Melukote Vairamudi 2025: ಮೇಲುಕೋಟೆಯಲ್ಲಿ ಜಗಮಗಿಸುವ ಬೆಳಕು, ಭಕ್ತರ ಸಡಗರದ ನಡುವೆ ಚೆಲುವನಾರಾಯಣನಿಗೆ ವೈಭವದ ತೆಪ್ಪೋತ್ಸವ ́
Melukote Vairamudi 2025: ಮೇಲುಕೋಟೆಯಲ್ಲಿ ವೈರಮುಡಿ ಉತ್ಸವದ ಅಂಗವಾಗಿ ಶುಕ್ರವಾರ ರಾತ್ರಿ ಸ್ವರ್ಗವೇ ಧರೆಗೆ ಇಳಿದಂತ ಅನುಭವ. ತೆಪ್ಪೋತ್ಸವ ಅಂತಹ ಕ್ಷಣಗಳನ್ನು ಸೃಷ್ಟಿಸಿತ್ತು. ಅದರ ನೋಟ ಇಲ್ಲಿದೆ.
(1 / 8)
ಮೇಲುಕೋಟೆಯಲ್ಲಿ ಹತ್ತು ದಿನಗಳಿಂದ ವೈರಮುಡಿ ಉತ್ಸವದ ಸಡಗರ. ಶುಕ್ರವಾರ ಕಲ್ಯಾಣಿಯಲ್ಲಿ ವೈಭವದ ತೆಪ್ಪೋತ್ಸವ ಜರುಗಿತು.
(2 / 8)
ಮೇಲುಕೋಟೆಯಲ್ಲಿ ವಿಭಿನ್ನವಾಗಿ ಅಲಂಕಾರ ಮಾಡಲಾಗಿದ್ದ ತೆಪ್ಪದಲ್ಲಿ ಚಲುವನಾರಾಯಣಸ್ವಾಮಿ ಉತ್ಸವ ಮೂರ್ತಿ ಇರಿಸಿ ತೆಪ್ಪೋತ್ಸವನ್ನು ಆಚರಿಸಲಾಯಿತು.
(3 / 8)
ಮೇಲುಕೋಟೆಯ ಕಲ್ಯಾಣಿ ಆವರಣವನ್ನು ವೈರಮುಡಿ ಉತ್ಸವದ ತೆಪ್ಪೋತ್ಸಕ್ಕೆ ವಿಶೇಷ ಅಣಿಗೊಳಿಸಲಾಗಿತ್ತು. ಈ ವೇಳೆ ಪಟಾಕಿ ಸಿಡಿತವೂ ಬಾನಂಗಳದಲ್ಲಿ ಗಮನ ಸೆಳಯಿತು,
(5 / 8)
ಮೇಲುಕೋಟೆ ತೆಪ್ಪೋತ್ಸವ ಹಿನ್ನೆಲೆಯಲ್ಲಿ ಕಲ್ಯಾಣಿಗೆ ರೂಪಿಸಿದ ಅಲಂಕಾರ ಹಿನ್ನೆಲೆಯಲ್ಲಿ ಭಕ್ತಸಾಗರ ಪಾಲ್ಗೊಂಡು ಉತ್ಸವಕ್ಕೆ ಮೆರಗು ತಂದಿತು.
(6 / 8)
ವೈರಮುಡಿ ಬ್ರಹ್ಮೋತ್ಸವದ ಭಾಗವಾಗಿ ಕಲ್ಯಾಣಿಯಲ್ಲಿ ನಡೆದ ಚೆಲುವನಜಲವಿಹಾರದ ವೈಭವವನ್ನು ನೂರಾರು ಭಕ್ತರು ಕಣ್ತುಂಬಿಕೊಂಡರು.ಡಿಸಿ ಡಾ.ಕುಮಾರ್ ಭಾಗಿಯಾದರು.
(7 / 8)
ಭವ್ಯವಾಗಿ ಅಲಂಕೃತವಾದ ತೆಪ್ಪೋತ್ಸವ ಮಂಟಪದಲ್ಲಿ ಶ್ರೀಚೆಲುವನಾರಾಯಣಸ್ವಾಮಿಗೆ ವಿಶೇಷ ಪೂಜೆಗಳು ನೆರವೇರಿದಾಗ ಮಂಡ್ಯ ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಮತ್ತಿತರರು ಭಾಗಿಯಾದರು,
ಇತರ ಗ್ಯಾಲರಿಗಳು