲ್ಲಿ ಖುಷಿಯಾಗಿದ್ದು ಹೀಗೆ
ಇತರ ಗ್ಯಾಲರಿಗಳು