ಚಿತ್ರಮಂದಿರದಲ್ಲಿ ಹಿಟ್ ಆಗಿ, ಒಟಿಟಿ ಪ್ರವೇಶಿಸಿದ ಈ ಮಲಯಾಳಂ ಸಿನಿಮಾಗಳನ್ನು ಕನ್ನಡದಲ್ಲೂ ವೀಕ್ಷಿಸಿ
- OTT Malayalam Movies: ನೀವು ಒಟಿಟಿಯಲ್ಲಿ ಹೆಚ್ಚು ಸಿನಿಮಾ ವೀಕ್ಷಣೆ ಮಾಡ್ತೀರಾ? ಅದರಲ್ಲೂ ಮಲಯಾಳಂ ಸಿನಿಮಾ ಪ್ರಿಯರಾ? ಒಟಿಟಿಗಳಲ್ಲಿ ಮಲಯಾಳಂ ಸಿನಿಮಾ ಹುಡುಕಾಡುತ್ತಿದ್ದೀರಾ? ಹಾಗಾದರೆ, ಈ ವಾರ ನಾಲ್ಕು ಮಲಯಾಳಂ ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸಿವೆ. ಕನ್ನಡದಲ್ಲಿಯೂ ಈ ಸಿನಿಮಾಗಳು ಡಬ್ ಆಗಿವೆ.

(2 / 5)
ನುನಕುಳಿ: ದೃಶ್ಯಂ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ನಿರ್ದೇಶಕ ಜಿತು ಜೋಸೆಫ್ ಅವರ ಹೊಸ ಸಿನಿಮಾ ಒಟಿಟಿ ಅಂಗಳಕ್ಕೆ ಬಂದಿದೆ. ಕ್ರೈಮ್ ಕಾಮಿಡಿ ಥ್ರಿಲ್ಲರ್ ಚಿತ್ರ 'ನುನಕುಳಿ' ಶುಕ್ರವಾರ (ಸೆಪ್ಟೆಂಬರ್ 13) Zee5 ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಮಲಯಾಳಂ ಜೊತೆಗೆ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರ ವೀಕ್ಷಣೆ ಮಾಡಬಹುದು.
(3 / 5)
ಪಟ್ಟಾಪಕಲ್: ಸಜೀರ್ ಸದಾಫ್ ಈ ಸಿನಿಮಾ ನಿರ್ದೇಶನದ ಪಟ್ಟಾಪಕಲ್ ಚಿತ್ರವು ಈ ವಾರ ಪ್ರೈಂ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಈ ಡಾರ್ಕ್ ಕಾಮಿಡಿ ಚಿತ್ರವು ಆಗಸ್ಟ್ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಪಟ್ಟಪಾಕಲ್ ಚಿತ್ರದಲ್ಲಿ ಜಾನಿ ಅಮಟೋನಿ, ಆಶಿಕಾ ಅಶೋಕನ್, ಕೃಷ್ಣ ಶಂಕರ್, ರಮೇಶ್ ಪಿಶಾರೋಡಿ ಮತ್ತು ಸುಧಿ ಕೊಪ್ಪ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
(4 / 5)
ಥಳವನ್: ಮಲಯಾಳಂ ಕ್ರೈಮ್ ಥ್ರಿಲ್ಲರ್ ಸಿನಿಮಾ ಥಳವನ್ ಕಳೆದ ಮಂಗಳವಾರ (ಸೆಪ್ಟೆಂಬರ್ 10) Sonyliv ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಮಲಯಾಳಂ ಜೊತೆಗೆ ತೆಲುಗು, ತೆಲುಗು, ಹಿಂದಿ, ತಮಿಳು, ಕನ್ನಡ, ಮರಾಠಿ, ಬೆಂಗಾಲಿ ಭಾಷೆಗಳಲ್ಲಿ ಈ ಸಿನಿಮಾ ವೀಕ್ಷಣೆ ಮಾಡಬಹುದು.
ಇತರ ಗ್ಯಾಲರಿಗಳು