ಬೆಂಗಳೂರು ತುಮಕೂರು ರಸ್ತೆ ಅಡಕಮಾರನಹಳ್ಳಿ ಶೆಲ್ ಆಯಿಲ್ ಗೋಡೌನ್‌ನಲ್ಲಿ ಭಾರಿ ಅಗ್ನಿದುರಂತ; ಚಿತ್ರನೋಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೆಂಗಳೂರು ತುಮಕೂರು ರಸ್ತೆ ಅಡಕಮಾರನಹಳ್ಳಿ ಶೆಲ್ ಆಯಿಲ್ ಗೋಡೌನ್‌ನಲ್ಲಿ ಭಾರಿ ಅಗ್ನಿದುರಂತ; ಚಿತ್ರನೋಟ

ಬೆಂಗಳೂರು ತುಮಕೂರು ರಸ್ತೆ ಅಡಕಮಾರನಹಳ್ಳಿ ಶೆಲ್ ಆಯಿಲ್ ಗೋಡೌನ್‌ನಲ್ಲಿ ಭಾರಿ ಅಗ್ನಿದುರಂತ; ಚಿತ್ರನೋಟ

ಬೆಂಗಳೂರು - ತುಮಕೂರು ರಸ್ತೆಯ ನೆಲಮಂಗಲ ಸಮೀಪ ಅಡಕಮಾರನಹಳ್ಳಿಯಲ್ಲಿರುವ ಶೆಲ್ ಆಯಿಲ್ ಕಂಪನಿಯ ಗೋಡೌನ್‌ನಲ್ಲಿ ಇಂದು (ಮೇ 13) ಬೆಳಗ್ಗೆ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಅಗ್ನಿದುರಂತದ ಆರಂಭಿಕ ಚಿತ್ರನೋಟ ಇಲ್ಲಿದೆ.

ಬೆಂಗಳೂರು - ತುಮಕೂರು ರಸ್ತೆಯ ನೆಲಮಂಗಲ ಸಮೀಪ ಅಡಕಮಾರನಹಳ್ಳಿಯಲ್ಲಿರುವ ಶೆಲ್ ಆಯಿಲ್ ಕಂಪನಿಯ ಗೋಡೌನ್‌ನಲ್ಲಿ ಭಾರಿ ಅಗ್ನಿ ಅನಾಹುತ ಸಂಭವಿಸಿದೆ. ಬೆಂಗಳೂರು - ತುಮಕೂರು ರಸ್ತೆಗೆ ಭಾರಿ ಅಗ್ನಿದುರಂತದ ದೃಶ್ಯ ಗೋಚರಿಸಿದ್ದು ಹೀಗೆ. ಈ ದುರಂತದ ಚಿತ್ರ ವಿವರ ಇಲ್ಲಿದೆ.
icon

(1 / 10)

ಅಡಕಮಾರನಹಳ್ಳಿಯಲ್ಲಿರುವ ಶೆಲ್ ಆಯಿಲ್ ಕಂಪನಿಯ ಗೋಡೌನ್‌ನಲ್ಲಿ ಮಂಗಳವಾರ (ಮೇ 13) ಬೆಳಿಗ್ಗೆ ಈ ದುರಂತ ಸಂಭವಿಸಿದ್ದು, ಬೆಂಕಿ ನಂದಿಸುವ ಕೆಲಸ ಪ್ರಗತಿಯಲ್ಲಿದೆ.
icon

(2 / 10)

ಅಗ್ನಿ ದುರಂತದ ತೀವ್ರತೆ ಅಲ್ಲಿಂದ ಹೊರಸೂಸುತ್ತಿದ್ದ ಭಾರಿ ಪ್ರಮಾಣದ ಹೊಗೆ ಬಿಂಬಿಸುವಂತೆ ಇತ್ತು. ಆಗಸದೆತ್ತರಕ್ಕೆ ಕಪ್ಪು ದಟ್ಟ ಹೊಗೆ ಆವರಿಸಿದ್ದು, ಸೂರ್ಯ ಕಿರಣವನ್ನು ಮುತ್ತಿಕ್ಕುವಂತೆ ಆಗಸದಲ್ಲಿ ಪಸರಿಸುತ್ತಿತ್ತು.
icon

