Mass marriage at Muruga mutt: ಚಿತ್ರದುರ್ಗ ಮುರುಘಾಮಠದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ; ದಾಂಪತ್ಯಕ್ಕೆ ಕಾಲಿಟ್ಟ ನಾಲ್ಕು ಜೋಡಿ
Mass marriage at Muruga mutt: ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮೂವತ್ತಮೂರನೇ ವರ್ಷದ ಮೊದಲ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಗುರುವಾರ ನಡೆಯಿತು. ಇದರ ಸಚಿತ್ರ ವರದಿ ಇಲ್ಲಿದೆ.
(1 / 4)
ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಗುರುವಾರ ಮೂವತ್ತಮೂರನೇ ವರ್ಷದ ಮೊದಲ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆಯಿತು. ಈ ಕಾರ್ಯಕ್ರಮದಲ್ಲಿ ನಾಲ್ಕು ಜೋಡಿ ದಾಂಪತ್ಯ ಜೀವನ ಪ್ರವೇಶಿಸಿದವು. (Muruga Mutt)
(2 / 4)
ಶ್ರೀ ಬಸವಪ್ರಭು ಸ್ವಾಮಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದು, ತಾಳ ತಪ್ಪಿದರೆ ಸಂಗೀತ ಕೆಡುತ್ತದೆ, ತಾಳ್ಮೆ ತಪ್ಪಿದರೆ ಸಂಸಾರ ಹದಗೆಡುತ್ತದೆ. ಮದುವೆ ನಂತರ ಜೀವನ ಯಶಸ್ವಿಯಾಗಬೇಕಾದರೆ ಸಂಸಾರದಲ್ಲಿ ತಾಳ್ಮೆ ಮುಖ್ಯ. ಗಂಡ ಹೆಂಡತಿ ಮಧ್ಯೆ ಕೋಪ ಬಂದಾಗ ಯಾರಾದರು ಒಬ್ಬರು ಸುಮ್ಮನಾಗಬೇಕು. ಸತಿ-ಪತಿಗಳ ಮನಸ್ಸು ಒಂದಾಗಬೇಕು. ಅಣ್ಣ-ತಮ್ಮ, ಅಪ್ಪ-ಅಮ್ಮ ಅವರ ಮಧ್ಯೆ ಬಾಂಧವ್ಯ ಇರಬೇಕು. ಮಧುರ ಬಾಂಧವ್ಯ ಇರುವ ಮನೆ ಧರ್ಮಕ್ಷೇತ್ರ ಆಗುತ್ತದೆ ಎಂದು ಹೇಳಿದರು.(Muruga Mutt)
(3 / 4)
ಕೊಡ್ಲಿಪೇಟೆಯ ಕಲ್ಲಳ್ಳಿಮಠದ ಶ್ರೀ ರುದ್ರಮುನಿ ಸ್ವಾಮಿ ಮಾತನಾಡಿ, ಜೀವನ ಅಮೂಲ್ಯವಾದುದು. ಬಾಲ್ಯ, ಯೌವ್ವನ, ಮುಪ್ಪಿನ ಅವಸ್ಥೆ ಬರುತ್ತದೆ. ಸಂಸ್ಕಾರಗಳಲ್ಲಿ ವಿವಾಹ ಎನ್ನುವುದು ಪ್ರಮುಖ ಘಟ್ಟ, ಸತಿ-ಪತಿಗಳು ಬದುಕನ್ನು ಸಮವಾಗಿ ಸ್ವೀಕರಿಸಬೇಕು ಎಂದು ಹೇಳಿದರು.(Muruga Mutt)
(4 / 4)
ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಭಾಗಿಯಾದ ವಧು, ವರರ ಬಂಧುಗಳು. ನಿವೃತ್ತ ನ್ಯಾಯಾಧೀಶ ಬಿ.ಎಸ್.ವಸ್ತ್ರಮಠ, ಪೈಲ್ವಾನ್ ತಿಪ್ಪೇಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು. ಜಮುರಾ ಕಲಾವಿದರು ಪಾರ್ಥಿಸಿದರು. ವೀರಭದ್ರಪ್ಪ ಸ್ವಾಗತಿಸಿದರು. ಬಸವಲಿಂಗ ನಿರೂಪಿಸಿದರು.(Muruga Mutt)
ಇತರ ಗ್ಯಾಲರಿಗಳು