ಕನ್ನಡ ಸುದ್ದಿ  /  Photo Gallery  /  Mercedes Eqb Review In Pics: Say Hello To The Three-row Electric

Mercedes EQB review: ಮರ್ಸಿಡಿಸ್‌ ಬೆಂಝ್‌ ಕಾರಿಗೆ ಇ-ಟಚ್‌, ಐಷಾರಾಮಿ ಎಲೆಕ್ಟ್ರಿಕ್‌ ಕಾರಿನ ಚಿತ್ರವಿಮರ್ಶೆ

  • Mercedes EQB review: ದೇಶದ ಎಲೆಕ್ಟ್ರಿಕ್‌ ಕಾರು ಮಾರುಕಟ್ಟೆಗೆ ನೂತನ ಇಕ್ಯುಬಿ ಎಸ್‌ಯುವಿಯನ್ನು ಲಾಂಚ್‌ ಮಾಡುವುದಾಗಿ ಅಧಿಕೃತವಾಗಿ ಮರ್ಸಿಡಿಸ್‌ ಬೆಂಝ್‌ ಪ್ರಕಟಿಸಿದೆ. ಈ ಕಾರಿನ ಟೆಸ್ಟ್‌ ಡ್ರೈವ್‌ ಅನ್ನು ಎಚ್‌ಟಿ ಆಟೋದ ಸವ್ಯಸಾಚಿ ದೇಶಗುಪ್ತ ಮಾಡಿದ್ದು, ಈ ಎಲೆಕ್ಟ್ರಿಕ್‌  ಕಾರು ಹೇಗಿದೆ ಎಂದು ನೋಡೋಣ ಬನ್ನಿ.

ಜರ್ಮನಿಯ ಕಾರು ತಯಾರಿಕಾ ಕಂಪನಿ ಮರ್ಸಿಡಿಸ್‌ ಬೆಂಝ್‌ ಭಾರತದ ರಸ್ತೆಗೆ ತನ್ನ ಎರಡನೇ ಎಲೆಕ್ಟ್ರಿಕ್‌ ಎಸ್‌ಯುವಿಯನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಮೂರು ರೋ ಉದ್ದ ಇರುವ ವಿನೂತನ ಎಸ್‌ಯುವಿ ಇದಾಗಿದೆ.
icon

(1 / 11)

ಜರ್ಮನಿಯ ಕಾರು ತಯಾರಿಕಾ ಕಂಪನಿ ಮರ್ಸಿಡಿಸ್‌ ಬೆಂಝ್‌ ಭಾರತದ ರಸ್ತೆಗೆ ತನ್ನ ಎರಡನೇ ಎಲೆಕ್ಟ್ರಿಕ್‌ ಎಸ್‌ಯುವಿಯನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಮೂರು ರೋ ಉದ್ದ ಇರುವ ವಿನೂತನ ಎಸ್‌ಯುವಿ ಇದಾಗಿದೆ.(HT Auto/Sabyasachi Dasgupta)

ಇಕ್ಯುಬಿ ಜತೆಗೆ ಇಕ್ಯುಸಿ ಎಂಬ ಎಲೆಕ್ಟ್ರಿಕ್‌ ಕಾರನ್ನು ಭಾರತದಲ್ಲಿ ಮರ್ಸಿಡಿಸ್‌ ಬೆಂಝ್‌ ಮಾರಾಟ ಮಾಡಲಿದೆ.
icon

(2 / 11)

ಇಕ್ಯುಬಿ ಜತೆಗೆ ಇಕ್ಯುಸಿ ಎಂಬ ಎಲೆಕ್ಟ್ರಿಕ್‌ ಕಾರನ್ನು ಭಾರತದಲ್ಲಿ ಮರ್ಸಿಡಿಸ್‌ ಬೆಂಝ್‌ ಮಾರಾಟ ಮಾಡಲಿದೆ.(HT Auto/Sabyasachi Dasgupta)

