Horror Movies: ಬೆನ್ನಹುರಿಯಲ್ಲಿ ನಡುಕ ಹುಟ್ಟಿಸುವ ಮಲಯಾಳಂನ ಹಾರರ್ ಸಿನಿಮಾಗಳಿವು; ಕ್ಷಣಕ್ಷಣಕ್ಕೂ ರೋಚಕ ತಿರುವು, ಉಚಿತವಾಗಿ ನೋಡಿ
Malayalam Horror Movies: ಮಲಯಾಳಂನಲ್ಲಿ ಸೂಪರ್‌ಹಿಟ್ ಆಗಿರುವ ಕೆಲವು ಹಾರರ್ ಸಿನಿಮಾಗಳನ್ನು ಯಾವುದೇ ಒಟಿಟಿ ಚಂದಾದಾರಿಕೆ ಇಲ್ಲದೆ ಯೂಟ್ಯೂಬ್‌ನಲ್ಲಿ ವೀಕ್ಷಿಸಬಹುದು. ಸ್ಟಾರ್‌ನಟರು ನಟಿಸಿರುವ ಇಂತಹ ಕೆಲವು ಭಯಾನಕ ಸಿನಿಮಾಗಳ ವಿವರ ಇಲ್ಲಿದೆ. ಧೈರ್ಯವಾಗಿ ನೋಡಿ.
(1 / 6)
ಎಜ್ರಾ: ಪೃಥ್ವಿರಾಜ್ ಸುಕುಮಾರನ್, ಪ್ರಿಯಾ ಆನಂದ್ ಮತ್ತು ಟೊವಿನೊ ಥಾಮಸ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಹಾರರ್ ಸಿನಿಮ ಎಜ್ರಾ ಅದೇ ಹೆಸರಿನಲ್ಲಿ ಕನ್ನಡದಲ್ಲಿ ಯೂಟ್ಯೂಬ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಚಿತ್ರವು ಚಿತ್ರಮಂದಿರಗಳಲ್ಲಿ 50 ಕೋಟಿ ರೂ. ಗಳಿಸಿದೆ. ಮ್ಯಾಂಗೋ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಎಜ್ರಾ ಸಿನಿಮಾದ ಕನ್ನಡ ಡಬ್ಬಿಂಗ್ ವರ್ಷನ್ ಇದೆ.
(2 / 6)
ನೀಲಾ ವೆಲಿಚಾಮ್: ಟೊವಿನೊ ಥಾಮಸ್ ಅಭಿನಯದ ಮಲಯಾಳಂ ಭಯಾನಕ ಚಿತ್ರ ನೀಲಾ ವೆಲಿಚಾಮ್ ಸಿನಿಮಾ ಒಟಿಟಿಯಲ್ಲಿದೆ. ಇದು ಆತ್ಮದ ಕಥೆಯಿರುವ ಸಿನಿಮಾ. ಯೂಟ್ಯೂಬ್‌ನಲ್ಲಿ Neelavelicham ಎಂದು ಹುಡುಕಿದರೆ ಈ ಸಿನಿಮಾ ದೊರಕುತ್ತದೆ.
(3 / 6)
ಕೋಲ್ಡ್ ಕೇಸ್: ಪೃಥ್ವಿರಾಜ್ ಸುಕುಮಾರ್ ಅಭಿನಯದ ಕೋಲ್ಡ್ ಕೇಸ್ ವಿಭಿನ್ನ ಭಯಾನಕ ಚಿತ್ರವಾಗಿದೆ. ಈ ಚಿತ್ರವು ಕೊಲೆ ಪ್ರಕರಣದ ಸುತ್ತ ಸುತ್ತುತ್ತದೆ. ಈ ಸಿನಿಮಾವನ್ನು ಕೂಡ ಕನ್ನಡದಲ್ಲಿ ವೀಕ್ಷಿಸಬಹುದು. ಮ್ಯಾಂಗೋ ಮೂವಿ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಸಿನಿಮಾದ ಕನ್ನಡ ಡಬ್ಬಿಂಗ್ ಆವೃತ್ತಿ ಲಭ್ಯವಿದೆ.
(4 / 6)
ಪ್ರೀತಮ್ 2: ಮಲಯಾಳಂನ ಬ್ಲಾಕ್ ಬಸ್ಟರ್ ಸಿನಿಮಾ. ಜಯ ಸೂರ್ಯ ನಾಯಕನಾಗಿ ನಟಿಸಿದ ಈ ಚಿತ್ರ ಕೂಡ ಯೂಟ್ಯೂಬ್‌ನಲ್ಲಿ ಲಭ್ಯವಿದೆ.
(5 / 6)
ನಿಜಾಲ್: ಕುಂಚ ಕೊಬೊಬನ್ ಮತ್ತು ನಯನತಾರಾ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ನಿಜಾಲ್ ಚಲನಚಿತ್ರವು ಯೂಟ್ಯೂಬ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ಇತರ ಗ್ಯಾಲರಿಗಳು