ಬಿಗ್ ಬಾಸ್ ಸ್ಪರ್ಧಿಯೊಂದಿಗೆ ಲಿವ್-ಇನ್ ಇದ್ದ ಮಹಿರಾ ಪ್ರೀತಿಯಲ್ಲಿ ಬಿದ್ದ ಸಿರಾಜ್? ಡಿಎಸ್ಪಿ ಡೇಟಿಂಗ್ ಗುಸುಗುಸು ನಿಜವಂತೆ!
- ಟೀಮ್ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಮತ್ತು ಬಾಲಿವುಡ್ ನಟಿ ಮಹಿರಾ ಶರ್ಮಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಇಬ್ಬರ ಡೇಟಿಂಗ್ ಸುದ್ದಿ ನಿಜ ಎಂದು ಇಬ್ಬರ ಹತ್ತಿರದ ಮೂಲಗಳು ಖಚಿತಪಡಿಸಿವೆ.
- ಟೀಮ್ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಮತ್ತು ಬಾಲಿವುಡ್ ನಟಿ ಮಹಿರಾ ಶರ್ಮಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಇಬ್ಬರ ಡೇಟಿಂಗ್ ಸುದ್ದಿ ನಿಜ ಎಂದು ಇಬ್ಬರ ಹತ್ತಿರದ ಮೂಲಗಳು ಖಚಿತಪಡಿಸಿವೆ.
(1 / 10)
ಬಾಲಿವುಡ್ಗೂ ಭಾರತೀಯ ಕ್ರಿಕೆಟ್ಗೂ ಅವಿನಾಭಾವ ನಂಟಿದೆ. ಭಾರತ ತಂಡದ ಬಹುತೇಕ ಆಟಗಾರರು ಬಾಲಿವುಡ್ ನಟಿಯ ಹಿಂದೆ ಬಿದ್ದಿರುವ ಉದಾಹರಣೆಗಳು ನಮ್ಮ ಮುಂದಿವೆ. ಇದೀಗ ಆ ಸಾಲಿಗೆ ಮತ್ತೊಬ್ಬ ಕ್ರಿಕೆಟಿಗ ಸೇರಿದ್ದಾರೆ ಎಂದು ವರದಿಯಾಗಿದೆ.
(2 / 10)
ಬಾಲಿವುಡ್ ನಟಿ ಮಹಿರಾ ಶರ್ಮಾ ಅವರು ಭಾರತ ವೇಗಿ ಮೊಹಮ್ಮದ್ ಸಿರಾಜ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿದೆ. ಅತ್ಯುತ್ತಮ ಬೌಲಿಂಗ್ ಪ್ರದರ್ಶನಕ್ಕೆ ಖ್ಯಾತಿ ಪಡೆದ 29 ವರ್ಷದ ವೇಗಿ, ತನ್ನ ವೈಯಕ್ತಿಕ ಜೀವನದ ಮೂಲಕವೂ ಗಮನ ಸೆಳೆದಿದ್ದಾರೆ.
(3 / 10)
ಬಿಗ್ ಬಾಸ್ ಹಿಂದಿ ಸೀಸನ್ 13ರ ಫೈನಲಿಸ್ಟ್ ಮಹಿರಾ ಶರ್ಮಾ ಅವರೊಂದಿಗೆ ಸಿರಾಜ್ ಪ್ರೀತಿಯ ಬಲೆಗೆ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಸಿರಾಜ್-ಮಹಿರಾ ರಿಲೇಷನ್ಶಿಪ್ನಲ್ಲಿದ್ದಾರೆ ಎಂದು ಹಲವು ತಿಂಗಳಿಂದಲೂ ಹರಿದಾಡುತ್ತಿದೆ.
(4 / 10)
ಆದರೆ ಇಬ್ಬರು ಅಧಿಕೃತವಾಗಿ ಯಾವುದೇ ಮಾಹಿತಿ ಖಚಿತಪಡಿಸಿಲ್ಲ. 2024ರ ನವೆಂಬರ್ನಲ್ಲಿ ಈ ಸುದ್ದಿ ಬೆಳಕಿಗೆ ಬಂತು.
(PTI)(5 / 10)
ಇನ್ಸ್ಟಾಗ್ರಾಂನಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿದ್ದಾರೆ. ಸಿರಾಜ್ ಅವರು ಮಹಿರಾ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಲ್ಲಿ ಒಂದನ್ನು ಲೈಕ್ ಮಾಡಿರುವುದು ಊಹಾಪೋಹಕ್ಕೆ ಕಾರಣವಾಯಿತು. ಇಬ್ಬರು ಪ್ರೀತಿಸುತ್ತಿಸುವುದು ನಿಜ ಎಂದು ಹೇಳಲಾಗುತ್ತಿದೆ.
(PTI)(6 / 10)
ಮಹಿರಾ ಮತ್ತು ಸಿರಾಜ್ ಅವರ ಪ್ರೀತಿ ಅಧಿಕೃತ ಎಂದು ಇಬ್ಬರ ಹತ್ತಿರದ ಮೂಲಗಳು ಖಚಿತಪಡಿಸಿವೆ. ಇಬ್ಬರೂ ಡೇಟಿಂಗ್ ಮಾಡುತ್ತಿದ್ದು, ತಮ್ಮ ಸಂಬಂಧವನ್ನು ರಹಸ್ಯವಾಗಿಟ್ಟಿದ್ದಾರೆ ಎಂದು ಇದೇ ಮೂಲಗಳು ತಿಳಿಸಿವೆ. ಪ್ರಸ್ತುತ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
(AFP)(7 / 10)
ಇತ್ತೀಚೆಗಷ್ಟೇ ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರ ಮೊಮ್ಮಗಳು ಜನೈ ಭೋಸ್ಲೆ ಅವರೊಂದಿಗೆ ಸಿರಾಜ್ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಜನೈ ತನ್ನ ಇನ್ಸ್ಟಾದಲ್ಲಿ ಸಿರಾಜ್ ಜೊತೆಗೆ ಫೋಟೋ ಹಂಚಿಕೊಂಡಿದ್ದೇ ಇದಕ್ಕೆಲ್ಲಾ ಕಾರಣವಾಗಿತ್ತು.
(8 / 10)
(9 / 10)
ಶೆಫಾಲಿ ಜೆರಿವಾಲಾ ಅವರೊಂದಿಗಿನ ಪಾಡ್ಕ್ಯಾಸ್ಟ್ನಲ್ಲಿ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಪರಾಸ್ ಛಾಬ್ರಾ ಅವರು ಮಹಿರಾ ಅವರೊಂದಿಗಿನ ಸಂಬಂಧದ ಸುದ್ದಿಯನ್ನು ದೃಢಪಡಿಸಿದರು. ಬಿಗ್ ಬಾಸ್ನಿಂದ ಹೊರ ಬಂದ ನಂತರ ಕೆಲವು ದಿನಗಳ ಕಾಲ ಲಿವ್-ಇನ್ ರಿಲೇಷನ್ಶಿಪ್ನಲ್ಲಿದ್ದರು ಎಂದು ಅವರು ಹೇಳಿದ್ದರು. ನಂತರ ಬೇರೆಯಾದರು.
ಇತರ ಗ್ಯಾಲರಿಗಳು