OTT Kannada Movie: ಈ ವೀಕೆಂಡ್‌ಗೆ ಒಟಿಟಿಗೆ ಬಂದಿದೆ ಒಂದೊಳ್ಳೆ ಕನ್ನಡದ ಸಿನಿಮಾ; ಯಾವುದದು, ವೀಕ್ಷಣೆ ಎಲ್ಲಿ?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ott Kannada Movie: ಈ ವೀಕೆಂಡ್‌ಗೆ ಒಟಿಟಿಗೆ ಬಂದಿದೆ ಒಂದೊಳ್ಳೆ ಕನ್ನಡದ ಸಿನಿಮಾ; ಯಾವುದದು, ವೀಕ್ಷಣೆ ಎಲ್ಲಿ?

OTT Kannada Movie: ಈ ವೀಕೆಂಡ್‌ಗೆ ಒಟಿಟಿಗೆ ಬಂದಿದೆ ಒಂದೊಳ್ಳೆ ಕನ್ನಡದ ಸಿನಿಮಾ; ಯಾವುದದು, ವೀಕ್ಷಣೆ ಎಲ್ಲಿ?

  • Maryade Prashne OTT: ಕಳೆದ ವರ್ಷದ ನವೆಂಬರ್ 22ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರ ಜತೆಗೆ ವಿಮರ್ಶಕರಿಂದಲೂ ಮೆಚ್ಚುಗೆ ಪಡೆದಿತ್ತು ಮರ್ಯಾದೆ ಪ್ರಶ್ನೆ ಸಿನಿಮಾ. 'ಮರ್ಯಾದೆ ಪ್ರಶ್ನೆ'ಯಲ್ಲಿ ಸುನೀಲ್ ರಾವ್, ಶೈನ್ ಶೆಟ್ಟಿ , ರಾಕೇಶ್ ಅಡಿಗ, ಪೂರ್ಣಚಂದ್ರ ಮೈಸೂರು ಸೇರಿ ಹಲವು ಕಲಾವಿದರು ನಟಿಸಿದ್ದರು. ಈಗ ಇದೇ ಸಿನಿಮಾ ಒಟಿಟಿ ಅಂಗಳ ತಲುಪಿದೆ.

ಬೇರೆ ಭಾಷೆಗಳಿಗೆ ಹೋಲಿಕೆ ಮಾಡಿದರೆ, ಕನ್ನಡದ ಸಿನಿಮಾಗಳು ಒಟಿಟಿಗೆ ಅಂಗಳಕ್ಕೆ ಬರುವುದು ಕೊಂಚ ತಡವಾಗಿ. ಅದರಲ್ಲಿಯೂ ಎಲ್ಲ ಸಿನಿಮಾಗಳು ಸ್ಟ್ರೀಮಿಂಗ್‌ ಆರಂಭಿಸುತ್ತವೆ ಎಂದು ಹೇಳುವುದೂ ಸಹ ಕಷ್ಟವೇ.
icon

(1 / 8)

ಇದೀಗ ಎರಡೂವರೆ ತಿಂಗಳ ಹಿಂದೆ ತೆರೆಕಂಡು, ಕರುನಾಡಿನ ಜನರ ಪ್ರೀತಿ ಗಳಿಸಿದ್ದ ಮರ್ಯಾದೆ ಪ್ರಶ್ನೆ ಸಿನಿಮಾ ಕೊನೆಗೂ ಒಟಿಟಿಗೆ ಆಗಮಿಸಿದೆ. ಯಾವ ಒಟಿಟಿ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
icon

(2 / 8)

ಸುನೀಲ್ ರಾವ್, ಶೈನ್ ಶೆಟ್ಟಿ , ರಾಕೇಶ್ ಅಡಿಗ, ಪೂರ್ಣಚಂದ್ರ ಮೈಸೂರು, ತೇಜು ಬೆಳವಾಡಿ ಸೇರಿದಂತೆ ಹಲವು  ಕಲಾವಿದರು ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ಮರ್ಯಾದೆ ಪ್ರಶ್ನೆ. 
icon

(3 / 8)

ನಿರ್ದೇಶಕ ನಾಗರಾಜ್ ಸೋಮಯಾಜಿ ಒಂದಷ್ಟು ಮನರಂಜನಾತ್ಮಕ ಅಂಶಗಳೊಂದಿಗೆ ಮರ್ಯಾದೆ ಪ್ರಶ್ನೆ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಸಿನಿಮಾ.
icon

(4 / 8)

ಆರ್ ಜೆ ಪ್ರದೀಪ್ ಹೆಣೆದ ಕಥೆಯನ್ನು ಅಷ್ಟೇ ಅಚ್ಚುಕಟ್ಟಾಗಿ ದೃಶ್ಯರೂಪಕ್ಕೆ ಇಳಿಸಿದ್ದರು ನಾಗರಾಜ್‌ ಸೋಮಯಾಜಿ. ಅವರ ಮೊದಲ ಪ್ರಯತ್ನಕ್ಕೆ ಸಕ್ಕತ್ ಸ್ಟುಡಿಯೋ ಸಾಥ್ ಕೊಟ್ಟಿತ್ತು. ಕ್ರಿಯೇಟಿವ್ ಹೆಡ್ ಆಗಿಯೂ ಆರ್ ಜೆ ಪ್ರದೀಪ್ ಈ ಚಿತ್ರದ ಜತೆ ನಿಂತಿದ್ದರು.
icon

(5 / 8)

ಸಂದೀಪ್ ವಲ್ಲೂರಿ ಈ ಚಿತ್ರಕ್ಕೆ ಕ್ಯಾಮರಾ ಹಿಡಿದರೆ, ಅರ್ಜುನ್ ರಾಮು ಅವರ ಸಂಗೀತ ಈ ಚಿತ್ರಕ್ಕಿದೆ. ವಿದ್ಯಾ ಗಾಂಧಿ ರಾಜನ್, ಶ್ವೇತಾ ಆರ್ ಪ್ರಸಾದ್ ಈ ಚಿತ್ರದ ನಿರ್ಮಾಪಕರು. 
icon

(6 / 8)

ಕಳೆದ ವರ್ಷದ ನವೆಂಬರ್ 22 ರಂದು ಈ ಸಿನಿಮಾ ರಾಜ್ಯದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಇದೀಗ ಇದೇ ಸಿನಿಮಾ ಕೆಲ ತಿಂಗಳ ಬಳಿಕ ಒಟಿಟಿ ಅಂಗಳಕ್ಕೆ ಆಗಮಿಸಿದೆ.
icon

(7 / 8)

ಇದೀಗ ಇದೇ ಮರ್ಯಾದೆ ಪ್ರಶ್ನೆ ಸಿನಿಮಾ ಸದ್ದಿಲ್ಲದೆ ಫೆ. 7ರಿಂದ ಅಮೆಜಾನ್‌ ಪ್ರೈಂನಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ.
icon

(8 / 8)

ಇತರ ಗ್ಯಾಲರಿಗಳು