MI vs KKR: ಚೊಚ್ಚಲ ಶತಕ ಸಿಡಿಸಿ 15 ವರ್ಷಗಳ ದಾಖಲೆ ಸರಿಗಟ್ಟಿದ ವೆಂಕಟೇಶ್ ಅಯ್ಯರ್; ನೂತನ ರೆಕಾರ್ಡ್ ಸೃಷ್ಟಿಸಿದ ರೋಹಿತ್
IPL 2023, Match 22: ಕೆಕೆಆರ್ ವಿರುದ್ಧ ಮುಂಬೈ ಇಂಡಿಯನ್ಸ್ ಭರ್ಜರಿ ಗೆಲುವು ಸಾಧಿಸಿತು. ಐದು ವಿಕೆಟ್ಗಳಿಂದ ಗೆದ್ದ ಮುಂಬೈ ಪಲ್ಟಾನ್ಸ್, ಸತತ 2ನೇ ಜಯ ಸಾಧಿಸಿತು. ಈ ಪಂದ್ಯದಲ್ಲಿ ದಾಖಲಾದ ಪ್ರಮುಖ ದಾಖಲೆಗಳನ್ನು ಈ ಮುಂದೆ ನೋಡೋಣ.
(1 / 6)
ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಪದಾರ್ಪಣೆ ಮಾಡಿದರು. ಕ್ಯಾಪ್ಟನ್ ರೋಹಿತ್ ಶರ್ಮಾ ಐಪಿಎಲ್ ಡೆಬ್ಯೂ ಕ್ಯಾಪ್ ನೀಡಿದರು.(IPL/Twitter)
(2 / 6)
ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ನಾಯಕನಾಗಿ ತಂಡವನ್ನು ಮುನ್ನಡೆಸಿದರು. ಬ್ಯಾಟಿಂಗ್ನಲ್ಲೂ 43 ರನ್ ಗಳಿಸಿ ಗಮನ ಸೆಳೆದರು.(AP)
(4 / 6)
ವೆಂಕಟೇಶ್ ಅಯ್ಯರ್ ಐಪಿಎಲ್ನಲ್ಲಿ ಚೊಚ್ಚಲ ಶತಕ ಸಿಡಿಸಿದರು. ಆ ಮೂಲಕ ಕೆಕೆಆರ್ ತಂಡದ ಪರ ಶತಕ ಸಿಡಿಸಿದ 2ನೇ ಆಟಗಾರ ಎನಿಸಿದ್ದಾರೆ. 15 ವರ್ಷಗಳ ಬಳಿಕ ಈ ಸಾಧನೆ ಮಾಡಿದ್ದಾರೆ.(Twitter)
(5 / 6)
ಕೆಕೆಆರ್ ತಂಡದ ಪರ 2008ರಲ್ಲಿ ಬ್ರೆಂಡನ್ ಮೆಕಲಮ್ ಚೊಚ್ಚಲ ಶತಕ ಸಿಡಿಸಿದ್ದರು. ಆ ಮೂಲಕ ಕೋಲ್ಕತ್ತಾ ತಂಡದ ಪರ ಶತಕ ಸಿಡಿಸಿದ ಮೊದಲ ಆಟಗಾರ ಎನಿಸಿದ್ದರು.(Twitter)
(6 / 6)
ರೋಹಿತ್ ಶರ್ಮಾ ಕೂಡ ಈ ಪಂದ್ಯದಲ್ಲಿ ಹೊಸ ದಾಖಲೆ ಬರೆದರು. ಐಪಿಎಲ್ನಲ್ಲಿ ತಂಡವೊಂದರ ಪರ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದರು. ಈ ಪಂದ್ಯದಲ್ಲಿ 20 ರನ್ ಗಳಿಸಿದ ರೋಹಿತ್, ಕೋಲ್ಕತಾ ಎದುರು ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎನಿಸಿದರು. ಸಿಎಸ್ಕೆ ವಿರುದ್ಧ ಶಿಖರ್ ಧವನ್ 1029 ರನ್, ಕೆಕೆಆರ್ ಎದುರು ಡೇವಿಡ್ ವಾರ್ನರ್ 1018 ರನ್, ಸಿಎಸ್ಕೆ ವಿರುದ್ಧ ವಿರಾಟ್ ಕೊಹ್ಲಿ 979 ರನ್ ಗಳಿಸಿದ್ದಾರೆ.(Twitter)
ಇತರ ಗ್ಯಾಲರಿಗಳು