Anxiety: ಕಾಡುವ ಆತಂಕವು ಮಾನಸಿಕ ನೆಮ್ಮದಿ ಕೆಡಿಸುವ ಜೊತೆಗೆ ಶಕ್ತಿ, ಸಮಯವನ್ನೂ ವ್ಯರ್ಥ ಮಾಡಬಹುದು; ಆತಂಕ ನಿವಾರಣೆಯತ್ತ ಇರಲಿ ಚಿತ್ತ
- Mental Health: ಮನುಷ್ಯನನ್ನು ಆತಂಕ ಕಾಡುವುದು ಸಹಜ. ಅಸಹಜ, ಅರ್ಥವಾಗದ ಅಂಶಗಳೂ ಕೆಲವೊಮ್ಮೆ ಆತಂಕಕ್ಕೆ ಕಾರಣವಾಗಬಹುದು. ಆತಂಕವು ವಿವಿಧ ರೀತಿಯಲ್ಲಿ ವ್ಯಕ್ತವಾಗಬಹುದು. ಆದರೆ ಇದು ಮನುಷ್ಯನ ಶಕ್ತಿ ಹಾಗೂ ಸಮಯವನ್ನು ವ್ಯರ್ಥ ಮಾಡುತ್ತದೆ. ಇಲ್ಲದೆ ಆತಂಕವು ಮನುಷ್ಯನ ಉತ್ಪಾದಕತೆಯ ಮಟ್ಟವನ್ನು ಕುಸಿಯುವಂತೆ ಮಾಡುತ್ತದೆ.
- Mental Health: ಮನುಷ್ಯನನ್ನು ಆತಂಕ ಕಾಡುವುದು ಸಹಜ. ಅಸಹಜ, ಅರ್ಥವಾಗದ ಅಂಶಗಳೂ ಕೆಲವೊಮ್ಮೆ ಆತಂಕಕ್ಕೆ ಕಾರಣವಾಗಬಹುದು. ಆತಂಕವು ವಿವಿಧ ರೀತಿಯಲ್ಲಿ ವ್ಯಕ್ತವಾಗಬಹುದು. ಆದರೆ ಇದು ಮನುಷ್ಯನ ಶಕ್ತಿ ಹಾಗೂ ಸಮಯವನ್ನು ವ್ಯರ್ಥ ಮಾಡುತ್ತದೆ. ಇಲ್ಲದೆ ಆತಂಕವು ಮನುಷ್ಯನ ಉತ್ಪಾದಕತೆಯ ಮಟ್ಟವನ್ನು ಕುಸಿಯುವಂತೆ ಮಾಡುತ್ತದೆ.
(1 / 6)
ಇಂದು ಜಗತ್ತಿನಲ್ಲಿ ಹಲವರು ಎದುರಿಸುತ್ತಿರುವ ಮಾನಸಿಕ ಸಮಸ್ಯೆಗಳಲ್ಲಿ ಆತಂಕವೂ ಒಂದು. ಕೆಲವೊಮ್ಮೆ ಆತಂಕಕ್ಕೆ ಕಾರಣಗಳು ಅರ್ಥವಾಗುವುದಿಲ್ಲ. ಆದರೆ ಆತಂಕದ ಮನೋಭಾವದಿಂದ ಹೊರ ಬರುವುದು ಬಹಳ ಮುಖ್ಯವಾಗುತ್ತದೆ. ನಮ್ಮಲ್ಲಿನ ಆತಂಕದಿಂದ ಬಗ್ಗೆ ನಮಗೆ ಸ್ವಯಂ ಅರಿವು ಇರಬೇಕು. ಸಾವಧಾನತೆ, ಒತ್ತಡ ನಿರ್ವಹಣೆ, ತಜ್ಞರ ಸಲಹೆ, ಇವುಗಳ ಮೂಲಕ ಆತಂಕದಿಂದ ಹೊರ ಬರಲು ಪ್ರಯತ್ನಿಸಬೇಕು. ಭಯವನ್ನು ಎದುರಿಸುವುದು, ಸ್ವಯಂ ಆರೈಕೆ, ಆತಂಕ ನಿರ್ವಹಣೆ ಇವುಗಳು ಕೂಡ ಕಾಡುವ ಆತಂಕದಿಂದ ನಮ್ಮನ್ನು ದೂರ ಮಾಡಬಹುದು. ಆದರೆ ಆತಂಕ ನಿರ್ವಹಣೆ ಮಾಡಲು ಸಾಧ್ಯವಾಗದೇ ಇದ್ದರೆ ಇದು ನಮ್ಮ ಸಮಯ ಹಾಗೂ ಶಕ್ತಿಯನ್ನು ವ್ಯರ್ಥ ಮಾಡುವುದರಲ್ಲಿ ಎರಡು ಮಾತಿಲ್ಲ. (Unsplash)
(2 / 6)
ಅತಿಯಾದ ಯೋಚನೆ: ಆತಂಕಕ್ಕೆ ಕಾರಣವಾದ ಸಂದರ್ಭಗಳನ್ನು ಅತಿಯಾಗಿ ವಿಶ್ಲೇಷಿಸುವುದು, ಅದರ ಬಗ್ಗೆ ಅತಿಯಾಗಿ ಆಲೋಚಿಸುವುದರಿಂದ ಮನಸ್ಸು ದಣಿಯುತ್ತದೆ. ಅಲ್ಲದೆ, ಇದರಿಂದ ನಮ್ಮ ಶಕ್ತಿ ಹಾಗೂ ಸಮಯ ಎರಡೂ ವ್ಯರ್ಥವಾಗುತ್ತದೆ. ಇದು ಅತಿಯಾದ ಚಿಂತೆ, ಅನುಮಾನ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ತೊಂದರೆಗೆ ಕಾರಣವಾಗಬಹುದು. (Unsplash)
