ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಬಟ್ಟೆ ಒಣಗ್ತಾ ಇಲ್ವಾ? ಬೇಗ ಬಟ್ಟೆ ಒಣಗಬೇಕು ಅಂದ್ರೆ ಈ ಸಿಂಪಲ್‌ ಟ್ರಿಕ್ಸ್‌ ಫಾಲೋ ಮಾಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಬಟ್ಟೆ ಒಣಗ್ತಾ ಇಲ್ವಾ? ಬೇಗ ಬಟ್ಟೆ ಒಣಗಬೇಕು ಅಂದ್ರೆ ಈ ಸಿಂಪಲ್‌ ಟ್ರಿಕ್ಸ್‌ ಫಾಲೋ ಮಾಡಿ

ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಬಟ್ಟೆ ಒಣಗ್ತಾ ಇಲ್ವಾ? ಬೇಗ ಬಟ್ಟೆ ಒಣಗಬೇಕು ಅಂದ್ರೆ ಈ ಸಿಂಪಲ್‌ ಟ್ರಿಕ್ಸ್‌ ಫಾಲೋ ಮಾಡಿ

  • ಮುಂಗಾರು ಮಳೆಯ ಅರ್ಭಟ ಎಲ್ಲೆಡೆ ಜೋರಾಗಿದೆ. ನಿರಂತರವಾಗಿ ಮಳೆ ಸುರಿಯುತ್ತಿದ್ದು, ಹಲವು ಅಪಾಯಗಳನ್ನು ತಂದೊಡ್ಡಿದೆ. ಈ ನಡುವೆ ಮಳೆರಾಯ ದಿಸೆಯಿಂದ ಬಟ್ಟೆ ಒಣಗಿಸುವುದು ಕಷ್ಟವಾಗಿದೆ. ಈ ಮಳೆಯಲ್ಲಿ ಬಟ್ಟೆ ಒಣಗೋದು ಹೇಗಪ್ಪಾ ಅಂತ ಚಿಂತೆ ಮಾಡೋರಿಗಾಗಿ ಬೇಗ ಬಟ್ಟೆ ಒಣಗುವಂತೆ ಮಾಡಲು ಇಲ್ಲಿದೆ ಒಂದಿಷ್ಟು ಟಿಪ್ಸ್‌.

ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಕೆಲಸ-ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ. ಕೆಲವೆಡೆ ಸೂರ್ಯನ ಬೆಳಕು ಕಾಣದೇ ಹಲವು ದಿನಗಳಾಗಿರುವ ಕಾರಣ ಬಟ್ಟೆ ಒಣಗಿಸುವುದು ಹರಸಾಹಸವಾಗಿದೆ. ಮಳೆಗಾಲದಲ್ಲಿ ಬೇಗ ಬಟ್ಟೆ ಒಣಗಬೇಕು ಅಂದ್ರೆ ಏನ್‌ ಮಾಡ್ಬೇಕು ಅನ್ನೋ ಪ್ರಶ್ನೆ ಕೇಳೋರ ಲಿಸ್ಟ್‌ನಲ್ಲಿ ನೀವು ಇದ್ರೆ ನಿಮಗಾಗಿ ಇಲ್ಲಿದೆ ಒಂದಿಷ್ಟು ಐಡಿಯಾಗಳು. 
icon

(1 / 11)

ಬಟ್ಟೆ ಚೆನ್ನಾಗಿ ಹಾಗೂ ವೇಗ ಒಣಗಬೇಕು ಅಂದ್ರೆ ನೀರಿನಾಂಶ ಕಡಿಮೆ ಇರಬೇಕು. ಹಾಗಾಗಿ ಒಣಗಿಸುವ ಮುನ್ನ ಚೆನ್ನಾಗಿ ಹಿಂಡಿ. ನೀರಿನಾಂಶ ಇಲ್ಲದಂತೆ ಎರಡು, ಮೂರು ಬಾರಿ ಹಿಂಡಿದ ನಂತರವಷ್ಟೇ ಒಣಗಲು ಹಾಕಿ.
icon

(2 / 11)

ಫ್ಯಾನ್‌ ಅಥವಾ ಹೀಟರ್‌ ಇರುವಲ್ಲಿ ಒಣ ಹಾಕುವುದರಿಂದ ಕೂಡ ಬಟ್ಟೆ ಬೇಗ ಒಣಗುತ್ತದೆ. ಸ್ಟ್ಯಾಂಡ್‌ನಲ್ಲಿ ತೆಳುವಾಗಿ ಬಟ್ಟೆ ಹರಡಿ, ಇದನ್ನು ಫ್ಯಾನ್‌ ಅಡಿಯಲ್ಲಿ ಒಣಗಲು ಬಿಡಿ. ಸಾಮಾನ್ಯವಾಗಿ ಭಾರತದಲ್ಲಿ ಹೀಟರ್‌ಗಳ ಬಳಕೆ ಕಡಿಮೆ ಇರುವ ಕಾರಣ ಫ್ಯಾನ್‌ ಕೆಳಗೆ ಒಣಗಿಸಬಹುದು. 
icon

(3 / 11)

