ಪುರುಷರಲ್ಲಿ ಬಂಜೆತನ ಹೆಚ್ಚಲು ಈ ತಪ್ಪುಗಳೇ ಕಾರಣ; ವೀರ್ಯಾಣುವಿನ ಗುಣಮಟ್ಟ ಸುಧಾರಿಸಲು ಹೀಗಿರಲಿ ನಿಮ್ಮ ಜೀವನಕ್ರಮ
Sperm Health: ಇತ್ತೀಚಿನ ದಿನಗಳಲ್ಲಿ ಪುರುಷರು ಹೆಚ್ಚು ಬಂಜೆತನ ಸಮಸ್ಯೆ ಎದುರಿಸುತ್ತಿದ್ದಾರೆ. ವೀರ್ಯದ ಗುಣಮಟ್ಟದ ಕೊರತೆಯು ಮಕ್ಕಳಾಗದಂತೆ ತೊಂದರೆ ಉಂಟು ಮಾಡುತ್ತಿದೆ. ಇದಕ್ಕಾಗಿ ಹಲವರು ವೈದ್ಯರ ಮೊರೆ ಹೋಗುವುದು ತಪ್ಪಲ್ಲ. ಆದಾಗ್ಯೂ, ನಿತ್ಯ ಬದುಕಿನಲ್ಲಿ ಈ ಕೆಲವು ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಇದರಿಂದ ವೀರ್ಯಾಣುಗಳ ಗುಣಮಟ್ಟ ಸುಧಾರಿಸುತ್ತದೆ.
(1 / 9)
ಕಳಪೆ ಜೀವನಶೈಲಿ, ಅಸಮರ್ಪಕ ಆಹಾರ ಪದ್ಧತಿಗಳು ಪುರುಷರ ವೀರ್ಯಾಣುವಿನ ಗುಣಮಟ್ಟದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಇದರಿಂದ ಪುರುಷ ಬಂಜೆತನದ ಸಮಸ್ಯೆ ಹೆಚ್ಚಾಗಿದೆ. ಆರೋಗ್ಯಕರ ವೀರ್ಯದ ಗುಣಮಟ್ಟವು ಭ್ರೂಣ ರಚನೆಗೆ ಸಹಾಯ ಮಾಡುತ್ತದೆ. ಇದು ಒಟ್ಟಾರೆ ವ್ಯಕ್ತಿಯ ಆರೋಗ್ಯವನ್ನೂ ಪ್ರತಿಬಿಂಬಿಸುತ್ತದೆ. ಪುರುಷನಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾದಾಗ ಮಹಿಳೆ ಗರ್ಭಧರಿಸುವುದಕ್ಕೆ ತೊಂದರೆ ಉಂಟಾಗುತ್ತದೆ.
(2 / 9)
ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುವುದು ಮತ್ತು ಇತರ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ಪುರುಷರು ಹೆಚ್ಚಾಗಿ ಔಷಧಿಗಳು ಮತ್ತು ವೈದ್ಯಕೀಯ ಚಿಕಿತ್ಸೆಗಳನ್ನು ಪರಿಗಣಿಸುತ್ತಾರೆ. ಆದರೆ, ಪುರುಷರು ಕೆಲವು ಉತ್ತಮ ದಿನಚರಿಗಳನ್ನು ಅಳವಡಿಸಿಕೊಳ್ಳುವ ಮೂಲಕ ತಮ್ಮ ವೀರ್ಯದ ಗುಣಮಟ್ಟವನ್ನು ಸುಧಾರಿಸಬಹುದು. ಅಲ್ಲದೆ, ವೀರ್ಯಾಣುಗಳ ಸಂಖ್ಯೆಯನ್ನೂ ಹೆಚ್ಚಿಸಿಕೊಳ್ಳಬಹುದು. ಹಾಗಾದರೆ ವೀರ್ಯದ ಗುಣಮಟ್ಟ ಸುಧಾರಿಸಲು ಯಾವ ಅಭ್ಯಾಸ ಮಾಡಬೇಕು, ಯಾವ ಅಭ್ಯಾಸ ಮಾಡಬಾರದು ಗಮನಿಸಿ.
