ಕನ್ನಡ ಸುದ್ದಿ  /  Photo Gallery  /  Mental Health Foods May Cause Depression Health Tips Remedy To Get Rid Of Depression Oil Food Disadvantages Rsm

Depression: ಖಿನ್ನತೆ ಸಮಸ್ಯೆ ಇದ್ಯಾ; ನೀವು ತಿನ್ನುವ ಆಹಾರ ಕೂಡಾ ಡಿಪ್ರೆಷನ್‌, ಆತಂಕ ಹೆಚ್ಚಿಸಬಹುದು ಎಚ್ಚರಿಕೆಯಿಂದ ಇರಿ

ಜೀವನದಲ್ಲಿ ಪ್ರತಿಯೊಬ್ಬರಿಗೂ ಏನಾದರೂ ಸಮಸ್ಯೆ ಕಾಡುತ್ತವೆ. ಆದರೆ ಕೆಲವರು ಅದನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಇದರ ಪರಿಣಾಮ ಅವರು ಖಿನ್ನತೆಗೆ ಜಾರುತ್ತಾರೆ. ಆತಂಕ, ಖಿನ್ನತೆ ವ್ಯಕ್ತಿಯನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ದುರ್ಬಲಗೊಳಿಸುತ್ತದೆ. ಕೆಲವೊಂದು ಆಹಾರ ಖಿನ್ನತೆಯನ್ನು ಹೆಚ್ಚು ಮಾಡಿದರೆ ಕೆಲವು ಆಹಾರ ಖಿನ್ನತೆಯನ್ನು ಕಡಿಮೆ ಮಾಡುತ್ತದೆ.

 ಖಿನ್ನತೆಯನ್ನು ಹೋಗಲಾಡಿಸಲು ಸುಲಭ ಮಾರ್ಗಗಳಿವೆ. ನೀವು ಮಾನಸಿಕವಾಗಿ ಸಿದ್ಧರಾಗಬೇಕು. ಜೊತೆಗೆ ನೀವು ಸೇವಿಸುವ ಆಹಾರ ಕೂಡಾ ಪ್ರಮುಖವಾಗಿವೆ. 
icon

(1 / 6)

 ಖಿನ್ನತೆಯನ್ನು ಹೋಗಲಾಡಿಸಲು ಸುಲಭ ಮಾರ್ಗಗಳಿವೆ. ನೀವು ಮಾನಸಿಕವಾಗಿ ಸಿದ್ಧರಾಗಬೇಕು. ಜೊತೆಗೆ ನೀವು ಸೇವಿಸುವ ಆಹಾರ ಕೂಡಾ ಪ್ರಮುಖವಾಗಿವೆ. (Freepik)

ನಾವು ತಿನ್ನುವ ಆಹಾರ ನಮ್ಮ ಮಾನಸಿಕ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ಕೆಲವೊಂದು ಆಹಾರಗಳನ್ನು ತಿಂದಾಗ ನೀವು ಆಲಸ್ಯರಾಗಿರುವಂತೆ ಕಂಡುಬಂದಲ್ಲಿ, ಕೆಲವೊಂದನ್ನು ಸೇವಿಸಿದಾಗ ನೀವು ದಿನವಿಡೀ ಉಲ್ಲಾಸದಿಂದ ಇರುವುದನ್ನು ಗಮನಿಸಬಹುದು.  
icon

(2 / 6)

ನಾವು ತಿನ್ನುವ ಆಹಾರ ನಮ್ಮ ಮಾನಸಿಕ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ಕೆಲವೊಂದು ಆಹಾರಗಳನ್ನು ತಿಂದಾಗ ನೀವು ಆಲಸ್ಯರಾಗಿರುವಂತೆ ಕಂಡುಬಂದಲ್ಲಿ, ಕೆಲವೊಂದನ್ನು ಸೇವಿಸಿದಾಗ ನೀವು ದಿನವಿಡೀ ಉಲ್ಲಾಸದಿಂದ ಇರುವುದನ್ನು ಗಮನಿಸಬಹುದು.  (Freepik)

ಎಣ್ಣೆಯಲ್ಲಿ ಕರಿದ ಆಲೂಗಡ್ಡೆ ಚಿಪ್ಸ್‌ ತಿನ್ನಲು ಬಹಳ ರುಚಿಯಾಗಿರುತ್ತದೆ. ಆದರೆ ನೀವು ಅದನ್ನು ತಿಂದಾಗ ಮನಸ್ಸು ಚಂಚಲವಾಗುತ್ತದೆ. ಹಾಗೂ ಆತಂಕ ಹೆಚ್ಚಾಗುತ್ತದೆ. ಆದ್ದರಿಂದ ಅಂತಹ ಆಹಾರಗಳಿಂದ ನೀವು ಆದಷ್ಟು ದೂರ ಇದ್ದರೆ ಒಳಿತು. 
icon

(3 / 6)