ಮರ್ಸಿಡಿಸ್‌ ಬೆಂಝ್‌ನ ಜಿಎಲ್‌ಬಿ ಆವೃತ್ತಿಯ (ಚಿತ್ರದಲ್ಲಿ ಬಲಭಾಗದಲ್ಲಿರುವುದು) ಎಲೆಕ್ಟ್ರಿಕ್‌ ಆವೃತ್ತಿಯಾಗಿ ಇಕ್ಯುಬಿ ರಸ್ತೆಗಿಳಿಯಲಿದೆ. ಮೂರು ಸಾಲು ಸೀಟುಗಳ ಕಾರು ಬಯಸುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ಕಾರನ್ನು ಲಾಂಚ್‌ ಮಾಡಲಿದೆ.
icon

(3 / 11)

ಮರ್ಸಿಡಿಸ್‌ ಬೆಂಝ್‌ನ ಜಿಎಲ್‌ಬಿ ಆವೃತ್ತಿಯ (ಚಿತ್ರದಲ್ಲಿ ಬಲಭಾಗದಲ್ಲಿರುವುದು) ಎಲೆಕ್ಟ್ರಿಕ್‌ ಆವೃತ್ತಿಯಾಗಿ ಇಕ್ಯುಬಿ ರಸ್ತೆಗಿಳಿಯಲಿದೆ. ಮೂರು ಸಾಲು ಸೀಟುಗಳ ಕಾರು ಬಯಸುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ಕಾರನ್ನು ಲಾಂಚ್‌ ಮಾಡಲಿದೆ.(HT Auto/Sabyasachi Dasgupta)

ಮೊದಲ ನೋಟಕ್ಕೆ ನೂತನ ಇಕ್ಯುಬಿಯು ವಾಹ್‌ ಎನಿಸುವ ಕಾರು. ಇದರ ಮುಂಭಾಗದಲ್ಲಿ ಮುಚ್ಚಿದ ಗ್ರಿಲ್‌ ಇದೆ. ಮುಂಭಾಗದ ವಿನ್ಯಾಸ ಸುಂದರವಾಗಿದೆ.
icon

(4 / 11)

ಮೊದಲ ನೋಟಕ್ಕೆ ನೂತನ ಇಕ್ಯುಬಿಯು ವಾಹ್‌ ಎನಿಸುವ ಕಾರು. ಇದರ ಮುಂಭಾಗದಲ್ಲಿ ಮುಚ್ಚಿದ ಗ್ರಿಲ್‌ ಇದೆ. ಮುಂಭಾಗದ ವಿನ್ಯಾಸ ಸುಂದರವಾಗಿದೆ.(HT Auto/Sabyasachi Dasgupta)

ಇಕ್ಯುಬಿಯಲ್ಲಿ ಹದಿನೆಂಟು ಇಂಚಿನ ಅಲಾಯ್‌ ವೀಲ್‌ಗಳಿವೆ. ಗಾತ್ರವು ಜಿಎಲ್‌ಬಿ ಮತ್ತು ಜಿಎಲ್‌ಸಿ ಕಾರುಗಳಂತೆಯೇ ಇದೆ.
icon

(5 / 11)

ಇಕ್ಯುಬಿಯಲ್ಲಿ ಹದಿನೆಂಟು ಇಂಚಿನ ಅಲಾಯ್‌ ವೀಲ್‌ಗಳಿವೆ. ಗಾತ್ರವು ಜಿಎಲ್‌ಬಿ ಮತ್ತು ಜಿಎಲ್‌ಸಿ ಕಾರುಗಳಂತೆಯೇ ಇದೆ.(HT Auto/Sabyasachi Dasgupta)

Mercedes EQBಯ ಹಿಂಬದಿಯೂ ಅತ್ಯಾಕರ್ಷಕವಾಗಿದೆ. ಎಲ್‌ಇಡಿ ಟೇಲ್‌ ಲ್ಯಾಂಪ್‌ಗಳ ನಡುವೆ ಲೈಟ್‌ ಪಟ್ಟಿ ಇದೆ.
icon

