S Janaki in Mysuru: ಮೈಸೂರು ಜಿಲ್ಲೆಯ ಪುಟ್ಟ ದೇಗುಲಕ್ಕೆ ಬಂದು ಪೂಜೆ ಸಲ್ಲಿಸಿದರು ಗಾನ ಕೋಗಿಲೆ ಎಸ್.ಜಾನಕಿ
S Janaki in Mysuru: ಖ್ಯಾತ ಗಾಯಕಿ ಎಸ್.ಜಾನಕಿ ಅವರಿಗೆ ಕರ್ನಾಟಕಕ್ಕೆ ಬರುವುದು ಎಂದರೆ ತವರಿಗೆ ಬಂದಷ್ಟೇ ಪ್ರೀತಿ. ಈ ಬಾರಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಕ್ಷಣಗಳು ಹೀಗಿದ್ದವು.
(1 / 8)
ಎಸ್.ಜಾನಕಿ ಅವರು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿರುವ ಮಸಣಿಕಮ್ಮ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮಸಣಿಕಮ್ಮ ದೇಗುಲ ಕುರಿತು ಹಾಡುಗಳನ್ನೂ ಅವರು ಹಾಡಿದ್ದಾರೆ.
(2 / 8)
ಎಸ್.ಜಾನಕಿ ಅವರು ಪಿರಿಯಾಪಟ್ಟಣಕ್ಕೆ ಆಗಮಿಸಿದಾಗ ಪುರಸಭೆ ಸದಸ್ಯ ವಿನೋದ್ ಅವರ ಮನೆಯಲ್ಲಿ ಅಭಿಮಾನಿಗಳ ಬಳಗ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
(3 / 8)
ಮಸಣಿಕಮ್ಮ ದೇಗುಲದ ಭಕ್ತರೂ ಆಗಿರುವ ಜಾನಕಿ ಅವರು ಹಿಂದೆಯೇ ಇಲ್ಲಿಗೆ ಬರುವುದಾಗಿ ಹೇಳಿದ್ದರು. ಈಗ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
(4 / 8)
ಜಾನಕಿ ಅವರು ಮೈಸೂರಿಗೆ ಬಂದಾಗ ಗಣಪತಿ ಸಚ್ಚಿದಾನಂದ ಆಶ್ರಮಕ್ಕೂ ಹಿಂದೆ ಭೇಟಿ ನೀಡಿದ್ದಾರೆ. ಶುಕವನಕ್ಕೆ ತೆರಳಿ ಗಿಳಿಗಳೊಂದಿಗೆ ಕೆಲ ಕ್ಷಣ ಕಳೆದಿದ್ದರು.
(5 / 8)
ಮೈಸೂರಿನಲ್ಲಿ ಅವರ ಹಲವು ಅಭಿಮಾನಿಗಳೂ ಇದ್ದಾರೆ. ಕೆಲವು ವರ್ಷದ ಹಿಂದೆ ಆತ್ಮೀಯರೊಬ್ಬರ ಮದುವೆಯೂ ಅವರು ಬಂದಿದ್ದರು.
(6 / 8)
ಮೈಸೂರು ದಸರಾದಲ್ಲಿ ಅವರು ಕಾರ್ಯಕ್ರಮ ನೀಡಿದ್ದು ಕಡಿಮೆಯೇ. ಆದರೆ ಮೈಸೂರಿನ ಮೇಲೆ ಅವರಿಗೆ ವಿಶೇಷ ಅಭಿಮಾನವಂತೂ ಇದೆ.
(7 / 8)
ಎಸ್ ಜಾನಕಿ ಅವರಿಗೆ ಈಗ ವಯಸ್ಸು 86. ಆದರೂ ಉತ್ಸಾಹದಿಂದಲೇ ಎಲ್ಲೆಡೆ ಬರುತ್ತಾರೆ. ಕರ್ನಾಟಕಕ್ಕೂ ಆಗಾಗ ಬರುವುದುಂಟು.
ಇತರ ಗ್ಯಾಲರಿಗಳು