ಮತ್ತೊಮ್ಮೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಲಿದ್ದಾರೆ ಪಾಕಿಸ್ತಾನದ ಸ್ಟಾರ್ ಕ್ರಿಕೆಟರ್ಸ್
- Mohammad Amir : ಟಿ20 ವಿಶ್ವಕಪ್ 2024 ಟೂರ್ನಿಗೂ ಮುನ್ನ ನಿವೃತ್ತಿ ಘೋಷಿಸಿ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ ಪಾಕಿಸ್ತಾನದ ಪ್ರಮುಖ ಕ್ರಿಕೆಟರ್ಗಳು ಮತ್ತೆ ವಿದಾಯ ಹೇಳಲು ಸಜ್ಜಾಗಿದ್ದಾರೆ.
- Mohammad Amir : ಟಿ20 ವಿಶ್ವಕಪ್ 2024 ಟೂರ್ನಿಗೂ ಮುನ್ನ ನಿವೃತ್ತಿ ಘೋಷಿಸಿ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ ಪಾಕಿಸ್ತಾನದ ಪ್ರಮುಖ ಕ್ರಿಕೆಟರ್ಗಳು ಮತ್ತೆ ವಿದಾಯ ಹೇಳಲು ಸಜ್ಜಾಗಿದ್ದಾರೆ.
(1 / 5)
ಪ್ರಸ್ತುತ ಟಿ20 ವಿಶ್ವಕಪ್ 2024ನಲ್ಲಿ ಕಣಕ್ಕಿಳಿಯುವ ಪಾಕಿಸ್ತಾನಿ ಕ್ರಿಕೆಟಿಗರಾದ ಮೊಹಮ್ಮದ್ ಅಮೀರ್, ಇಮಾದ್ ವಾಸೀಂ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲಿದ್ದಾರೆ ಎಂದು ವರದಿಯಾಗಿದೆ. ಅಧಿಕೃತ ಘೋಷಣೆ ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ.
(2 / 5)
ವಿಶ್ವಕಪ್ ಎ ಗುಂಪಿನಲ್ಲಿ ಇಂದು (ಜೂನ್ 16) ನಡೆಯುವ ಐರ್ಲೆಂಡ್ ವಿರುದ್ಧದ ಪಂದ್ಯವೇ ಅಮೀರ್-ಇಮಾದ್ ಇಬ್ಬರಿಗೂ ಪಾಕಿಸ್ತಾನ ಪರ ಕೊನೆಯ ಪಂದ್ಯವಾಗಿರಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.(Getty Images via AFP)
(3 / 5)
ಜೂನ್ 11 ರಂದು ಕೆನಡಾ ವಿರುದ್ಧದ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗೆದ್ದಿದ್ದ ಅಮೀರ್, 2024ರ ಮಾರ್ಚ್ನಲ್ಲಿ ಕಂಬ್ಯಾಕ್ ಮಾಡುವ ಮುನ್ನ 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. ಮತ್ತೊಂದೆಡೆ, ಇಮಾದ್ ವಾಸೀಂ ಕಳೆದ ವರ್ಷ ನವೆಂಬರ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮತ್ತೆ ಮರಳಿದ್ದರು.(Getty Images via AFP)
(4 / 5)
ಇದೀಗ ಇಬ್ಬರು ಸಹ ಮತ್ತೊಮ್ಮೆ ಕ್ರಿಕೆಟ್‌ನಿಂದ ಹಿಂದೆ ಸರಿಯಲು ಸಜ್ಜಾಗಿದ್ದಾರೆ. ವಾಸೀಂ ಭಾರತ-ಕೆನಡಾ ವಿರುದ್ಧದ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಆದರೆ, ಬ್ಯಾಟ್-ಬಾಲ್ ಎರಡರಲ್ಲೂ ಕೊಡುಗೆ ನೀಡಿಲ್ಲ. ಜೂನ್ 9ರಂದು ಭಾರತದ ವಿರುದ್ಧದ ಪಾಕ್ ಸೋಲಿಗೆ ವಾಸೀಂ ಕಾರಣ ಎಂದು ಫ್ಯಾನ್ಸ್ ದೂಷಿಸಿದ್ದಾರೆ.(AP)
ಇತರ ಗ್ಯಾಲರಿಗಳು