ಮುಂಗಾರು ಇನ್ನೇನು ಶುರು; ಕರ್ನಾಟಕದ ಈ 10 ಹಸಿರು ಮಾರ್ಗದಲ್ಲಿ ಖುಷ್ ಖುಷಿಯಾಗಿ ಡ್ರೈವ್ ಮಾಡಲು ಅಣಿಯಾಗಿ
ಮುಂಗಾರು ಮಳೆ ಶುರುವಾದರೆ ವಿಭಿನ್ನ ಪ್ರವಾಸೋದ್ಯಮ ತೆರೆದುಕೊಳ್ಳುತ್ತದೆ. ಕೆಲವರು ಬೈಕ್, ಮತ್ತೆ ಕೆಲವರು ಕಾರುಗಳಲ್ಲಿ ಡ್ರೈವ್ ಹೊರಟು ಮಳೆ, ಹಸಿರಿನ ಸೊಬಗನ್ನುಸವಿಯುತ್ತಾರೆ. ಕರ್ನಾಟಕದಲ್ಲಿ ಅಂತಹ ಕೆಲ ಮಾರ್ಗಗಳು ಇಲ್ಲಿವೆ.
(1 / 10)
ಶಿವಮೊಗ್ಗದಿಂದ ತೀರ್ಥಹಳ್ಳಿ ಅಲ್ಲಿಂದ ಆಗುಂಬೆ ಮಾರ್ಗವಾಗಿ ಸಂಚರಿಸುವ ಈ ಹಸಿರು ಪಥದ ಪ್ರವಾಸ ಎಂಥವರ ಮೈಮನ ಪುಳಕಿತಗೊಳಿಸುತ್ತದೆ. ಕಾಡಿನ ಮಧ್ಯೆ ಹೋಗುವ ಖುಷಿಯೇ ಬೇರೆ.
(Travel and Trekking)(2 / 10)
ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ರಸ್ತೆ ಕೂಡ ಡ್ರೈವ್‌ಗೆ ಹೇಳಿ ಮಾಡಿಸಿದಂತಿದೆ. ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಇಲ್ಲವೇ ಮೈಸೂರಿನಿಂದ ಸುಳ್ಯ ಮಾರ್ಗದಲ್ಲಿ ಬಂದರೆ ಸುಬ್ರಹ್ಮಣ್ಯ ಮಾರ್ಗದ ಯಾನ ಖುಷಿ ನೀಡಲಿದೆ.
(Team BHP )(3 / 10)
ಶಿವಮೊಗ್ಗದಿಂದ ಆಯನೂರು ಅಲ್ಲಿಂದ ರಿಪ್ಪನ್‌ಪೇಟೆ ಮಾರ್ಗವಾಗಿ ಹೊಸನಗರದ ಕಡೆ ಹೋಗುವ ಯಾನವೂ ನಿಜಕ್ಕೂ ರೋಚಕ ಎನ್ನಿಸಲಿದೆ. ಇದು ಕೂಡ ಅತ್ಯುತ್ತಮ ಕಾಡು ಹಾಗೂ ಹಸುರಿನ ಮಾರ್ಗವೇ.
(4 / 10)
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಿಂದ ಕಾರವಾರ ಕಡೆಗೆ ಹೋಗುವ ಅಣಶಿ ಅರಣ್ಯದೊಳಗಿನ ಯಾನವಂತೂ ನಿಜಕ್ಕೂ ಮನಮೋಹಕವೇ. ನೂರು ಕಿ.ಮಿ ನಷ್ಟ ದೂರವನ್ನು ಕ್ರಮಿಸುವ ಮಧ್ಯೆ ಸಿಗುವ ಅರಣ್ಯದ ಸೊಬಗು ಸಂತಸ ತರಲಿದೆ.
(Roshan Kanade)(5 / 10)
ಮೈಸೂರಿನಿಂದ ಎಚ್‌ಡಿಕೋಟೆ ಮಾರ್ಗವಾಗಿ ಕೇರಳದ ಮಾನಂದವಾಡಿ ಕಡೆಗೆ ಹೋಗುವ ಮಾರ್ಗ ಕೂಡ ಡ್ರೈವ್‌ಗೆ ಹೇಳಿ ಮಾಡಿಸಿದಂತಿದೆ. ನಾಗರಹೊಳೆ ಅಭಯಾರಣ್ಯ, ಕಬಿನಿ ಜಲಾಶಯದ ನೋಟ ಖುಷಿ ಕೊಡಲಿದೆ.
(MK Vishwanath)(6 / 10)
ಚಿಕ್ಕಮಗಳೂರು ಜಿಲ್ಲೆ ದಟ್ಟಾರಣ್ಯದ ನಡುವೆ ಇರುವ ಕಳಸದ ಮಾರ್ಗದಲ್ಲಿ ಡ್ರೈವ್ ಮಾಡಲು ಯಾರೂ ತಪ್ಪಿಸಿಕೊಳ್ಳುವುದಿಲ್ಲ. ಚಿಕ್ಕಮಗಳೂರು ಮೂಡಿಗೆರೆ ಕಳಸ ಮಾರ್ಗದಲ್ಲಿ ಹೊರಟರೆ ಆ ಪ್ರವಾಸದ ಖುಷಿ ನಿಜಕ್ಕೂ ಅವಿಸ್ಮರಣೀಯವೇ ಆಗಲಿದೆ.
(Bynekaadu)(7 / 10)
ಬೆಂಗಳೂರು ಇಲ್ಲವೇ ಮೈಸೂರಿನಿಂದ ಕೊಳ್ಳೇಗಾಲ ಹನೂರು ಮಾರ್ಗವಾಗಿ ಮಲೈ ಮಹದೇಶ್ವರ ಬೆಟ್ಟದ ಕಡೆಗೆ ಹೋಗುವ ತಿರುವುಗಳ ಹಾಗೂ ಹಸಿರಿನ ಪಯಣವೂ ಮೈಮನಗಳಿಗೆ ಮುದ ನೀಡಲಿದೆ.
(8 / 10)
ಮೈಸೂರು ಹುಣಸೂರು ಮಾರ್ಗವಾಗಿ ಮೂರ್ಕಲ್‌ನಿಂದ ನಾಗರಹೊಳೆ ಕೊಡಗಿನ ಕುಟ್ಟದವರೆಗಿನ ಕಾಡಿನ ಡ್ರೈವ್ ವನ್ಯಜೀವಿಗಳು, ಹಸಿರು ನೋಟದ ವೈಭವವೇ ಹೌದು. ಈ ಮಾರ್ಗದಲ್ಲಿ ಸಂಚರಿಸುವ ಯೋಚನೆ ಯೋಜನೆ ಬೆಸ್ಟ್ ಎನ್ನಿಸಲಿದೆ.
(Tapioca)(9 / 10)
ದಾವಣಗೆರೆ ಜಿಲ್ಲೆಯ ಚನ್ನಗಿರಿಯಿಂದ ಅಜ್ಜಂಪುರ ಬೀರೂರು ಇಲ್ಲವೇ ತರೀಕೆರೆ ವರೆಗಿನ ಮಾರ್ಗವೂ ಕೂಡ ಡ್ರೈವ್‌ಗೆ ಚೆನ್ನಾಗಿದೆ.ಅರಣ್ಯದ ಜತೆಗೆ ಕೆರೆಗಳ ನೋಟವೂ ಖಂಡಿತ ಮುದ ನೀಡಲಿದೆ.
(Arun Bharadwaj)ಇತರ ಗ್ಯಾಲರಿಗಳು