Overthinking: ಅತಿಯಾದ ಯೋಚನೆಗಳನ್ನು ನಿಯಂತ್ರಿಸಲು ನಿಮ್ಮಿಂದ ಸಾಧ್ಯವಾಗ್ತಿಲ್ವಾ? ಇದಕ್ಕೆ ಕಾರಣವೇನು ನೋಡಿ
- ನಮ್ಮಲ್ಲಿ ಹಲವರು ಅತಿಯಾದ ಯೋಚನೆ ಅಥವಾ ಓವರ್ ಥಿಂಕಿಂಗ್‌ನಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ನಿದ್ದೆಯ ಸಮಸ್ಯೆಯಾಗಿ ಇಲ್ಲಸಲ್ಲದ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿದೆ. ಒವರ್ ಥಿಕಿಂಗ್ ಅನ್ನು ನಿಯಂತ್ರಿಸಲು ಸಾಧ್ಯವಾಗದೇ ಇರಲು ಇವೇ ಪ್ರಮುಖ ಕಾರಣ.
- ನಮ್ಮಲ್ಲಿ ಹಲವರು ಅತಿಯಾದ ಯೋಚನೆ ಅಥವಾ ಓವರ್ ಥಿಂಕಿಂಗ್‌ನಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ನಿದ್ದೆಯ ಸಮಸ್ಯೆಯಾಗಿ ಇಲ್ಲಸಲ್ಲದ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿದೆ. ಒವರ್ ಥಿಕಿಂಗ್ ಅನ್ನು ನಿಯಂತ್ರಿಸಲು ಸಾಧ್ಯವಾಗದೇ ಇರಲು ಇವೇ ಪ್ರಮುಖ ಕಾರಣ.
(1 / 7)
ಬದುಕಿನಲ್ಲಿ ಎದುರಾಗುವ ಕೆಲವು ಘಟನೆಗಳು ನಮ್ಮಲ್ಲಿ ಅತಿಯಾಗಿ ಯೋಚಿಸುವಂತೆ ಮಾಡುತ್ತವೆ. ಕೆಲವೊಮ್ಮೆ ಅರ್ಥವಾಗದ ವಿಚಾರಗಳಿಗೂ ಅತಿಯಾಗಿ ಆಲೋಚನೆ ಮಾಡುತ್ತೇವೆ. ಓವರ್ ಥಿಂಕಿಂಗ್ ಕಾರಣದಿಂದ ನಿದ್ದೆ ಸಮಸ್ಯೆ ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಕೆಲವೊಮ್ಮೆ ನಮ್ಮ ಮನಸ್ಸಿನಲ್ಲಿ ಕಾಡುವ ವಿಚಾರಗಳು ಸತ್ಯವಲ್ಲ, ಜೊತೆಗೆ ಇವು ವಾಸ್ತವಕ್ಕೆ ದೂರ ಇರುತ್ತವೆ. ಅತಿಯಾಗಿ ಯೋಚಿಸುವುದರಿಂದ ಯಾವುದೇ ರೀತಿಯ ಪ್ರಯೋಜನಗಳಿಲ್ಲ, ಈ ರೀತಿ ಯೋಚಿಸುವುದು ತಪ್ಪು ಎಂಬುದು ಅರಿವಾದರೂ ಮನಸ್ಸು ಕೇಳುವುದಿಲ್ಲ. ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಲು ಸಾಧ್ಯವಾಗದೇ ಇರುವುದಕ್ಕೆ ಪ್ರಮುಖ ಕಾರಣಗಳಿವು.