ಎಣ್ಣೆಯಲ್ಲಿ ಕರಿದ ಆಲೂಗಡ್ಡೆ ಚಿಪ್ಸ್‌ ತಿನ್ನಲು ಬಹಳ ರುಚಿಯಾಗಿರುತ್ತದೆ. ಆದರೆ ನೀವು ಅದನ್ನು ತಿಂದಾಗ ಮನಸ್ಸು ಚಂಚಲವಾಗುತ್ತದೆ. ಹಾಗೂ ಆತಂಕ ಹೆಚ್ಚಾಗುತ್ತದೆ. ಆದ್ದರಿಂದ ಅಂತಹ ಆಹಾರಗಳಿಂದ ನೀವು ಆದಷ್ಟು ದೂರ ಇದ್ದರೆ ಒಳಿತು. (Freepik)

ಆಲೂಗಡ್ಡೆ ಹಾಗೂ ಆಲೂಗಡ್ಡೆ ಬಳಸಿ ತಯಾರಿಸಲಾದ ಆಹಾರ ಪದಾರ್ಥಗಳನ್ನು ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಹೆಚ್ಚಾಗುತ್ತದೆ, ಇದು ಹಾರ್ಮೋನುಗಳ ಏರಿಳಿತವನ್ನು ಹೆಚ್ಚಿಸುತ್ತದೆ.
icon

(4 / 6)

ಆಲೂಗಡ್ಡೆ ಹಾಗೂ ಆಲೂಗಡ್ಡೆ ಬಳಸಿ ತಯಾರಿಸಲಾದ ಆಹಾರ ಪದಾರ್ಥಗಳನ್ನು ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಹೆಚ್ಚಾಗುತ್ತದೆ, ಇದು ಹಾರ್ಮೋನುಗಳ ಏರಿಳಿತವನ್ನು ಹೆಚ್ಚಿಸುತ್ತದೆ.(Freepik)

ಜೊತೆಗೆ ನೀವು ಹೊರಗೆ ಚಿಕನ್‌ ಅಥವಾ ಇನ್ನಿತರ ಕರಿದ ತಿಂಡಿಗಳನ್ನು ತಿಂದಾಗ ಕೂಡಾ ನಿಮಗೆ ಸಮಸ್ಯೆ ಹೆಚ್ಚಾಗುತ್ತದೆ. ಹಾರ್ಮೋನುಗಳ ಸಮತೋಲನವು ತೊಂದರೆಗೊಳಗಾದಾಗ, ವಿವಿಧ ಸಮಸ್ಯೆಗಳು ಉದ್ಭವಿಸುತ್ತವೆ. ಇದು ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಸ್ಥಿತಿಗಳಿಗೆ ಕಾರಣವಾಗುತ್ತದೆ.
icon

(5 / 6)

ಜೊತೆಗೆ ನೀವು ಹೊರಗೆ ಚಿಕನ್‌ ಅಥವಾ ಇನ್ನಿತರ ಕರಿದ ತಿಂಡಿಗಳನ್ನು ತಿಂದಾಗ ಕೂಡಾ ನಿಮಗೆ ಸಮಸ್ಯೆ ಹೆಚ್ಚಾಗುತ್ತದೆ. ಹಾರ್ಮೋನುಗಳ ಸಮತೋಲನವು ತೊಂದರೆಗೊಳಗಾದಾಗ, ವಿವಿಧ ಸಮಸ್ಯೆಗಳು ಉದ್ಭವಿಸುತ್ತವೆ. ಇದು ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಸ್ಥಿತಿಗಳಿಗೆ ಕಾರಣವಾಗುತ್ತದೆ.(Freepik)

ಆಹಾರ ಪದಾರ್ಥಗಳನ್ನು ಡೀಪ್ ಫ್ರೈ ಮಾಡಿದಾಗ ಅಕ್ರಿಲಾಮೈಡ್ ಎಂಬ ಸಂಯುಕ್ತವು ಉತ್ಪತ್ತಿಯಾಗುತ್ತದೆ. ಇದು ಆಹಾರದ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ಇದು ಆತಂಕ ಮತ್ತು ಖಿನ್ನತೆಯ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಈ ಆಹಾರದಿಂದ ದೂರವಿರಿ. ನೀವು ಖಿನ್ನತೆಯಿಂದ ಬಳಲುತ್ತಿದ್ದಲ್ಲಿ ಈ ಆಹಾರ ಪದಾರ್ಥಗಳನ್ನು ತಿನ್ನದಿದ್ದರೆ ಬಹಳ ಒಳ್ಳೆಯದು. 
icon

(6 / 6)

ಆಹಾರ ಪದಾರ್ಥಗಳನ್ನು ಡೀಪ್ ಫ್ರೈ ಮಾಡಿದಾಗ ಅಕ್ರಿಲಾಮೈಡ್ ಎಂಬ ಸಂಯುಕ್ತವು ಉತ್ಪತ್ತಿಯಾಗುತ್ತದೆ. ಇದು ಆಹಾರದ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ಇದು ಆತಂಕ ಮತ್ತು ಖಿನ್ನತೆಯ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಈ ಆಹಾರದಿಂದ ದೂರವಿರಿ. ನೀವು ಖಿನ್ನತೆಯಿಂದ ಬಳಲುತ್ತಿದ್ದಲ್ಲಿ ಈ ಆಹಾರ ಪದಾರ್ಥಗಳನ್ನು ತಿನ್ನದಿದ್ದರೆ ಬಹಳ ಒಳ್ಳೆಯದು. (Freepik)


IPL_Entry_Point

ಇತರ ಗ್ಯಾಲರಿಗಳು