(3 / 10)

ವಿದ್ಯುತ್ ಶಾರ್ಟ್‌ ಸರ್ಕ್ಯೂಟ್ ಆದ ಕಾರಣ ಆಯಿಲ್ ಗೋದಾಮಿನಲ್ಲಿ ಬೆಂಕಿ ದುರಂತ ಸಂಭವಿಸಿದೆ. ಕಿಡಿ ಹೊತ್ತಿಕೊಂಡ ಕೂಡಲೇ ಗೋದಾಮು ಧಗಧಗನೆ ಉರಿಯತೊಡಗಿತು. ದುರಂತದಲ್ಲಿ ಕೋಟ್ಯಂತರ ರೂಪಾಯಿ ನಷ್ಟವಾಗಿರುವ ಸಾಧ್ಯತೆ ಇದೆ.
icon

(4 / 10)

ಅಡಕಮಾರನಹಳ್ಳಿ ಗ್ರಾಮದಲ್ಲಿ ಕೃಷ್ಣಪ್ಪ ಎಂಬುವವರಿಗೆ ಸೇರಿದ 33,000 ಚದರ ಅಡಿ ವಿಸ್ತೀರ್ಣದ ಬೃಹತ್ ಗೋದಾಮು ಬೆಂಕಿಗೆ ಆಹುತಿಯಾಗಿದೆ. ನೆಲಮಂಗಲ ಅಗ್ನಿಶಾಮಕ ಸಿಬ್ಬಂದಿಗಳಿಂದ ಬೆಂಕಿ ನಂದಿಸೋ ಕಾರ್ಯದಲ್ಲಿ ತೊಡಗಿದ್ದಾರೆ
icon

(5 / 10)

ಶೆಲ್ ಕಂಪನಿಗೆ ಸೇರಿದ ಆಯಿಲ್ ಉತ್ಪನ್ನಗಳು ನಾಶವಾಗಿದ್ದು ಕೋಟ್ಯಂತರ ರೂಪಾಯಿ ನಷ್ಟವಾಗಿರುವ ಶಂಕೆ ಇದೆ.  ಸುಮಾರು 10-12 ಅಗ್ನಿ ಶಾಮಕ ವಾಹನಗಳಿಂದ ಬೆಂಕಿ ನಂದಿಸೋ ಕಾರ್ಯ ನಡೆಸಿದೆ
icon

(6 / 10)

ನೆಲಮಂಗಲ, ಪೀಣ್ಯ ಹೆಬ್ಬಾಳ, ರಾಜಾಜಿನಗರ, ಥಣಿಸಂದ್ರ, ಸುಂಕದಕಟ್ಟೆ ಮತ್ತು ಯಶವಂತಪುರ ಅಗ್ನಿಶಾಮಕ ಠಾಣೆಗಳಿಂದ ಬೆಂಕಿ ನಂದಿಸುವ ವಾಹನಗಳು ಆಗಮಿಸಿದ್ದು, ಬೆಂಕಿ ನಂದಿಸುವ ಕೆಲಸ ಪ್ರಗತಿಯಲ್ಲಿದೆ.
icon

(7 / 10)

ಆಯಿಲ್ ಉತ್ಪನ್ನವಾದ ಕಾರಣ ಬೆಂಕಿ ನಂದಿಸುವ ಕೆಲಸ ಸವಾಲಿನದ್ದಾಗಿದೆ. ಹೀಗಾಗಿ ಬೆಂಕಿ ನಂದಿಸುವುದಕ್ಕೆ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
icon

(8 / 10)

60-70 ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಶೀಘ್ರವೇ ಅಗ್ನಿ ಅನಾಹುತದ ಪರಿಣಾಮವನ್ನು ನಿಯಂತ್ರಿಸುವ ವಿಶ್ವಾಸದಲ್ಲಿದ್ದಾರೆ.
icon

(9 / 10)

ಈ ಸಂಬಂಧ ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣಾ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
icon

(10 / 10)

ಈ ಸಂಬಂಧ ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣಾ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.

ಇತರ ಗ್ಯಾಲರಿಗಳು