(3 / 9)
ಲ್ಯಾಪ್‌ಟಾಪ್ ಅನ್ನು ತೊಡೆಯ ಮೇಲೆ ಇಟ್ಟುಕೊಳ್ಳಬೇಡಿ: ಮನೆಯಿಂದ ಕೆಲಸ ಮಾಡುವ ಪುರುಷರು ಹೆಚ್ಚಾಗಿ ಲ್ಯಾಪ್‌ಟಾಪ್ ಅನ್ನು ತಮ್ಮ ತೊಡೆಯ ಮೇಲೆ ಇಟ್ಟುಕೊಂಡು ಕೆಲಸ ಮಾಡಲು ಪ್ರಾರಂಭಿಸುತ್ತಾರೆ. ಆದರೆ, ಲ್ಯಾಪ್‌ಟಾಪ್ ಅನ್ನು ತೊಡೆಯ ಮೇಲೆ ಇಟ್ಟುಕೊಂಡು ಕೆಲಸ ಮಾಡುವುದರಿಂದ ವೀರ್ಯದ ಗುಣಮಟ್ಟ ಕಳಪೆಯಾಗಬಹುದು. ವಾಸ್ತವವಾಗಿ, ಅತಿಯಾದ ಶಾಖವು ಪುರುಷರ ವೀರ್ಯಕ್ಕೆ ಹಾನಿಗೊಳಿಸುತ್ತದೆ. ಆ ಕಾರಣಕ್ಕೆ ಲ್ಯಾಪ್‌ಟಾಪ್ ಅನ್ನು ತೊಡೆಯ ಮೇಲೆ ಇಟ್ಟುಕೊಂಡು ಕೆಲಸ ಮಾಡುವುದನ್ನು ತಪ್ಪಿಸಿ ಮತ್ತು ಅತಿಯಾದ ಬಿಸಿನೀರಿನ ಸ್ನಾನ ಮಾಡುವುದನ್ನು ತಪ್ಪಿಸಿ.
(4 / 9)
ದೇಹದಲ್ಲಿ ನೀರಿನ ಕೊರತೆ ಅಥವಾ ಡೀಹೈಡ್ರೇಷನ್ ಕೂಡ ಪುರುಷರ ವೀರ್ಯದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಪುರುಷರು ಪ್ರತಿದಿನ ಕನಿಷ್ಠ 3 ಲೀಟರ್ ನೀರು ಕುಡಿಯಬೇಕು. ನೀರಿನಾಂಶ ಕಾಪಾಡಿಕೊಳ್ಳುವುದು ಉತ್ತಮ ವೀರ್ಯ ಉತ್ಪಾದನೆಗೆ ಸಹಾಯ ಮಾಡುತ್ತದೆ. ಹೆಚ್ಚು ನೀರು ಕುಡಿಯುವುದರಿಂದ ವೀರ್ಯದ ಗುಣಮಟ್ಟ ಸುಧಾರಿಸಿ, ವೀರ್ಯಾಣುಗಳ ಸಂಖ್ಯೆ ವೃದ್ಧಿಸಲು ನೆರವಾಗುತ್ತದೆ.
(5 / 9)
ನಿಮ್ಮ ಫೋನ್ ಅನ್ನು ಜೇಬಿನಲ್ಲಿ ಇಟ್ಟುಕೊಳ್ಳಬೇಡಿ: ಪುರುಷರು ತಮ್ಮ ಪ್ಯಾಂಟ್ ಜೇಬಿನಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಇಟ್ಟುಕೊಳ್ಳುವುದನ್ನು ಹೆಚ್ಚಾಗಿ ನೋಡುತ್ತೇವೆ. ಫೋನ್ ಅನ್ನು ಜೇಬಿನಲ್ಲಿ ಇಟ್ಟುಕೊಳ್ಳುವುದರಿಂದ ವೀರ್ಯದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಫೋನ್‌ಗಳಿಂದ ಹೊರಸೂಸುವ ವಿದ್ಯುತ್ಕಾಂತೀಯ ವಿಕಿರಣವು ವೀರ್ಯದ ಗುಣಮಟ್ಟವನ್ನು ಹದಗೆಡಿಸುತ್ತದೆ ಎಂದು ಹಲವಾರು ಅಧ್ಯಯನಗಳು ಪ್ರತಿಪಾದಿಸಿವೆ. ಹಾಗಾಗಿ ಪುರುಷರು ಯಾವುದೇ ಕಾರಣಕ್ಕೂ ತಮ್ಮ ಜೇಬಿನಲ್ಲಿ ಮೊಬೈಲ್ ಫೋನ್ ಇಟ್ಟುಕೊಳ್ಳಬಾರದು.