ಬಟ್ಟೆ ಬೇಗ ಒಣಗಿಸಲು ನೀವು ಹೇರ್‌ ಡ್ರೈಯರ್‌ ಅನ್ನು ಕೂಡ ಬಳಸಬಹುದು. ಹೇರ್‌ ಡ್ರೈಯರ್‌ ಮೂಲಕ ಬಿಸಿಗಾಳಿ ಹರಿಸುವುದರಿಂದ ಕೂಡ ಬಟ್ಟೆ ಬೇಗ ಒಣಗುತ್ತದೆ. ಇದು ಸರಳ ವಿಧಾನ ಕೂಡ ಒಂದು. ಆದರೆ ದಪ್ಪಗಿನ ಬಟ್ಟೆ ಇದರಿಂದ ಒಣಗುವುದಿಲ್ಲ, ನೆನಪಿರಲಿ. 
icon

(4 / 11)

ಅರೆ ಒಣಗಿದ ಬಟ್ಟೆಯ ಮೇಲೆ ಐರನ್‌ ಮಾಡುವುದರಿಂದ ಕೂಡ ಬೇಗ ಬಟ್ಟೆ ಒಣಗುತ್ತದೆ. ಐರನ್‌ ಮಾಡಿ ಬಟ್ಟೆಯನ್ನು ಒಣ ಹಾಕಬೇಕು. ಇದು ಪರಿಣಾಮಕಾರಿ ಮಾರ್ಗವು ಹೌದು. 
icon

(5 / 11)

ಮನೆಯ ಒಳಗಡೆ ಒಣಗಿಸುವುದು ಬಹಳ ಮುಖ್ಯ. ಮಳೆಗಾಲದಲ್ಲಿ ಯಾವ ಸಮಯಕ್ಕೆ ಹೇಗೆ, ಮಳೆ ಬರುತ್ತದೆ ಹೇಳಲು ಆಗುವುದಿಲ್ಲ. ಆ ಕಾರಣಕ್ಕೆ ತಪ್ಪಿಯೂ ಬಟ್ಟೆಯನ್ನು ಹೊರಗಡೆ ಹಾಕಬಾರದು. ಮನೆಯ ಒಳಗೆ ಬಟ್ಟೆ ಒಣಗಿಸುವುದು ಪ್ರಾಶಸ್ತ್ಯವಾಗಿರಬೇಕು. 
icon

(6 / 11)

ಹ್ಯಾಂಗರ್‌ ಬಳಸಿ ಬಟ್ಟೆಗಳನ್ನು ನೇತು ಹಾಕಬೇಕು. ಸ್ವಲ್ಪ ದೂರ ದೂರದಲ್ಲಿ ಬಟ್ಟೆಗಳನ್ನು ನೇತು ಹಾಕುವುದರಿಂದ ಬಟ್ಟೆಗಳು ಬೇಗನೆ ಒಣಗುತ್ತವೆ. 
icon

(7 / 11)

ಸ್ಟೀಲ್‌ ಸ್ಟ್ಯಾಂಡ್‌ಗಳಲ್ಲಿ ಬಟ್ಟೆ ಒಣಗಿಸುವುದು ಕೂಡ ಮಳೆಗಾಲಕ್ಕೆ ಹೇಳಿ ಮಾಡಿಸಿದ್ದು. ಇದರಲ್ಲಿ ತೆಳುವಾಗಿ ಬಟ್ಟೆ ಹರಡಿ ಫ್ಯಾನ್‌ ಕೆಳಗೆ ಸ್ಟ್ಯಾಂಡ್‌ ಇರಿಸುವುದರಿಂದ ಬಟ್ಟೆಗಳು ಬೇಗನೆ ಒಣಗುತ್ತವೆ. 
icon

(8 / 11)

ಡ್ರೈಯರ್‌ ಬಳಕೆಯಿಂದ ಕೂಡ ಬಟ್ಟೆ ಬೇಗ ಒಣಗುತ್ತದೆ. ನೀವು ವಾಷಿಂಗ್‌ ಮಷಿನ್‌ನಲ್ಲಿ ಬಟ್ಟೆ ಒಗೆದಿರಲಿ ಅಥವಾ ಕೈಯಿಂದ ಬಟ್ಟೆ ಒಗೆದಿರಲಿ. ಒಗೆದ ಬಟ್ಟೆಗಳನ್ನು ಡ್ರೈ ಮಾಡುವುದು ಅತಿ ಮುಖ್ಯ. ಇದರಿಂದ ನೀರೆಲ್ಲಾ ಹಿಂಡಿ ಹೋಗುವ ಕಾರಣ ಬಟ್ಟೆಗಳು ಬೇಗ ಒಣಗುತ್ತವೆ.
icon

(9 / 11)

ಹ್ಯುಮಿಡಿಫೈರ್‌ ಬಳಕೆಯು ರೂಮಿನ ತೇವಾಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಕೂಡ ಬಟ್ಟೆ ವೇಗವಾಗಿ ಒಣಗಲು ನೆರವಾಗುವ ತಂತ್ರವಾಗಿದೆ. 
icon

(10 / 11)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(11 / 11)

ಇತರ ಗ್ಯಾಲರಿಗಳು