ಟಿ20 ಕ್ರಿಕೆಟ್ನಲ್ಲಿ ‘ತ್ರಿಶತಕ’ ಬಾರಿಸಿದ ಹಾರ್ದಿಕ್ ಪಾಂಡ್ಯ
ಪಂಜಾಬ್ ಕಿಂಗ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಹಾರ್ದಿಕ್ ಪಾಂಡ್ಯಗಳ ವಿಶೇಷ ಮೈಲಿಗಲ್ಲು ತಲುಪಿದ್ದಾರೆ.
(1 / 5)
ಪಂಜಾಬ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ವಿನೂತನ ದಾಖಲೆ ನಿರ್ಮಿಸಿದ್ದಾರೆ. ಇದು ಅವರ 300ನೇ ಟಿ20 ಪಂದ್ಯವಾಗಿದ್ದು, ಟೀಮ್ ಇಂಡಿಯಾದ ಆಲ್ರೌಂಡರ್ ಮಹತ್ವದ ಮೈಲಿಗಲ್ಲನ್ನು ತಲುಪಿದ್ದಾರೆ.
(2 / 5)
ಹಾರ್ದಿಕ್ ಪಾಂಡ್ಯ 300 ಟಿ20 ಪಂದ್ಯಗಳನ್ನಾಡಿದ್ದು, 5,538 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 91. ಬೌಲಿಂಗ್ನಲ್ಲಿ 203 ವಿಕೆಟ್ ಕಿತ್ತಿದ್ದಾರೆ. ಹಾರ್ದಿಕ್ ಬೆಸ್ಟ್ ಬೌಲಿಂಗ್ 36ಕ್ಕೆ 5 ವಿಕೆಟ್.
(3 / 5)
ಟೀಮ್ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ 114 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 27.87 ಸರಾಸರಿಯಲ್ಲಿ 1,812 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ ಔಟಾಗದೆ 71 ಆಗಿದೆ. 94 ವಿಕೆಟ್ ಉರುಳಿಸಿದ್ದಾರೆ. 4/16 ರ ಅತ್ಯುತ್ತಮ ಅಂಕಿಅಂಶಗಳೊಂದಿಗೆ, ಪಾಂಡ್ಯ ಟಿ20 ಪಂದ್ಯಗಳಲ್ಲಿ ಭಾರತದ 3ನೇ ಅತಿ ಹೆಚ್ಚು ವಿಕೆಟ್ ಪಡೆದವರಾಗಿದ್ದಾರೆ.
(4 / 5)
ಹಾರ್ದಿಕ್ ಐಪಿಎಲ್ ವೃತ್ತಿಜೀವನವೂ ಅಷ್ಟೇ ಪ್ರಭಾವಶಾಲಿಯಾಗಿದೆ, ಮುಂಬೈ ಇಂಡಿಯನ್ಸ್ಗೆ 4 ಮತ್ತು ಗುಜರಾತ್ ಟೈಟಾನ್ಸ್ಗೆ ಒಂದು ಪ್ರಶಸ್ತಿ ಗೆಲ್ಲುವಲ್ಲಿ ಪಾಂಡ್ಯ ಸಿಕ್ಕಾಪಟ್ಟೆ ಶ್ರಮ ಹಾಕಿದ್ದಾರೆ. ಐಪಿಎಲ್ನಲ್ಲಿ 150 ಪಂದ್ಯಗಳಲ್ಲಿ 146.45ರ ಸ್ಟ್ರೈಕ್ ರೇಟ್ನಲ್ಲಿ 2712 ರನ್ ಗಳಿಸಿದ್ದಾರೆ, 10 ಅರ್ಧಶತಕ ಮತ್ತು 77 ವಿಕೆಟ್ಗಳೂ ಸೇರಿವೆ. ಮುಂಬೈ ಇಂಡಿಯನ್ಸ್ ಪರ ಹಾರ್ದಿಕ್ ಪಾಂಡ್ಯ 118 ಪಂದ್ಯಗಳಲ್ಲಿ 25.38 ಸರಾಸರಿಯಲ್ಲಿ 1,853 ರನ್ ಗಳಿಸಿದ್ದು, ಅವರು 29.65 ಸರಾಸರಿಯಲ್ಲಿ 66 ವಿಕೆಟ್ ಕಿತ್ತಿದ್ದಾರೆ.
(5 / 5)
2022ರಲ್ಲಿ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿದಿದ್ದ ಹಾರ್ದಿಕ್ 31 ಪಂದ್ಯಗಳಲ್ಲಿ 37.86ರ ಸರಾಸರಿಯಲ್ಲಿ 833 ರನ್ ಗಳಿಸಿದ್ದಾರೆ. 40.91ರ ಸರಾಸರಿಯಲ್ಲಿ 11 ವಿಕೆಟ್ ಕಬಳಿಸಿದ್ದಾರೆ. ದೇಶೀಯ ಕ್ರಿಕೆಟ್ನಲ್ಲಿ ಬರೋಡಾ ಪರ ಆಡುತ್ತಿರುವ ಪ್ರಸ್ತುತ ಪಾಂಡ್ಯ 36 ಟಿ20 ಪಂದ್ಯಗಳಲ್ಲಿ 39.00 ಸರಾಸರಿಯಲ್ಲಿ 1,014 ರನ್ ಗಳಿಸಿದ್ದಾರೆ. 6 ಅರ್ಧಶತಕಗಳು ಸೇರಿದಂತೆ 132.89 ಸ್ಟ್ರೈಕ್ ರೇಟ್ ಹೊಂದಿದ್ದಾರೆ. 32 ವಿಕೆಟ್ ಕೂಡ ಪಡೆದಿದ್ದಾರೆ.
ಇತರ ಗ್ಯಾಲರಿಗಳು