ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Manjummel Boys: ಗಳಿಕೆಯಲ್ಲಿ ಹೊಸ ಮೈಲಿಗಲ್ಲು ತಲುಪಿದ ಮಲಯಾಳಂನ ‘ಮಂಜುಮ್ಮೆಲ್‌ ಬಾಯ್ಸ್‌’ ಸಿನಿಮಾ; ಈ ವರೆಗಿನ ಕಲೆಕ್ಷನ್‌ ಎಷ್ಟು?

Manjummel Boys: ಗಳಿಕೆಯಲ್ಲಿ ಹೊಸ ಮೈಲಿಗಲ್ಲು ತಲುಪಿದ ಮಲಯಾಳಂನ ‘ಮಂಜುಮ್ಮೆಲ್‌ ಬಾಯ್ಸ್‌’ ಸಿನಿಮಾ; ಈ ವರೆಗಿನ ಕಲೆಕ್ಷನ್‌ ಎಷ್ಟು?

  • Manjummel Boys Collection: ಮಲಯಾಳಂನಲ್ಲಿ ಇತ್ತೀಚಿನ ಕೆಲ ದಿನಗಳಿಂದ ಒಂದಕ್ಕಿಂತ ಒಂದು ಟಾಪ್‌ ಸಿನಿಮಾಗಳು ಚಿತ್ರಮಂದಿರದಲ್ಲಿ ಸದ್ದು ಮಾಡುತ್ತಿವೆ. ಆ ಪೈಕಿ ಸದ್ಯ ಸುದ್ದಿಯಲ್ಲಿರುವ ಸಿನಿಮಾ ಎಂದರೆ ಅದು ಮಂಜುಮ್ಮೆಲ್‌ ಬಾಯ್ಸ್‌. ಅದ್ಯಾವ ಮಟ್ಟಿಗೆ ಎಂದರೆ, ಮಾಲಿವುಡ್‌ ಸಿನಿಮಾ ಇತಿಹಾಸದಲ್ಲಿಯೇ ಹೊಸ ಮೈಲಿಗಲ್ಲು ಸೃಷ್ಟಿಸಿದೆ ಈ ಸಿನಿಮಾ.

ಕೇರಳದಲ್ಲಿ ಸದ್ಯ ಸೆನ್ಸೆಷನ್‌ ಸೃಷ್ಟಿಸಿರುವ ಮಂಜುಮ್ಮೆಲ್‌ ಬಾಯ್ಸ್‌ ಸಿನಿಮಾ ಬಾಯ್ಮಾತಿನ ಪ್ರಚಾರದಿಂದಲೇ ದೊಡ್ಡ ಪ್ರಚಾರ ಗಿಟ್ಟಿಸಿಕೊಂಡು, ಗಳಿಕೆಯಲ್ಲಿ ದಾಖಲೆ ಬರೆದಿದೆ. 
icon

(1 / 6)

ಚಿದಂಬರಂ ನಿರ್ದೇಶನದಲ್ಲಿ ಮೂಡಿಬಂದಿರುವ ಮಂಜುಮ್ಮೆಲ್‌ ಬಾಯ್ಸ್‌ ಸಿನಿಮಾ, ಕಲೆಕ್ಷನ್‌ ವಿಚಾರದಲ್ಲಿ ಹೊಸ ರೆಕಾರ್ಡ್‌ ತನ್ನದಾಗಿಸಿಕೊಂಡಿದೆ.
icon

(2 / 6)

ಅದ್ಯಾವ ಮಟ್ಟಿಗೆ ಫೆಬ್ರವರಿ 22ರಂದು ಬಿಡುಗಡೆಯಾದ ಈ ಸಿನಿಮಾ ಈವರೆಗೂ ಬಾಕ್ಸ್‌ ಆಫೀಸ್‌ನಲ್ಲಿ ಬರೋಬ್ಬರಿ 200 ಕೋಟಿ ಗಳಿಕೆ ಕಂಡಿದೆ. 
icon

(3 / 6)

ಈ ಮೂಲಕ ಕಳೆದ ವರ್ಷ ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ 150 ಕೋಟಿ ಗಳಿಕೆ ಕಂಡಿದ್ದ ನೈಜ ಘಟನೆ ಆಧರಿತ 2018 ಸಿನಿಮಾದ ದಾಖಲೆಯನ್ನು ಮಂಜುಮ್ಮೆಲ್‌ ಬಾಯ್ಸ್‌ ಮುರಿದಿದೆ. 
icon

(4 / 6)

ಅಚ್ಚರಿಯ ವಿಚಾರ ಏನೆಂದರೆ, ಇದೇ ಸಿನಿಮಾ ತಮಿಳಿಗೂ ಡಬ್‌ ಆಗಿ ಅಲ್ಲಿಯೂ ಬಿಡುಗಡೆಯಾಗಿ ಮೋಡಿ ಮಾಡುತ್ತಿದೆ. ತಮಿಳುನಾಡಿನಲ್ಲೇ 50 ಕೋಟಿ ಗಳಿಕೆ ಕಂಡಿದೆ ಈ ಸಿನಿಮಾ. 
icon

(5 / 6)

ಇನ್ನು ಕೇರಳವೊಂದರಲ್ಲಿಯೇ ಮಂಜುಮ್ಮೆಲ್‌ ಬಾಯ್ಸ್‌ ಸಿನಿಮಾ 70 ಕೋಟಿ ಗಳಿಕೆ ಕಂಡಿದೆ. ಇತ್ತೀಚೆಗಷ್ಟೇ ತೆರೆಕಂಡಿದ್ದ ಪ್ರೇಮಲು ಸಿನಿಮಾ ಸಹ 109 ಕೋಟಿ ಗಳಿಸಿತ್ತು. ಈ ಮೂಲಕ ಮಾಲಿವುಡ್‌ ಅಂಗಳದಿಂದ ಸರಣಿ ಹಿಟ್‌ ಸಿನಿಮಾಗಳ ಹರಿವು ದಿನೇದಿನೆ ಹೆಚ್ಚಾಗುತ್ತಿದೆ. 
icon

(6 / 6)

IPL_Entry_Point

ಇತರ ಗ್ಯಾಲರಿಗಳು