OCD Impact: ಓಸಿಡಿ ಖಂಡಿತ ಸಾಮಾನ್ಯ ಸಮಸ್ಯೆಯಲ್ಲ; ಈ ಮಾನಸಿಕ ಕಾಯಿಲೆಯಿಂದ ವ್ಯಕ್ತಿಯ ಮೇಲಾಗುವ ಪರಿಣಾಮ ತಿಳಿಯಿರಿ
- Obsessive-Compulsive Disorder: ಕೆಲವು ಸಾಮಾನ್ಯ ಸಮಸ್ಯೆಗಳು ನಮಗೆ ಅಸಹಜ ಎನ್ನಿಸಿದರೂ ಅದರ ಬಗ್ಗೆ ನಾವು ಹೆಚ್ಚಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅಂತಹ ಮಾನಸಿಕ ವ್ಯಾಧಿಗಳಲ್ಲಿ ಓಸಿಡಿ ಕೂಡ ಒಂದು. ಓಸಿಡಿ ಇರುವವರು ಅನುಭವಿಸುವ ವಿಚಿತ್ರ ತಲ್ಲಣಗಳು ನಿಜಕ್ಕೂ ಭಯಾನಕ.
- Obsessive-Compulsive Disorder: ಕೆಲವು ಸಾಮಾನ್ಯ ಸಮಸ್ಯೆಗಳು ನಮಗೆ ಅಸಹಜ ಎನ್ನಿಸಿದರೂ ಅದರ ಬಗ್ಗೆ ನಾವು ಹೆಚ್ಚಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅಂತಹ ಮಾನಸಿಕ ವ್ಯಾಧಿಗಳಲ್ಲಿ ಓಸಿಡಿ ಕೂಡ ಒಂದು. ಓಸಿಡಿ ಇರುವವರು ಅನುಭವಿಸುವ ವಿಚಿತ್ರ ತಲ್ಲಣಗಳು ನಿಜಕ್ಕೂ ಭಯಾನಕ.
(1 / 7)
ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್ ಅಥವಾ ಒಸಿಡಿ ಎನ್ನುವುದು ಒಂದು ರೀತಿಯ ಮಾನಸಿಕ ಸಮಸ್ಯೆ. ಈ ಸಮಸ್ಯೆ ಇರುವವರು ಮಾಡಿದ ಕೆಲಸವನ್ನೇ ಪದೇ ಪದೇ ಮಾಡುತ್ತಾರೆ. ಅವರು ಇದನ್ನು ಮಾಡಬಾರದು ಎಂದುಕೊಂಡರು ಮಾಡದೇ ಇರಲು ಸಾಧ್ಯವಾಗುವುದಿಲ್ಲ. ಅವರ ಮನಸ್ಸಿನಲ್ಲಿ ಬೇಡದ ಯೋಚನೆಗಳು ಸುತ್ತುವರಿದಿರುತ್ತವೆ. ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್ (ಒಸಿಡಿ) ಎನ್ನುವುದು ನಿರಂತರ ಗೀಳು ಮತ್ತು ಒತ್ತಾಯಗಳಿಂದ ನಿರೂಪಿಸಲ್ಪಟ್ಟ ಸ್ಥಿತಿಯಾಗಿದೆ. ಓಸಿಡಿ ಇರುವವರು ಸಹಜವಾಗಿಯೇ ಕಂಡರೂ ಅವರಲ್ಲಿ ಹೇಳಿಕೊಳ್ಳಲಾಗದ ತಲ್ಲಣಗಳು ಇರುತ್ತವೆ.
(Unsplash)(2 / 7)
ಒಸಿಡಿ ಸಮಸ್ಯೆ ಇರುವವರು ಎಲ್ಲವನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು ಎನ್ನುವ ಮನೋಭಾವ ಹೊಂದಿರುತ್ತಾರೆ. ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಲು ಇತರರಿಗಿಂತ ಅನಗತ್ಯ ಆಲೋಚನೆಗಳನ್ನು ಮಾಡುತ್ತಾರೆ. ಆದರೆ ಅವರು ಮಾಡುವ ಯೋಚನೆಗಳು, ಅದನ್ನು ಕಾರ್ಯರೂಪಕ್ಕೆ ತರುವ ರೀತಿ ವಾಸ್ತವಕ್ಕೆ ಹತ್ತಿರ ಇರುವುದಿಲ್ಲ.
(Unsplash)(3 / 7)
ಒಸಿಡಿಯಿಂದ ಉಂಟಾಗುವ ಅವಾಸ್ತವಿಕ ಆಲೋಚನೆಗಳನ್ನು ಕಡಿಮೆ ಮಾಡುವುದು ಅಥವಾ ಸರಿಪಡಿಸುವುದು ವ್ಯಕ್ತಿಯ ನಿಯಂತ್ರಣವನ್ನು ಮೀರಿರುತ್ತದೆ. ತಾನು ಮಾಡುತ್ತಿರುವುದು ಸರಿಯಲ್ಲ ಎಂಬುದು ತಿಳಿದಿದ್ದರೂ ಹಾಗೆ ಮಾಡದೇ ಇರಲು ಬೇರೆ ದಾರಿಯಿಲ್ಲ ಎಂಬಂತಿರುತ್ತದೆ.
(Unsplash)(5 / 7)
ಗೀಳು ಹೊಂದಿರುವ ವ್ಯಕ್ತಿಯು ವೈಯಕ್ತಿಕವಾಗಿ ಬಹಳಷ್ಟು ನೋವು ಎದುರಿಸಬಹುದು. ಇದು ವ್ಯಕ್ತಿಯ ದೈನಂದಿನ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಮಾನಸಿಕ ಹಾಗೂ ದೈಹಿಕ ಕಿರಿಕಿರಿ ಉಂಟಾಗಬಹುದು.
(Unsplash)(6 / 7)
ಒಸಿಡಿ ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರಬಹುದು. ಈ ರೋಗವು ದೈಹಿಕ ಮತ್ತು ಮಾನಸಿಕ ಸ್ವರೂಪದಲ್ಲಿದೆ.
(Unsplash)ಇತರ ಗ್ಯಾಲರಿಗಳು