(6 / 11)

Mercedes EQBಯ ಹಿಂಬದಿಯೂ ಅತ್ಯಾಕರ್ಷಕವಾಗಿದೆ. ಎಲ್‌ಇಡಿ ಟೇಲ್‌ ಲ್ಯಾಂಪ್‌ಗಳ ನಡುವೆ ಲೈಟ್‌ ಪಟ್ಟಿ ಇದೆ.(HT Auto/Sabyasachi Dasgupta)

ಇಕ್ಯುಬಿಯ ಕ್ಯಾಬಿನ್‌ನೊಳಗೆ 10.1 ಇಂಚಿನ ಸ್ಕ್ರೀನ್‌ ಮತ್ತು ಎಸಿ ವೆಂಟ್‌ಗಳಿವೆ. ಸೀಟಿನ ಅಪ್‌ಹೊಲೆಸ್ಟ್ರಿ ರೋಸ್‌ ಗೋಲ್ಡ್‌ ಬಣ್ಣದಲ್ಲಿದ್ದು, ಒಳಗೆ ಕುಳಿತಾಗ ವಿಲಾಸಿ ಅನುಭವ ನೀಡುತ್ತದೆ.
icon

(7 / 11)

ಇಕ್ಯುಬಿಯ ಕ್ಯಾಬಿನ್‌ನೊಳಗೆ 10.1 ಇಂಚಿನ ಸ್ಕ್ರೀನ್‌ ಮತ್ತು ಎಸಿ ವೆಂಟ್‌ಗಳಿವೆ. ಸೀಟಿನ ಅಪ್‌ಹೊಲೆಸ್ಟ್ರಿ ರೋಸ್‌ ಗೋಲ್ಡ್‌ ಬಣ್ಣದಲ್ಲಿದ್ದು, ಒಳಗೆ ಕುಳಿತಾಗ ವಿಲಾಸಿ ಅನುಭವ ನೀಡುತ್ತದೆ.(HT Auto/Sabyasachi Dasgupta)

ಎರಡನೇ ಸೀಟಿನ ಸಾಲಿನಲ್ಲಿ ಕುಳಿತಾಗ ಹೆಚ್ಚು ಕಂಫರ್ಟ್‌ ಫೀಲ್‌ ದೊರಕುತ್ತದೆ. ಈ ಸೀಟು ಮಡಚಿ ಸ್ಟೋರೇಜ್‌ ಸ್ಥಳವಕಾಶವನ್ನಾಗಿಯೂ ಪರಿವರ್ತಿಸಬಹುದು. ಸೀಟಿನ ಹಿಂಬದಿ ಸೀಟು ಮಕ್ಕಳಿಗೆ ಸೂಕ್ತವಾಗಿದೆ.
icon

(8 / 11)

ಎರಡನೇ ಸೀಟಿನ ಸಾಲಿನಲ್ಲಿ ಕುಳಿತಾಗ ಹೆಚ್ಚು ಕಂಫರ್ಟ್‌ ಫೀಲ್‌ ದೊರಕುತ್ತದೆ. ಈ ಸೀಟು ಮಡಚಿ ಸ್ಟೋರೇಜ್‌ ಸ್ಥಳವಕಾಶವನ್ನಾಗಿಯೂ ಪರಿವರ್ತಿಸಬಹುದು. ಸೀಟಿನ ಹಿಂಬದಿ ಸೀಟು ಮಕ್ಕಳಿಗೆ ಸೂಕ್ತವಾಗಿದೆ.