(6 / 9)
ವ್ಯಾಯಾಮ: ದಿನಕ್ಕೆ ಕೇವಲ 30 ನಿಮಿಷಗಳ ಕಾಲ ವ್ಯಾಯಾಮ ಮಾಡುವುದರಿಂದ ಪುರುಷರ ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟ ಹೆಚ್ಚಾಗುತ್ತದೆ. ಇದು ವೀರ್ಯ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವ್ಯಾಯಾಮದ ಜೊತೆಗೆ, ವೀರ್ಯದ ಗುಣಮಟ್ಟದ ಕಾಪಾಡಿಕೊಳ್ಳಲು ಯೋಗ ಮತ್ತು ಧ್ಯಾನವನ್ನು ಮಾಡಬಹುದು.
(7 / 9)
ಮದ್ಯ ಮತ್ತು ಸಿಗರೇಟುಗಳಿಂದ ದೂರವಿರಿ: ಸಿಗರೇಟ್ ಸೇದುವುದು ಮತ್ತು ಅತಿಯಾದ ಮದ್ಯಪಾನವು ವೀರ್ಯದ ಗುಣಮಟ್ಟವನ್ನು ಹದಗೆಡಿಸುತ್ತದೆ. ಇಷ್ಟೇ ಅಲ್ಲ, ಮದ್ಯ ಮತ್ತು ಸಿಗರೇಟ್ ಪುರುಷರ ಫಲವಂತಿಕೆಯನ್ನು ಕಡಿಮೆ ಮಾಡುತ್ತದೆ. ಈ ಅಭ್ಯಾಸಗಳಿಂದ ಇಂದೇ ದೂರವಿರಿ.
(8 / 9)
ಸಡಿಲವಾದ ಪ್ಯಾಂಟ್ ಧರಿಸಿ: ಪುರುಷರು ಯಾವಾಗಲೂ ಬಿಗಿಯಾದ ಪ್ಯಾಂಟ್ ಧರಿಸಲು ಬಯಸುತ್ತಾರೆ. ಬಿಗಿಯಾದ ಪ್ಯಾಂಟ್ ಧರಿಸುವುದರಿಂದ ವೃಷಣಗಳ ಉಷ್ಣತೆ ಹೆಚ್ಚಾಗುತ್ತದೆ. ಬಿಗಿಯಾದ ಪ್ಯಾಂಟ್ ಧರಿಸುವುದರಿಂದ ವೃಷಣಗಳು ದೇಹಕ್ಕೆ ಹತ್ತಿರವಾಗಿ, ಬೆಚ್ಚಗಿರುತ್ತವೆ. ಇದು ಪುರುಷರಲ್ಲಿ ಕಡಿಮೆ ವೀರ್ಯಾಣು ಸಂಖ್ಯೆ ಕಡಿಮೆಯಾಗಲು ಕಾರಣವಾಗುತ್ತದೆ. ವೀರ್ಯಾಣುಗಳ ಸಂಖ್ಯೆಯನ್ನು ಸುಧಾರಿಸಲು ಸ್ವಲ್ಪ ಸಡಿಲವಾದ ಪ್ಯಾಂಟ್ ಧರಿಸುವುದು ಉತ್ತಮ.
ಇತರ ಗ್ಯಾಲರಿಗಳು