ಕೇವಲ 1ಕೆಜಿ ವ್ಯತ್ಯಾಸದಿಂದ ಕಂಚು ಕಳೆದುಕೊಂಡ ಮೀರಾಬಾಯಿ ಚಾನು; ಟೋಕಿಯೊ ಬೆಳ್ಳಿ ಪದಕ ವಿಜೇತೆಗೆ ನಿರಾಶೆ
- ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಭಾರತದ ವೇಟ್‌ಲಿಫ್ಟರ್ ಸಾಯಿಕೋಮ್ ಮೀರಾಬಾಯಿ ಚಾನು, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಕೇವಲ 1 ಕೆಜಿ ಅಂತರದಿಂದ ಕಂಚಿನ ಪದಕ ಕಳೆದುಕೊಂಡಿದ್ದಾರೆ. ಪ್ಯಾರಿಸ್‌ನಲ್ಲಿ ಆಗಸ್ಟ್ 7ರ ಬುಧವಾರ ಭಾರತ ಎರಡು ಪದಕ ಗೆಲ್ಲುವ ವಿಶ್ವಾಸವಿತ್ತು. ಅವರಲ್ಲಿ ಚಾನು ಕೂಡಾ ಒಬ್ಬರಾಗಿದ್ದರು.

(1 / 5)
ಮೀರಾಬಾಯಿ ಚಾನು ಈ ಬಾರಿ ಒಲಿಂಪಿಕ್ಸ್ ಆಡುವುದೇ ಅನುಮಾನವಾಗಿತ್ತು. ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಅವರು ಪ್ಯಾರಿಸ್‌ಗೆ ಪ್ರಯಾಣಿಸಿದರು. ವನಿತೆಯರ 49ಕೆಜಿ ವಿಭಾಗದ ಭಾರ ಎತ್ತುವಿಕೆಯಲ್ಲಿ ಚಾನು ಭಾಗಿಯಾದರು. ಕನಿಷ್ಠ ಒಂದು ಪದಕ ಗೆಲ್ಲುವುದು ಖಚಿತ ಎಂದು ಅಭಿಮಾನಿಗಳು ನಿರೀಕ್ಷೆಯಲ್ಲಿದ್ದರು. ಆದರೆ, ಚಾನು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು.(AFP)
(2 / 5)
ಒಟ್ಟು 199 ಕೆಜಿ ಎತ್ತುವ ಮೂಲಕ, 29 ವರ್ಷದ ಭಾರತೀಯ ವೇಟ್‌ಲಿಫ್ಟರ್ ನಾಲ್ಕನೇ ಸ್ಥಾನದೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ವಿದಾಯ ಹೇಳಿದರು. ಟೋಕಿಯೊ ಗೇಮ್ಸ್ ಬೆಳ್ಳಿ ಪದಕ ಗೆದ್ದಿದ್ದ ಚಾನು, ಈ ಬಾರಿ ಕಂಚು ಗೆಲ್ಲುವುದು ಕೂಡಾ ಸಾಧ್ಯವಾಗಲಿಲ್ಲ. ಇದರೊಂದಿಗೆ ಭಾರತದ ಮತ್ತೊಂದು ಪದಕ ಭರವಸೆ ಕಮರಿದೆ.(PTI)
(3 / 5)
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಚೀನಾದ ಹೌ ಝಿಹುಯಿ, 206 ಕೆಜಿ ಭಾರ ಎತ್ತುವ ಮೂಲಕ ಬಂಗಾರ ಉಳಿಸಿಕೊಂಡರು. ರೊಮೇನಿಯಾದ ಮಿಹೇಲಾ ವ್ಯಾಲೆಂಟಿನಾ ಕ್ಯಾಂಬೆ 205 ಕೆಜಿಯೊಂದಿಗೆ ಬೆಳ್ಳಿ ಪಡೆದರು. ಥಾಯ್ಲೆಂಡ್‌ನ ಸುರೋದ್ಚನಾ ಖಂಬಾವೊ ಅವರು 200 ಕೆಜಿ ಭಾರ ಎತ್ತುವ ಮೂಲಕ ಕಂಚು ತಮ್ಮದಾಗಿಸಿಕೊಂಡರು. ಹೀಗಾಗಿ ಕೇವಲ ಒಂದು ಕೆಜಿ ವ್ಯತ್ಯಾಸದಿಂದ ಚಾನು ಪದಕ ವಂಚಿತರಾದರು.(EPA-EFE)
(4 / 5)
ಮೀರಾಬಾಯಿ ತಮ್ಮ ಅಂತಿಮ ಸ್ನ್ಯಾಚ್ ಪ್ರಯತ್ನದಲ್ಲಿ 88 ಕೆಜಿ ಎತ್ತಿದರು. ಮೊದಲ ಪ್ರಯತ್ನದಲ್ಲಿ ಈ ಭಾರ ಎತ್ತಲು ವಿಫಲರಾಗಿದ್ದರು. ಇದು ಸ್ನ್ಯಾಚ್‌ನಲ್ಲಿ ಅವರ ರಾಷ್ಟ್ರೀಯ ದಾಖಲೆಯನ್ನು ಸರಿಗಟ್ಟಿತು.(PTI)
ಇತರ ಗ್ಯಾಲರಿಗಳು