ಪ್ರತಿ ಹೆಜ್ಜೆಯಲ್ಲೂ ಕೊಹ್ಲಿಗೆ ಬೆಂಗಾವಲಾಗಿದ್ದ ಭಾವನಾ; ವಿರಾಟ್ನನ್ನು ತಂದೆಯಂತೆ ಸಾಕಿ ಸಲುಹಿದ್ದ ಅಕ್ಕ!
- ವಿರಾಟ್ ಕೊಹ್ಲಿ ಕುಟುಂಬದ ಬಗ್ಗೆ, ವಿಶೇಷವಾಗಿ ಅವರ ಸಹೋದರಿಯ ಬಗ್ಗೆ ನಮಗೆ ಹೆಚ್ಚು ತಿಳಿದಿಲ್ಲ. ಇಂದು ನಾವು ಕೊಹ್ಲಿ ಯಶಸ್ಸಿಗೆ ಕಾರಣರಾದ ಅಕ್ಕ ಭಾವನಾ ಕೊಹ್ಲಿ ಧಿಂಗಾರ ಬಗ್ಗೆ ತಿಳಿಯೋಣ.
- ವಿರಾಟ್ ಕೊಹ್ಲಿ ಕುಟುಂಬದ ಬಗ್ಗೆ, ವಿಶೇಷವಾಗಿ ಅವರ ಸಹೋದರಿಯ ಬಗ್ಗೆ ನಮಗೆ ಹೆಚ್ಚು ತಿಳಿದಿಲ್ಲ. ಇಂದು ನಾವು ಕೊಹ್ಲಿ ಯಶಸ್ಸಿಗೆ ಕಾರಣರಾದ ಅಕ್ಕ ಭಾವನಾ ಕೊಹ್ಲಿ ಧಿಂಗಾರ ಬಗ್ಗೆ ತಿಳಿಯೋಣ.
(1 / 11)
ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ವಿರಾಟ್ ಕೊಹ್ಲಿ ಒಬ್ಬ ಸೂಪರ್ ಸ್ಟಾರ್ ಆಟಗಾರ. ಕ್ರಿಕೆಟ್ ಮೈದಾನದಲ್ಲಿ ನಿರ್ಮಿಸಿರುವ ನೂರಾರು ದಾಖಲೆಗಳು ಅವರ ಹೆಸರಿನಲ್ಲಿವೆ. ವಿಶ್ವಾದ್ಯಂತ ಅಭಿಮಾನಿಗಳ ದಂಡಿದೆ. ನೇಮ್-ಫೇಮ್ ಎಲ್ಲವೂ ಆತನ ಕಾಲಡಿ ಇದೆ.
(2 / 11)
ಭಾರತ ಕ್ರಿಕೆಟ್ ತಂಡ, ಐಪಿಎಲ್ ಲೀಗ್ನಲ್ಲಿ ಕೋಟಿ ಕೋಟಿ ಪಡೆಯುವ ಕೊಹ್ಲಿ ಮನೆಯ ಮುಂದೆ ಜಾಹೀರಾತು ಕಂಪನಿಗಳು ಕ್ಯೂ ನಿಂತಿವೆ. ಸಾವಿರಾರು ಕೋಟಿ ರೂಪಾಯಿ ಒಡೆಯ ವಿರಾಟ್. ದಿಗ್ಗಜ ಸ್ಥಾನ ಪಡೆದ ಕ್ರಿಕೆಟಿಗರಲ್ಲಿ ಕೊಹ್ಲಿಯೂ ಒಬ್ಬ.
(3 / 11)
ಆದರೆ, ಕೊಹ್ಲಿ ಇಷ್ಟೆಲ್ಲಾ ಹೆಸರು, ಸಾಧನೆ, ಸಂಪಾದನೆ, ಯಶಸ್ಸಿಗೆ ಆ ಒಬ್ಬ ವ್ಯಕ್ತಿಯೇ ಕಾರಣ. ಅವರೇ ಸೂಪರ್ ಸ್ಟಾರ್ ಆಟಗಾರನ ಅಕ್ಕ. ವಿರಾಟ್ ಆಗಾಗ್ಗೆ ತಮ್ಮ ಆಟ ಅಥವಾ ಅವರ ಪತ್ನಿ ಅನುಷ್ಕಾ ಶರ್ಮಾ ಕುರಿತು ಹೆಡ್ಲೈನ್ಗೆ ತರುತ್ತಾರೆ. ಸಾಕಷ್ಟು ಬೆಂಬಲ ನೀಡುತ್ತಾರೆ ಎನ್ನುತ್ತಾರೆ.
(4 / 11)
ಆದಾಗ್ಯೂ, ಕಿಂಗ್ ಕೊಹ್ಲಿ ಕುಟುಂಬದ ಬಗ್ಗೆ, ವಿಶೇಷವಾಗಿ ಅವರ ಸಹೋದರಿಯ ಬಗ್ಗೆ ನಮಗೆ ಹೆಚ್ಚು ತಿಳಿದಿಲ್ಲ. ಇಂದು ನಾವು ಕೊಹ್ಲಿ ಯಶಸ್ಸಿಗೆ ಕಾರಣರಾದ ಅಕ್ಕ ಭಾವನಾ ಕೊಹ್ಲಿ ಧಿಂಗಾರ ಬಗ್ಗೆ ತಿಳಿಯೋಣ.
