ಕನ್ನಡ ಸುದ್ದಿ  /  Photo Gallery  /  Mollywood News Jana Gana Mana To Memories Prithviraj Sukumaran Top 5 Malayalam Movies On Ott Mnk

OTT News: ‘ಆಡುಜೀವಿತಂ’ಗೆ ಒಳ್ಳೇ ರೆಸ್ಪಾನ್ಸ್‌; ಒಟಿಟಿಯಲ್ಲಿ ನೋಡಿ ಪೃಥ್ವಿರಾಜ್‌ ಸುಕುಮಾರನ್‌ ನಟನೆಯ ಟಾಪ್‌ 5 ಸಿನಿಮಾಗಳು

ನಾಯಕ ಅಥವಾ ಖಳನಾಯಕ ಎಂಬ ಭೇದವಿಲ್ಲದೆ ಕಥೆ ಇಷ್ಟವಾದರೆ ಯಾವುದೇ ಪಾತ್ರವನ್ನು ಮಾಡಲು ಸಿದ್ಧರಿರುವ ನಟರು ಬಹಳ ಕಡಿಮೆ. ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಅಂತಹ ವ್ಯಕ್ತಿಗಳಲ್ಲಿ ಒಬ್ಬರು. ಪೃಥ್ವಿರಾಜ್ ಸುಕುಮಾರನ್ ಅಭಿನಯದ ಟಾಪ್‌ ಐದು ಸಿನಿಮಾಗಳನ್ನು ಈ ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು.

ಪೊಲೀಸ್ ಅಧಿಕಾರಿ ಮತ್ತು ನಿವೃತ್ತ ಮಿಲಿಟರಿ ಅಧಿಕಾರಿಯ ನಡುವಿನ ಅಹಂ ಸಮಸ್ಯೆಗಳ ಆಕ್ಷನ್ ಕಥೆಯನ್ನು ಆಧರಿಸಿದ ಮಲಯಾಳಂ  ಚಿತ್ರ ಅಯ್ಯಪ್ಪನುಮ್ ಕೋಶಿಯುಮ್ ಕಮರ್ಷಿಯಲ್ ಹಿಟ್ ಆಗಿತ್ತು. ಪೃಥ್ವಿರಾಜ್ ಸುಕುಮಾರನ್ ಮತ್ತು ಬಿಜು ಮೆನನ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. 
icon

(1 / 5)

ಪೃಥ್ವಿರಾಜ್ ಸುಕುಮಾರನ್ ಅವರ ವೃತ್ತಿಜೀವನದ ಅತ್ಯುತ್ತಮ ಚಲನಚಿತ್ರಗಳಲ್ಲಿ ಜನ ಗಣ ಮನ ಕೂಡ ಒಂದು. ಕೋರ್ಟ್ ರೂಮ್ ಡ್ರಾಮಾ ಎಂದು ಹೇಳಲಾಗುವ ಈ ಚಿತ್ರವು ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಸಾಮಾಜಿಕ ಅಸಮಾನತೆಗಳ ವಿರುದ್ಧ ಹೋರಾಡುವ ವಕೀಲನಾಗಿ ಪೃಥ್ವಿರಾಜ್ ಈ ಚಿತ್ರದಲ್ಲಿ ತಮ್ಮ ನಟನೆಯಿಂದಲೇ ಗಮನ ಸೆಳೆಯುತ್ತಾರೆ. 
icon

(2 / 5)

ಪೃಥ್ವಿರಾಜ್ ಸುಕುಮಾರನ್ ಮತ್ತು ಪಾರ್ವತಿ ಅವರ ಸುಂದರವಾದ ಪ್ರೇಮಕಥೆಯ ಚಿತ್ರ ಎನ್ನು ನಿಂಟೆ ಮೊಯಿದ್ದೀನ್ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಒಟಿಟಿ ಪ್ರೇಕ್ಷಕರು ನೋಡಬಹುದು. ಆರ್.ಎಸ್.ವಿಮಲ್ ಈ ಚಿತ್ರವನ್ನು ನಿರ್ದೇಶಿಸಿದ್ದು, ಜಾತಿ ಮತ್ತು ಧಾರ್ಮಿಕ ಭಿನ್ನಾಭಿಪ್ರಾಯಗಳಿಂದಾಗಿ ದುರಂತವಾಗಿ ಕೊನೆಗೊಂಡ ಜೋಡಿಯ ಕಥೆ ಈ ಚಿತ್ರದ್ದು.
icon

(3 / 5)

ಪೃಥ್ವಿರಾಜ್ ಸುಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ದೃಶ್ಯಂ ಖ್ಯಾತಿಯ ಜೀತು ಜೋಸೆಫ್ ನಿರ್ದೇಶನದ ಮೆಮೊರಿಸ್ ಅತ್ಯುತ್ತಮ ಕ್ರೈಮ್ ಥ್ರಿಲ್ಲರ್ ಚಿತ್ರ ಎಂದು ಪ್ರೇಕ್ಷಕರಿಂದ ಪ್ರಶಂಸಿಸಲ್ಪಟ್ಟಿದೆ. ಮೆಮೊರಿಸ್ ಸಿನಿಮಾವನ್ನು ಒಟಿಟಿ ಪ್ರೇಕ್ಷಕರು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ವೀಕ್ಷಿಸಬಹುದು.
icon

(4 / 5)

ಮೋಹನ್ ಲಾಲ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅಭಿನಯದ 'ಬ್ರೋ ಡ್ಯಾಡಿ' ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ವೀಕ್ಷಣೆ ಮಾಡಬಹುದು. ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಈ ಹಾಸ್ಯ ಚಿತ್ರ ಮೆಚ್ಚುಗೆ ಜತೆಗೆ ಕಮರ್ಷಿಯಲ್‌ ಸಕ್ಸಸ್‌ ಕಂಡಿತ್ತು.
icon

(5 / 5)

ಇತರ ಗ್ಯಾಲರಿಗಳು