(Unsplash)(2 / 7)
ನಮ್ಮಲ್ಲಿ ಯಾವುದೇ ರೀತಿಯ ಹೆದರಿಕೆ ಅಥವಾ ಬೆದರಿಕೆಯ ಭಾವನೆ ಮೂಡಿದಾಗ ದೇಹವು ಪರಿಸ್ಥಿತಿಯನ್ನು ನಿಭಾಯಿಸಲು ಮನಸ್ಸು ಅತಿಯಾಗಿ ಯೋಚಿಸುವ ನೈಸರ್ಗಿಕ ಪ್ರವೃತ್ತಿಯನ್ನು ಬೆಳೆಸಿಕೊಳ್ಳುತ್ತದೆ. ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದು ಎಂಬ ಚಿಂತೆಯಲ್ಲಿ ಅತಿಯಾಗಿ ನಿಲ್ಲಿಸುವುದನ್ನು ಸಾಧ್ಯವಾಗುವುದಿಲ್ಲ.
(Unsplash)(3 / 7)
ಕೆಲವೊಮ್ಮೆ ಅತಿಯಾದ ಚಿಂತೆಯು ನಮ್ಮ ಮನಸ್ಸನ್ನು ಫ್ರೀಜ್ ಮಾಡುತ್ತದೆ. ಮನಸ್ಸು ಬೇರೆ ಏನನ್ನೂ ಯೋಚಿಸಲು ಸಾಧ್ಯವಾಗದೇ ಇರುವ ಪರಿಸ್ಥಿತಿಗೆ ತಲುಪುತ್ತದೆ. ಅಂತಹ ಸಮಯದಲ್ಲಿ ಒಂದೇ ವಿಷಯದ ಬಗ್ಗೆ ಅತಿಯಾಗಿ ಆಲೋಚನೆ ಮಾಡುತ್ತದೆ.
(Unsplash)(4 / 7)
ಒಂದರ ಹಿಂದೆ ಒಂದರಂತೆ ಸಾಲು ಸಾಲಾಗಿ ಬರುವ ಯೋಚನೆಗಳು ನಮ್ಮ ಮನಸ್ಸನ್ನು ಕಂಗೆಡಿಸಬಹುದು. ಅಹಿತಕರ ಘಟನೆಗಳು ಮನಸ್ಸಿನಲ್ಲಿ ಹೆಚ್ಚು ಕಾಲ ಉಳಿದು ಬಿಡುವುದು ಮಾತ್ರ, ಅದರ ಬಗ್ಗೆಯೇ ಮನಸ್ಸು ಹೆಚ್ಚು ಚಿಂತಿಸುತ್ತದೆ.
(Unsplash)(5 / 7)
ಸ್ವಂತ ನಿರ್ಧಾರಗಳನ್ನು ತೆಗೆದುಕೊಂಡಾಗ ಇದು ಸರಿಯೋ ತಪ್ಪೋ ಎಂಬ ಗೊಂದಲ ಕಾಡುವುದು ಸಹಜ. ಅಲ್ಲದೇ ನಮ್ಮ ಯೋಚನೆಯನ್ನು ಸರಿಯಾದ ಕ್ರಮದಲ್ಲಿ ಕಾರ್ಯಗತಗೊಳಿಸುವ ಬಗ್ಗೆ ಅತಿಯಾಗಿ ಯೋಚಿಸುತ್ತೇವೆ.
(Unsplash)(6 / 7)
ಈ ಎಲ್ಲವೂ ಓವರ್ ಥಿಕಿಂಗ್ ಅನ್ನು ನಿಲ್ಲಿಸಲು ಸಾಧ್ಯವಾಗದೇ ಇರಲು ಕಾರಣಗಳು. ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಲು ಮೊದಲು ಯಾವುದೇ ವಿಚಾರದ ಬಗ್ಗೆಯೂ ಭಯ, ಅಂಜಿಕೆ ಪಡುವುದನ್ನು ನಿಲ್ಲಿಸಬೇಕು. ಆಗ ನಾವು ಆ ವಿಚಾರದ ಬಗ್ಗೆ ಅತಿಯಾಗಿ ಯೋಚಿಸುವುದನ್ನು ನಿಲ್ಲಿಸುತ್ತೇವೆ.
(Unsplash)ಇತರ ಗ್ಯಾಲರಿಗಳು