(5 / 11)
ಭಾವನಾ ಕೊಹ್ಲಿ ವಿರಾಟ್ರ ಅಕ್ಕ. ವರದಿಗಳ ಪ್ರಕಾರ, ಕೊಹ್ಲಿಯ ಆರಂಭಿಕ ವರ್ಷಗಳಲ್ಲಿ ಭಾವನಾ ಪ್ರಮುಖ ಪ್ರಭಾವ ಬೀರಿದ್ದಾರೆ. ಕ್ರಿಕೆಟ್‌ನಲ್ಲಿ ಅಪಾರ ಆಸಕ್ತಿ ಹೊಂದಿದ್ದ ವಿರಾಟ್ಗೆ ಬೆಂಬಲಕ್ಕೆ ಯಾವಾಗಲೂ ನಿಂತರು. ತಮ್ಮ ಶಾಲಾ ದಿನಗಳಿಂದಲೂ ಅಕ್ಕನೇ ಫುಲ್ ಸಪೋರ್ಟ್ ಮಾಡುತ್ತಿದ್ದರು.
(6 / 11)
ಭಾವನಾ ಹಂಸರಾಜ್ ಮಾಡೆಲ್ ಸ್ಕೂಲ್‌ನಲ್ಲಿ ಶಾಲಾ ಶಿಕ್ಷಣ ಪಡೆದಿದ್ದಾರೆ. ದೆಹಲಿಯ ದೌಲತ್ ರಾಮ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಭಾವನಾ ಅವರು, ಸಂಜಯ್ ಧಿಂಗಾರ ಅವರನ್ನು ವಿವಾಹವಾದರು. ಸದ್ಯ ಈ ದಂಪತಿಗೆ ಮೆಹಕ್ ಮತ್ತು ಆಯುಷ್ ಇಬ್ಬರು ಮಕ್ಕಳಿದ್ದಾರೆ. ಸಂಜಯ್ ಧಿಂಗಾರ ವೃತ್ತಿಯಲ್ಲಿ ಉದ್ಯಮಿ.
(7 / 11)
ವರದಿಗಳ ಪ್ರಕಾರ ಭಾವನಾ, ವಿರಾಟ್ ಕೊಹ್ಲಿಯ ಒಡೆತನದ 'ಒನ್ 8 ಕಮ್ಯೂನ್' ರೆಸ್ಟೋರೆಂಟ್ನ ಪ್ರಮುಖ ಸದಸ್ಯರಾಗಿದ್ದಾರೆ. ಭಾವನಾ ಅವರು ಅತ್ತಿಗೆ ಅನುಷ್ಕಾ ಶರ್ಮಾರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ.
(8 / 11)
ಭಾವನಾ ಆಗಾಗ್ಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ತಮ್ಮ ಕುಟುಂಬದ ಕೆಲವು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ವಿರಾಟ್ ಜೊತೆಗಿನ ಬಾಲ್ಯದ ಕ್ಷಣಗಳನ್ನು ಪೋಸ್ಟ್ ಮಾಡುತ್ತಾರೆ. ಪುಟ್ಟ ವಿರಾಟ್ ತನ್ನ ಹುಟ್ಟುಹಬ್ಬದ ಕೇಕ್ ಕತ್ತರಿಸುವುದರಿಂದ ಹಿಡಿದು ಕ್ರಿಕೆಟಿಗನಾಗುವವರೆಗೂ ಅಪರೂಪದ ಫೋಟೋಗಳನ್ನು ಭಾವನಾ ಇನ್ಸ್ಟಾಗ್ರಾಂನಲ್ಲಿ ಕಾಣಬಹುದು. ಆ ಮೂಲಕ ತನ್ನ ಸಹೋದರ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸುತ್ತಿರುತ್ತಾರೆ.
(9 / 11)
ಟೀಮ್ ಇಂಡಿಯಾ ಮಾಜಿ ನಾಯಕ 2006ರಲ್ಲಿ ತಮ್ಮ ತಂದೆ ಪ್ರೇಮ್ ಕೊಹ್ಲಿ ಅವರನ್ನು ಕಳೆದುಕೊಂಡಿದ್ದರು. ಕರ್ನಾಟಕದ ವಿರುದ್ಧ ಬೆಂಗಳೂರಿನಲ್ಲಿ ರಣಜಿ ಪಂದ್ಯ ಆಡುತ್ತಿದ್ದಾಗ 2006 ಡಿಸೆಂಬರ್ 18ರಂದು ಕೊಹ್ಲಿ ತಂದೆ ನಿಧನರಾಗಿದ್ದರು. ಆದರೆ, ತಂದೆಯನ್ನು ಕಳೆದುಕೊಂಡಿದ್ದ ಕೊಹ್ಲಿಗೆ, ನೆರವಾಗಿದ್ದೇ ಅವರ ಅಕ್ಕ ಭಾವನಾ.
(10 / 11)
ಹಣಕಾಸಿನ ನೆರವಿನಿಂದ ಹಿಡಿದು ಪ್ರತಿ ಹೆಜ್ಜೆಯಲ್ಲೂ ಕೊಹ್ಲಿಗೆ ಬೆಂಬಲ ನೀಡಿದ್ದರು. ಕೈ ಹಿಡಿದು ನಡೆಸಿದರು. ಆತನ ಬೆಳವಣಿಗೆಗೆ ಆಕೆ ಎಲ್ಲವನ್ನೂ ತ್ಯಾಗ ಮಾಡಿದ ಮಹಾತಾಯಿ. ಇಂದು ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವನಾಗಿದ್ದಾರೆ ಎಂದರೆ ಅದಕ್ಕೆ ಕಾರಣ ಅಕ್ಕ ಭಾವನಾ. ಕೊಹ್ಲಿ ಎಷ್ಟೋ ಸಲ ಈ ಬಗ್ಗೆ ಹೇಳಿದ್ದಾರೆ ನನ್ನ ಅಕ್ಕ, ನನ್ನ ತಂದೆಯಂತೆ ನೋಡಿಕೊಂಡರು ಎಂದು.
ಇತರ ಗ್ಯಾಲರಿಗಳು