ಹಿಂಬದಿ ಸೀಟಿನ ಕೆಳಭಾಗದಲ್ಲಿ ಸುಮಾರು 460n ಲೀಟರ್‌ನಷ್ಟು ಬೂಟ್‌ ಸ್ಥಳಾವಕಾಶವಿದೆ. ಮಧ್ಯದ ಸೀಟನ್ನು ತೆಗೆದರೆ ಈ ಸ್ಥಳಾವಕಾಶವು 1,600 ಲೀಟರ್‌ನಷ್ಟು ಆಗಲಿದೆ. ಕಾರಿನ ಸ್ಟೋರೇಜ್‌ ಸ್ಥಳಾವಕಾಶವನ್ನು ಲೀಟರ್‌ ಲೆಕ್ಕದಲ್ಲಿ ಹೇಳಲಾಗುತ್ತದೆ.
icon

(9 / 11)

ಹಿಂಬದಿ ಸೀಟಿನ ಕೆಳಭಾಗದಲ್ಲಿ ಸುಮಾರು 460n ಲೀಟರ್‌ನಷ್ಟು ಬೂಟ್‌ ಸ್ಥಳಾವಕಾಶವಿದೆ. ಮಧ್ಯದ ಸೀಟನ್ನು ತೆಗೆದರೆ ಈ ಸ್ಥಳಾವಕಾಶವು 1,600 ಲೀಟರ್‌ನಷ್ಟು ಆಗಲಿದೆ. ಕಾರಿನ ಸ್ಟೋರೇಜ್‌ ಸ್ಥಳಾವಕಾಶವನ್ನು ಲೀಟರ್‌ ಲೆಕ್ಕದಲ್ಲಿ ಹೇಳಲಾಗುತ್ತದೆ.

ಮರ್ಸಿಡಿಸ್‌ ಬೆಂಝ್‌ ಇಕ್ಯುಬಿಯು 66.5 kWh ಬ್ಯಾಟರಿ ಹೊಂದಿದೆ. ಇಕ್ಯುಸಿಯಲ್ಲಿ 80 kWh ಬ್ಯಾಟರಿ ಪ್ಯಾಕ್‌ ಇದೆ. ಇವೆರಡೂ ಕಾರುಗಳು ಒಂದು ಫುಲ್‌ ಚಾರ್ಜ್‌ಗೆ 420 ಕಿ.ಮೀ. ಮೈಲೇಜ್‌ ನೀಡಲಿವೆ ಎಂದು ಕಂಪನಿ ಪ್ರತಿಪಾದಿಸಿದೆ.
icon

(10 / 11)

ಮರ್ಸಿಡಿಸ್‌ ಬೆಂಝ್‌ ಇಕ್ಯುಬಿಯು 66.5 kWh ಬ್ಯಾಟರಿ ಹೊಂದಿದೆ. ಇಕ್ಯುಸಿಯಲ್ಲಿ 80 kWh ಬ್ಯಾಟರಿ ಪ್ಯಾಕ್‌ ಇದೆ. ಇವೆರಡೂ ಕಾರುಗಳು ಒಂದು ಫುಲ್‌ ಚಾರ್ಜ್‌ಗೆ 420 ಕಿ.ಮೀ. ಮೈಲೇಜ್‌ ನೀಡಲಿವೆ ಎಂದು ಕಂಪನಿ ಪ್ರತಿಪಾದಿಸಿದೆ.(HT Auto/Sabyasachi Dasgupta)

ಇವುಗಳೆರಡರ ಪರ್ಫಾಮೆನ್ಸ್‌ ಅನನ್ಯವಾಗಿದ್ದು, ಎಲೆಕ್ಟ್ರಿಕ್‌ ವಾಹನಗಳಲ್ಲಿಯೇ ಅತ್ಯುತ್ತಮ ಅನುಭವ ಪಡೆಯಬಹುದಾಗಿದೆ.
icon

(11 / 11)

ಇವುಗಳೆರಡರ ಪರ್ಫಾಮೆನ್ಸ್‌ ಅನನ್ಯವಾಗಿದ್ದು, ಎಲೆಕ್ಟ್ರಿಕ್‌ ವಾಹನಗಳಲ್ಲಿಯೇ ಅತ್ಯುತ್ತಮ ಅನುಭವ ಪಡೆಯಬಹುದಾಗಿದೆ.(HT Auto/Sabyasachi Dasgupta)


ಇತರ ಗ್ಯಾಲರಿಗಳು