ಡಿಸೆಂಬರ್ 16ಕ್ಕೆ ನೇರ ಸಂಚಾರ ಆರಂಭಿಸಲಿರುವ ಬುಧ; ವೃಷಭ, ಮಿಥುನ ಸೇರಿ ಈ 4 ರಾಶಿಯವರ ಜೀವನದಲ್ಲಿ ಧನಾತ್ಮಕ ಬದಲಾವಣೆ
ಗ್ರಹಗಳ ರಾಜಕುಮಾರ ಬುಧನು ಡಿಸೆಂಬರ್ 16 ಮಧ್ಯಾಹ್ನ 2.25ಕ್ಕೆ ವೃಶ್ಚಿಕ ರಾಶಿಯಲ್ಲಿ ನೇರ ಸಂಚಾರವನ್ನು ಆರಂಭಿಸುತ್ತಾನೆ. ಬುಧನ ಈ ನೇರ ಚಲನೆಯಿಂದಾಗಿ ಕೆಲವರ ಜೀವನದಲ್ಲಿ ಧನಾತ್ಮಕ ಬದಲಾವಣೆ ಉಂಟಾಗುತ್ತದೆ. ಈ ಚಲನೆಯಿಂದಾಗಿ ಯಾವ ರಾಶಿಯವರು ಯಾವ ರೀತಿ ಫಲಗಳನ್ನು ಪಡೆಯಲಿದ್ದಾರೆ ನೋಡೋಣ.
(1 / 5)
ಜನವರಿ 4, 2025 ರವರೆಗೆ ಬುಧನು ವೃಶ್ಚಿಕ ರಾಶಿಯಲ್ಲಿ ಉಳಿಯುತ್ತಾನೆ. ನಂತರ ಧನಸ್ಸು ರಾಶಿಗೆ ಚಲಿಸುತ್ತಾನೆ. ಆ ಸಮಯದಲ್ಲಿ ವೃಷಭ, ಮಿಥುನ ಸೇರಿದಂತೆ 4 ರಾಶಿಯವರಿಗೆ ಬುಧನು ವಿವಿಧ ಅನುಕೂಲಗಳನ್ನು ನೀಡುತ್ತಾನೆ.
(2 / 5)
ವೃಷಭ ರಾಶಿ: ಬುಧನ ನೇರ ಸಂಚಾರದಿಂದ ವೃಷಭ ರಾಶಿಯವರಿಗೆ ಶುಭ ಪರಿಣಾಮಗಳು ಉಂಟಾಗುತ್ತವೆ. ಆರ್ಥಿಕವಾಗಿ ಈ ಸಮಯ ಉತ್ತಮವಾಗಿರುತ್ತದೆ. ಬೇರೆಯವರಿಗೆ ನೀವು ಕೊಟ್ಟ ಹಣ ವಾಪಸ್ ಬರಲಿದೆ, ವಿವಿಧ ಮೂಲಗಳಿಂದ ಆರ್ಥಿಕ ಲಾಭವಿದೆ. ಪಾಲುದಾರಿಕೆ ವ್ಯಾಪಾರದಲ್ಲೂ ಉತ್ತಮ ಲಾಭವಿರುತ್ತದೆ. ನಿಮ್ಮ ಎಲ್ಲಾ ಯೋಜನೆಗಳು ಯಶಸ್ವಿಯಾಗುತ್ತದೆ. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಉದ್ಯೋಗಿಗಳು ಕೆಲಸದಲ್ಲಿ ಬೆಂಬಲವನ್ನು ಪಡೆಯುತ್ತಾರೆ. ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯುವ ಸಾಧ್ಯತೆ ಇದೆ. ಕೆಲಸದಲ್ಲಿ ಅಡೆತಡೆಗಳು ಸುಲಭವಾಗಿ ನಿವಾರಣೆಯಾಗುತ್ತವೆ. ಆರೋಗ್ಯ ವು ಕೂಡಾ ಉತ್ತಮವಾಗಿರುತ್ತದೆ.
(3 / 5)
ಮಿಥುನ ರಾಶಿ: ಬುಧದ ನೇರ ಸಂಚಾರದಿಂದಾಗಿ, ಮಿಥುನ ರಾಶಿಯವರಿಗೆ ಪೂರ್ವಜರ ಭೂಮಿ ಮತ್ತು ಆಸ್ತಿಯಿಂದ ಆರ್ಥಿಕ ಲಾಭದ ಸಾಧ್ಯತೆ ಇರುತ್ತದೆ. ಆರ್ಥಿಕ ಅಂಶಗಳು ಬಲವಾಗಿರುತ್ತವೆ. ವೃತ್ತಿ ಜೀವನದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಪ್ರಗತಿಗೆ ಸಹಾಯ ಮಾಡುತ್ತದೆ. ಕೆಲಸದಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ನಿಮ್ಮ ಹಿರಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ನೀವು ಬೆಂಬಲ ಪಡೆಯಬಹುದು. ಈ ಸಮಯವು ನಿಮಗೆ ಅನುಕೂಲಕರವಾಗಿದೆ. ಬುಧ ಗ್ರಹದ ಶುಭ ಪ್ರಭಾವದಿಂದಾಗಿ ಜೀವನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಆದರೆ ವ್ಯವಹಾರದ ವಿಷಯದಲ್ಲಿ ಇತರರನ್ನು ಕುರುಡಾಗಿ ನಂಬಬೇಡಿ.
(4 / 5)
ಸಿಂಹ ರಾಶಿ: ಬುಧನು ನೇರವಾಗಿ ಚಲಿಸುವುದರಿಂದ ಸಿಂಹ ರಾಶಿಯವರಿಗೆ ಸಂತೋಷ ಮತ್ತು ಅವಕಾಶಗಳು ಹೆಚ್ಚಾಗಲಿವೆ. ಕುಟುಂಬದ ಸಂತೋಷಕ್ಕಾಗಿ ಹಣವನ್ನು ಖರ್ಚು ಮಾಡುವಿರಿ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಕೆಲವು ಶುಭ ಕಾರ್ಯಗಳು ಸಂಭವಿಸಬಹುದು ಅಥವಾ ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶವನ್ನು ಪಡೆಯಬಹುದು. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ, ನಿಯಮಿತವಾಗಿ ಯೋಗ ಮಾಡಿ. ಈ ಸಮಯವು ವ್ಯಾಪಾರ ಮತ್ತು ಉದ್ಯೋಗಕ್ಕೆ ಒಳ್ಳೆಯದು. ಹೊಸ ಕೆಲಸ ಹುಡುಕುತ್ತಿರುವವರಿಗೆ ಈ ಸಮಯ ಬಹಳ ಅನುಕೂಲಕರವಾಗಿದೆ. ಒಟ್ಟಿನಲ್ಲಿ ಈ ಸಮಯದಲ್ಲಿ ನೀವು ಧನಾತ್ಮಕ ಫಲಿತಾಂಶ ಪಡೆಯುವಿರಿ.
ಇತರ ಗ್ಯಾಲರಿಗಳು