(3 / 6)
ಗೊಂದಲಮಯ ಮನಸ್ಥಿತಿ: ಕೆಲವರು ಅತಿಯಾದ ಆತಂಕಕ್ಕೆ ಒಳಗಾದಾಗ ಮನೆಯ ಕೀಲಿಕೈಗಳು, ಉಪಕರಣಗಳು ಪುನಃ ಪುನಃ ಪರಿಶೀಲಿಸುವುದು, ಇಮೇಲ್, ಮೆಸೇಜ್‌ಗಳನ್ನು ಪದೇ ಪದೇ ನೋಡುವುದು ಮಾಡುತ್ತಾರೆ. ಅಲ್ಲದೆ ತಮ್ಮ ಗೊಂದಲಗಳಿಗೆ ಇತರರಿಂದ ಉತ್ತರ ಪಡೆಯುವುದು ಮಾಡಬಹುದು. ಇದು ನಿಮ್ಮ ಸಮಯವನ್ನು ಹಾಳು ಮಾಡುತ್ತದೆ. ನಿಮ್ಮ ಗೊಂದಲಕ್ಕೆ ಬೇರೆಯವರಿಂದ ಸಹಾಯ ಪಡೆಯುವುದು ತಾತ್ಕಾಲಿಕ ಪರಿಹಾರ ಸಿಕ್ಕರೂ, ಇದರಿಂದ ಸಮಯ ವ್ಯರ್ಥವಾಗುವುದರಲ್ಲಿ ಅನುಮಾನವಿಲ್ಲ. (Unsplash)
(4 / 6)
ಆಲಸ್ಯ: ಆತಂಕವು ಕೆಲವೊಮ್ಮೆ ತಪ್ಪಿಸಿಕೊಳ್ಳುವ ನಡವಳಿಕೆಯನ್ನು ಉತ್ತೇಜಿಸಬಹುದು. ಆತಂಕವಿದ್ದಾಗ ವ್ಯಕ್ತಿಗಳು ಭಯ ಮತ್ತು ಫಲಿತಾಂಶ ಬಗ್ಗೆ ಚಿಂತಿಸುವುದರಿಂದ ಕೆಲಸವನ್ನು ವಿಳಂಬಗೊಳಿಸುತ್ತಾರೆ ಅಥವಾ ಮುಂದೂಡುತ್ತಾರೆ. ಆಲಸ್ಯವು ಸಮಯ ವ್ಯರ್ಥ ಮಾಡುವುದು ಮಾತ್ರವಲ್ಲ, ಗಡುವಿನ ಸಮೀಪ ಬಂದಾಗ ಒತ್ತಡದ ಮಟ್ಟವನ್ನೂ ಹೆಚ್ಚಿಸುತ್ತದೆ.(Unsplash)
(5 / 6)
ಪರಿಪೂರ್ಣತೆ: ಆತಂಕದಲ್ಲಿದ್ದಾಗ ಮನಸ್ಸು ಪರಿಪೂರ್ಣತೆಗಾಗಿ ಹಂಬಲಿಸುತ್ತದೆ. ಆದರೆ ಇದರಿಂದ ಸಾಕಷ್ಟು ಸಮಯ ವ್ಯರ್ಥವಾಗುತ್ತದೆ. ಒಂದೇ ಕೆಲಸದ ಮೇಲೆ ಹೆಚ್ಚು ಸಮಯ ವ್ಯಯಿಸುವುದು, ನಿರಂತವಾಗಿ ದೋಷರಹಿತವಾಗಿ ಇರಬೇಕು ಎಂದುಕೊಳ್ಳುವುದು, ತನ್ನನ್ನು ತಾನೇ ಅತಿಯಾಗಿ ಟೀಕಿಸುವುದು ಈ ರೀತಿ ಮಾಡುತ್ತೇವೆ. ಇದರಿಂದ ಶಕ್ತಿ ವ್ಯಯವಾಗುವುದು ಮಾತ್ರವಲ್ಲ, ಉತ್ಪಾದಕತೆಗೂ ಅಡ್ಡಿಯಾಗಬಹುದು. (Unsplash)
(6 / 6)
ತಪ್ಪಿಸಿಕೊಳ್ಳುವುದು: ಆತಂಕವನ್ನು ಪ್ರಚೋದಿಸುವ ಸಂದರ್ಭಗಳು ಮತ್ತು ಚಟುವಟಿಕೆಗಳನ್ನು ತಪ್ಪಿಸುವುದು ತಾತ್ಕಾಲಿಕ ಪರಿಹಾರ ನೀಡಬಹುದು. ಆದರೆ ವೈಯಕ್ತಿಕ ಬೆಳವಣಿಗೆಯನ್ನು ಮಿತಿಗೊಳಿಸುತ್ತದೆ ಮತ್ತು ಆತಂಕದ ಪ್ರವೃತ್ತಿಯನ್ನು ಹೆಚ್ಚಿಸುತ್ತದೆ. ಇದು ಅವಕಾಶಗಳನ್ನು ತಪ್ಪುವಂತೆ ಮಾಡಬಹುದು, ಅಲ್ಲದೆ ಇದರಿಂದ ಸಾಮಾಜಿಕ ಮತ್ತು ವೃತ್ತಿಪರ ಅಭಿವೃದ್ಧಿಗೆ ಅಡ್ಡಿಯಾಗಬಹುದು. (Unsplash)
ಇತರ ಗ್ಯಾಲರಿಗಳು