ರುದ್ರಭೂಮಿಯಂತಾದ ವಯನಾಡಿನ ಭೂಕುಸಿತ ಪ್ರದೇಶಕ್ಕೆ ಲೆಫ್ಟಿನಂಟ್ ಕರ್ನಲ್, ನಟ ಮೋಹನ್‌ಲಾಲ್ ಭೇಟಿ PHOTOS
- ಕೇರಳದ ವಯನಾಡು ಅಕ್ಷರಶಃ ರುದ್ರಭೂಮಿಯಾಗಿ ಪರಿವರ್ತನೆಯಾಗಿದೆ. ಭೂಕುಸಿತದಿಂದ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇತ್ತ ಸೇನೆಯ ತಂಡಗಳೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. ಮಣ್ಣಿನ ಅಡಿಯಲ್ಲಿ ಸಿಲುಕಿರುವ ಮೃತ ದೇಹಗಳನ್ನು ಹೊರತೆಗೆಯುವ ಕೆಲಸ ನಡೆಯುತ್ತಿದೆ. ಇದೇ ದುರಂತ ಪ್ರದೇಶಕ್ಕೆ ನಟ, ಲೆಫ್ಟಿನಂಟ್ ಕರ್ನಲ್ ಮೋಹನ್‌ಲಾಲ್ ಭೇಟಿ ನೀಡಿದ್ದಾರೆ.

(1 / 7)
ಲೆಫ್ಟಿನೆಂಟ್ ಕರ್ನಲ್ ಹಾಗೂ ನಟ ಮೋಹನ್ ಲಾಲ್ ಭೂಕುಸಿತ ಸಂಭವಿಸಿದ ವಯನಾಡಿನ ಬೈಲಿ ಸೇತುವೆಗೆ ಇಂದು (ಆ. 03) ಬೆಳಗ್ಗೆ ಭೇಟಿ ನೀಡಿದ್ದಾರೆ.
(2 / 7)
ಮೊದಲಿಗೆ ಮೆಪ್ಪಾಡಿಯ ಮೌಂಟ್ ತಾಬೋರ್ ಶಾಲೆಯಲ್ಲಿನ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿನ ಸ್ಥಿತಿಗತಿ ಗಮನಿಸಿದರು.
(3 / 7)
ಮಿಲಿಟರಿ ಸಮವಸ್ತ್ರದಲ್ಲಿ ತಮ್ಮ 122 ಇನ್ಫಂಟ್ರಿ ಬೆಟಾಲಿಯನ್ ತಂಡದೊಂದಿಗೆ ತೆರಳಿ, ದುರಂತ ಪ್ರದೇಶದ ನೈಜತೆ ಕಂಡರು. ಮೊದಲಿಗೆ ಸೇನಾ ಶಿಬಿರಕ್ಕೆ ತೆರಳಿ, ಅಲ್ಲಿಂದ ದುರಂತ ಪ್ರದೇಶಕ್ಕೆ ಭೇಟಿ ನೀಡಿದರು.
(4 / 7)
ಭೂಕುಸಿತ ಪೀಡಿತ ವಯನಾಡು ಜಿಲ್ಲೆಯ ಪುನರ್ವಸತಿಗಾಗಿ ತಮ್ಮದೇ ವಿಶ್ವಶಾಂತಿ ಫೌಂಡೇಶನ್ ವತಿಯಿಂದ ಶಾಲೆ ಪುನರ್ನಿನಿರ್ಮಾಣ ಮಾಡಲು 3 ಕೋಟಿ ರೂಪಾಯಿಗಳನ್ನು ನೀಡಲಾಗುವುದು ಎಂದು ಮೋಹನ್ ಲಾಲ್ ಭರವಸೆ ನೀಡಿದರು.
(5 / 7)
ವಿಶ್ವಶಾಂತಿ ಫೌಂಡೇಶನ್ ಅನ್ನು ಮೋಹನ್ ಲಾಲ್ ಅವರು ತಮ್ಮ ಪೋಷಕರಾದ ವಿಶ್ವನಾಥನ್ ನಾಯರ್ ಮತ್ತು ಶಾಂತಕುಮಾರಿಯಮ್ಮ ಹೆಸರಿನಲ್ಲಿ 2015 ರಲ್ಲಿ ಸ್ಥಾಪಿಸಿದ್ದಾರೆ.
(6 / 7)
ಇನ್ನು ವಯನಾಡ್ ಮುಂಡಕೈಯಲ್ಲಿ ನಾಪತ್ತೆಯಾದವರ ಶೋಧ ಕಾರ್ಯ ಐದನೇ ದಿನಕ್ಕೆ ಕಾಲಿಟ್ಟಿದೆ. ದುರಂತದಲ್ಲಿ ಇದುವರೆಗೆ 340 ಮಂದಿ ಸಾವನ್ನಪ್ಪಿದ್ದಾರೆ.
ಇತರ ಗ್ಯಾಲರಿಗಳು